ರಾಸಾಯನಿಕಗಳಿಂದ ತಯಾರಿಸಿದ ಗಂಧದ ಕಡ್ಡಿ ಹೊಗೆ ದೇಹಕ್ಕೆ ಅನಾರೋಗ್ಯಕರ ಎಂಬುದು ಸತ್ಯ. ಆದರೆ ನೈಸರ್ಗಿಕ ಉತ್ಪನ್ನಗಳಿಂದ ತಯಾರು ಮಾಡಿದ ಗಂಧದ ಕಡ್ಡಿಗಳು ಆರೋಗ್ಯಕ್ಕೆ ಯಾವುದೇ ತೊಂದರೆಯನ್ನು ಉಂಟು ಮಾಡುವುದಿಲ್ಲ. ಇವುಗಳಿಂದ ಬರುವ ಸುವಾಸನೆ ಕೂಡ ನಿಮ್ಮ ಮನಸ್ಸಿನ ತಾಜಾತನವನ್ನು ಹೆಚ್ಚು ಮಾಡುತ್ತದೆ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.
ಧೂಮಪಾನ ಮಾಡೋದ್ರಿಂದ ಅನೇಕ ಆರೋಗ್ಯ ಸಮಸ್ಯೆಗಳು ಬರುತ್ತದೆ. ಧೂಮಪಾನ ಮಾಡುವುದಷ್ಟೇ ಅಲ್ಲ, ಆ ಹೊಗೆಯನ್ನು ಉಸಿರಾಡುವುದರಿಂದಲೂ ಹಲವು ಸಮಸ್ಯೆಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತದೆ. ಇನ್ನು ಧೂಮಪಾನ ಮಾಡುವವರಿಗಿಂತ ಅದರ ಹೊಗೆ ತೆಗೆದುಕೊಳ್ಳುವವರಿಗೆ ಹೆಚ್ಚು ಅಪಾಯಕಾರಿ ಎಂದು ಈಗಾಗಲೇ ಹಲವು ವರದಿಗಳು ಹೇಳಿವೆ.
ಆದರೆ ಇಲ್ಲೊಂದು ಶಾಕಿಂಗ್ ವರದಿ ಬಹಿರಂಗವಾಗಿದೆ ನೋಡಿ. ಸಹಜವಾಗಿ ಧೂಪದ ಹೊಗೆ ಪ್ರತಿಯೊಬ್ಬರ ಮನೆಯಲ್ಲೂ ಇರುವುದು ಗ್ಯಾರಂಟಿ. ಮನೆಯಲ್ಲಿ ಅಥವಾ ದೇವಾಲಯಗಳಲ್ಲಿ ಪೂಜೆಯ ಸಮಯದಲ್ಲಿ ಯಾವಾಗಲೂ ಅಗರಬತ್ತಿಗಳನ್ನು ಬೆಳಗಿಸಲಾಗುತ್ತದೆ. ಇವುಗಳಿಂದ ಬರುವ ಹೊಗೆಯು ಪರಿಮಳಯುಕ್ತವಾಗಿದ್ದು ಮನಸ್ಸಿಗೂ ಶಾಂತಿಯನ್ನು ತರುತ್ತದೆ.
ಅದಕ್ಕಾಗಿಯೇ ಅನೇಕ ಜನರು ಉತ್ತಮ ಪರಿಮಳವನ್ನು ಹೊಂದಿರುವ ಅಗರಬತ್ತಿಗಳನ್ನು ಆಯ್ಕೆ ಮಾಡಿಕೊಂಡು ಪೂಜಾ ಕೋಣೆಯಲ್ಲಿ ಬೆಳಗಿಸುತ್ತಾರೆ. ಆದರೆ ಅಗರಬತ್ತಿ ಹೊಗೆ ಸಿಗರೇಟಿನ ಹೊಗೆಗಿಂತಲೂ ಹೆಚ್ಚು ಹಾನಿಕಾರಕ ಎಂದು ನಿಮಗೆ ಗೊತ್ತಾ. ಹೌದು, ಇದು ಕೇಳಲು ಸ್ವಲ್ಪ ಆಘಾತಕಾರಿಯಾದರೂ, ಇದೇ ಸತ್ಯ. ನೆರೆಯ ದೇಶದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಅಗರತಬತ್ತಿ ರಹಸ್ಯ ಬಹಿರಂಗವಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಚೀನಾದ ಸಂಶೋಧನಾ ಸಂಸ್ಥೆಯೊಂದು ಅಗರ ಬತ್ತಿಗಳ ಮೇಲೆ ಸಂಶೋಧನೆ ನಡೆಸಿ, ಕಡ್ಡಿಗಳನ್ನು ಹಚ್ಚಿದಾಗ, ಕಡ್ಡಿಗಳಿಂದ ಹೊರಹೊಮ್ಮುವ ಹೊಗೆಯಿಂದ ಬರುವ ಸಣ್ಣ ಕಣಗಳು ಗಾಳಿಯಲ್ಲಿ ಬಿಡುಗಡೆಯಾಗುತ್ತವೆ ಎಂದು ಕಂಡುಹಿಡಿದಿದೆ. ಹೊಗೆಯಿಂದ ಬರುವ ಅಣುಗಳಲ್ಲಿ ವಿಷಕಾರಿ ಅಣುಗಳು ಇರುವುದು ಸಮೀಕ್ಷೆಯಲ್ಲಿ ಕಂಡುಬಂದಿದೆ.
ಅವು ನಮ್ಮ ದೇಹದ ಪ್ರತಿಯೊಂದು ಜೀವಕೋಶಕ್ಕೂ ಹೋಗುತ್ತವೆ. ಇದರಿಂದ ನಮ್ಮ ದೇಹಕ್ಕೆ ಹಾನಿ ಮಾಡುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಕೆಲವೊಮ್ಮೆ ಅವು ಕ್ಯಾನ್ಸರ್ಗೂ ಕಾರಣವಾಗಬಹುದು ಎಂದು ಹೇಳಲಾಗಿದೆ. ಅಗರಬತ್ತಿಯ ಹೊಗೆಯಲ್ಲಿ ಮೂರು ರೀತಿಯ ವಿಷಕಾರಿ ಅಂಶಗಳಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಅದು ಕಿಲ್ಲರ್ ಕ್ಯಾನ್ಸರ್ಗೆ ಕಾರಣವಾಗುತ್ತದೆ ಎನ್ನಲಾಗಿದೆ.
ಮೂರು ವಿಧದ ವಿಷಕಾರಿ ಅಂಶಗಳು – ಮ್ಯುಟಾಜೆನಿಕ್, ಜಿನೋಟಾಕ್ಸಿಕ್ ಮತ್ತು ಸೈಟೋಟಾಕ್ಸಿಕ್. ಈ ಅಂಶಗಳು ನಮ್ಮ ದೇಹದಲ್ಲಿ ವಿವಿಧ ಕಾಯಿಲೆಗಳು ಉತ್ಪತ್ತಿಯಾಗಲು ಕಾರಣವಾಗಬಹುದು. ಇವು ಕ್ಯಾನ್ಸರ್ ಕೋಶಗಳ ಬೆಳವಣಿಗೆಗೆ ಮತ್ತು ಶ್ವಾಸಕೋಶದ ಕಾಯಿಲೆಗಳ ಬೆಳವಣಿಗೆಗೂ ಕಾರಣವಾಗಬಹುದು ಎಂದು ಹೇಳಲಾಗುತ್ತದೆ.
ಇನ್ನು ಈ ಹೊಗೆ ನಮ್ಮ ದೇಹವನ್ನು ರೋಗಗಳಿಗೆ ತುತ್ತಾಗುವಂತೆ ಮಾಡುತ್ತದೆ. ಸಾಮಾನ್ಯವಾಗಿ ಅಗರ ಬತ್ತಿ ಅಂತ ಅಲ್ಲ, ಯಾವುದೇ ಹೊಗೆಯನ್ನು ಒಮ್ಮೆ ಉಸಿರಾಡಿದರೆ, ಅದು ನೇರವಾಗಿ ನಿಮ್ಮ ಶ್ವಾಸಕೋಶಕ್ಕೆ ಹೋಗುತ್ತದೆ. ಇದು ತಕ್ಷಣ ಶ್ವಾಸಕೋಶದಲ್ಲಿ ಬೆಂಕಿ ಹೊತ್ತಿಕೊಂಡಂತೆ ಭಾಸವಾಗುತ್ತದೆ. ಅದರಲ್ಲೂ ಅಗರಬತ್ತಿ ಹೊಗೆಯಲ್ಲಿರುವ 64 ಬಗೆಯ ವಿಷಕಾರಿ ವಸ್ತುಗಳು ಉಸಿರಾಟದ ಕಾಯಿಲೆಗಳಿಗೆ ಕಾರಣವಾಗುತ್ತವೆ ಎಂದು ಹೇಳಲಾಗುತ್ತದೆ.
ಅಗರಬತ್ತಿಗಳ ತಯಾರಿಕೆಯಲ್ಲಿ ಸುಗಂಧ ದ್ರವ್ಯಕ್ಕಾಗಿ ಬಳಸುವ ಕೃತಕ ಸುಗಂಧ ದ್ರವ್ಯಗಳು ಮತ್ತು ಇತರ ವಸ್ತುಗಳು ಹೊಗೆಯ ಮೂಲಕ ಮಾನವ ದೇಹವನ್ನು ಪ್ರವೇಶಿಸಿ ಕ್ಯಾನ್ಸರ್ಗೆ ಕಾರಣವಾಗುತ್ತವೆ ಎಂದು ಹೇಳಲಾಗುತ್ತದೆ.