ಚಿಕ್ಕಬಳ್ಳಾಪುರ:- ಚಿಕ್ಕಬಳ್ಳಾಪುರ ನಗರದ ಒಎಂಬಿ ರಸ್ತೆಯಲ್ಲಿ ಸಾಲ ತೀರಿಸಲು ವೃದ್ದೆಯ ಚಿನ್ನಾಭರಣ ಕದ್ದಿರುವ ಘಟನೆ ಜರುಗಿದೆ.
ಅರ್ಚನಾ ಹಾಗೂ ಮಂಜುಳಾ ಸಿಕ್ಕಿಬಿದ್ದ ಕಳ್ಳಿಯರು. ಅರ್ಚನಾ, ಅಜ್ಜಿಯ ಮನೆಪಕ್ಕದಲ್ಲೇ ಬಾಡಿಗೆ ಇದ್ದು, ಈ ಕೃತ್ಯ ಎಸಗಿದ್ದಾಳೆ. ವೃದ್ದೆ ಬಾಡಿಗೆ ಕೊಟ್ಟಿದ್ದ ಅಂಗಡಿ ಓನರ್, ಸ್ನೇಹಿತೆಗೆ ಬುರ್ಖಾ ತೊಡಿಸಿ ಅಜ್ಜಿ ಚಿನ್ನಾಭರಣ ಎಗರಿಸಿದ್ದು, ಇದೀಗ ಇಬ್ಬರು ಸಿಕ್ಕಿಬಿದ್ದಿದ್ದು, ಜೈಲು ಕಂಬಿ ಎಣಿಸುತ್ತಿದ್ದಾರೆ
ಫೆಬ್ರವರಿ 21 ಸಂಜೆ 6 ಗಂಟೆ ಸುಮಾರು ಇನ್ನೇನು ಸೂರ್ಯ ಮುಳುಗಿ ಕತ್ತಲು ಆವರಿಸಿತ್ತು. ಅಷ್ಟರಲ್ಲೇ ಚಿಕ್ಕಬಳ್ಳಾಪುರ ನಗರದ ಒಎಂಬಿ ರಸ್ತೆಯಲ್ಲಿ ಒಂಟಿಯಾಗಿ ವಾಸವಾಗಿದ್ದ ವೃದ್ದೆ ಗೌರಮ್ಮ ಮನೆಗೆ ಬುರ್ಖಾ ಧರಿಸಿ ಎಂಟ್ರಿ ಕೊಟ್ಟದ್ದ ಮಹಿಳೆ, ಲಗ್ನಪತ್ರಿಕೆ ನೀಡಲು ಬಂದಿದ್ದೇನೆಂದು ಅಜ್ಜಿಯ ಚಿನ್ನಾಭರಣ ದೋಚಿಕೊಂಡು ಹೋಗಿದ್ದಾಳೆ.
ಬಳಿಕ ಬುರ್ಖಾಧಾರಿ ಮಹಿಳೆ, ಕೆಲಸ ಸಲೀಸಾಯಿತು ಎಂದು ಅಜ್ಜಿ ಬಳಿಯ ಚಿನ್ನಾಭರಣ ಕಿತ್ತುಕೊಂಡು ಅಲ್ಲಿಂದ ಜಾಗ ಖಾಲಿ ಮಾಡಿದ್ದಾಳೆ. ಇನ್ನು ಬುರ್ಖಾಧಾರಿ ಮಹಿಳೆ ಹೋಗ್ತಿದ್ದಂತೆ ಮನೆಯಿಂದ ಹೊರಬಂದ ಅಜ್ಜಿ ಅಕ್ಕ ಪಕ್ಕದವರಿಗೆ ವಿಚಾರ ತಿಳಿಸಿದ್ದಾಳೆ. ವಿಷಯ ತಿಳಿದು ಎಸ್ಪಿ ಕುಶಾಲ್ ಚೌಕ್ಸಿ ಸಮೇತ ಎಲ್ಲಾ ಪೊಲೀಸ್ ಆಧಿಕಾರಿಗಳು ಅಜ್ಜಿ ಮನೆಗೆ ಭೇಟಿ ಕೊಟ್ಟು ಪರಿಶೀಲಿಸಿದರು. ಆಗ ಸಿಕ್ಕಿಬಿದ್ದಿದ್ದಾಳೆ.