ಬೆಂಗಳೂರು: ರಾಜ್ಯದಲ್ಲಿ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಪ್ರಸ್ತುತ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವು ಈಗಾಗಲೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಯೋಜನೆ ಯಶಸ್ವಿಯಾಗಿದೆ. ಈ ನಡುವೆ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಇದೀಗ ಕಾಂಗ್ರೆಸ್ ಸರ್ಕಾರ “ಶ್ರಮ ಶಕ್ತಿ” ಯೋಜನೆಯನ್ನು ಜಾರಿಗೆ ತಂದಿದೆ.
ಈ ಶ್ರಮ ಶಕ್ತಿ ಯೋಜನೆಯ ಮೂಲಕ 50 ಸಾವಿರ ರೂ. ಸಾಲ ಸೌಲಭ್ಯ ನೀಡಲು ಸರ್ಕಾರ ಮುಂದಾಗಿದೆ. ಈ ಯೋಜನೆಯಡಿ 250000 ರೂ. ಮರುಪಾವತಿ ಮಾಡಿದರೆ, ಉಳಿದ 25000 ರೂ. ಸಹಾಯಧನವನ್ನು ನೀಡಲು ಸರ್ಕಾರ ಮುಂದಾಗಿದೆ. ಅಧಿಕೃತ ವೆಬ್ ಸೈಟ್ www.kmdcoonline.karnataka.gov.in ಗೆ ಭೇಟಿ ನೀಡುವ ಮೂಲಕ ರಾಜ್ಯ ಸರ್ಕಾರದ ಶ್ರಮ ಶಕ್ತಿ ಯೋಜನೆಯ ಪ್ರಯೋಜನವನ್ನು ಪಡೆಯಬಹುದು.
ಯೋಜನೆಯ ಹೆಸರು:
ಶ್ರಮ ಶಕ್ತಿ ಯೋಜನೆ
ಉದ್ದೇಶ:
ನಿರುದ್ಯೋಗಿ ಯುವಕರು ತಮ್ಮ ವ್ಯವಹಾರಗಳನ್ನು ಪ್ರಾರಂಭಿಸಲು
ಬೇಕಾಗುವ ದಾಖಲೆಗಳು:
- ಪಾಸ್ಪೋರ್ಟ್ ಗಾತ್ರದ ಫೋಟೋ
- ಆಧಾರ್ ಕಾರ್ಡ್
- ಆದಾಯ ಪ್ರಮಾಣಪತ್ರ
- ಯೋಜನಾ ವರದಿ
- ಶ್ಯೂರಿಟಿ ಸ್ವಯಂ ಘೋಷಣೆ ನಮೂನೆ
- ಸ್ವಯಂ ಘೋಷಣೆ ನಮೂನೆ
- ಬ್ಯಾಂಕ್ ಖಾತೆ ವಿವರಗಳು
- ಕರ್ನಾಟಕದ ನಿವಾಸ ಪುರಾವೆ
- ಆನ್ ಲೈನ್ ಅರ್ಜಿ ನಮೂನೆ
- ಜಾತಿ ಪ್ರಮಾಣ ಪತ್ರ
- ಅಲ್ಪಸಂಖ್ಯಾತರ ಪ್ರಮಾಣಪತ್ರ
ಶ್ರಮ ಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು..?
- ಕರ್ನಾಟಕ ರಾಜ್ಯದ ಶಾಶ್ವತ ನಿವಾಸಿಗಳು ಅರ್ಜಿ ಸಲ್ಲಿಸಬಹುದು.
- ಅರ್ಜಿದಾರರ ವಯಸ್ಸು 18 ರಿಂದ 55 ವರ್ಷವಾಗಿರಬೇಕು.
- ಇನ್ನು ವಾರ್ಷಿಕ ಆದಾಯವು 3 .50 ಲಕ್ಷಕ್ಕಿಂತ ಹೆಚ್ಚಿರಬಾರದು.
- ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮಾನವಶಕ್ತಿ ಯೋಜನೆ 2023-24 ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಆಂಗ್ಲೋ ಇಂಡಿಯನ್ ಮತ್ತು ಪಾರ್ಸಿ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು.
- ಅರ್ಜಿದಾರರ ಕುಟುಂಬದಲ್ಲಿ ಯಾವುದೇ ವ್ಯಕ್ತಿಯು ಸರ್ಕಾರೀ ನೌಕರಿಯನ್ನು ಹೊಂದಿರುವಂತಿಲ್ಲ.
- ಇನ್ನು ಅರ್ಜಿದಾರರು KMDC ಸಾಲಗಳನ್ನು ಮರುಪಾವತಿ ಮಾಡದಿರುವ ಆರೋಪ ಇರಬಾರದು.
- ಇನ್ನು https://kmdc.karnataka.gov.in/?utm_source=DH-MoreFromPub&utm_medium=DH-app&utm_campaign=DH ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅಗತ್ಯ ದಾಖಲೆಯನ್ನು ನೀಡಿ ಅರ್ಜಿ ಸಲ್ಲಿಸಬಹುದು.