ಪುರುಷರಿಗಿಂತ ಮಹಿಳೆಯರು ಹೆಚ್ಚು ಕಾಲ ನಿದ್ರಿಸಬೇಕು ಎಂದು ಹೇಳಲಾಗುತ್ತದೆ. ಸರಿಯಾಗಿ 8 ಗಂಟೆಗಳ ಕಾಲ ಮಲಗಿದ್ದರೂ ಸುಸ್ತು, ನಿಶಕ್ತಿ ಅಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ಮಹಿಳೆಯರು ಹೆಚ್ಚು ನಿದ್ರೆ ಮಾಡಬೇಕಾಗುತ್ತದೆ.
ಪಪ್ಪಾಯಿ ಸೇವನೆಯಿಂದಾಗುವ ಆರೋಗ್ಯ ಬೆನಿಫಿಟ್ ಎಷ್ಟು ಗೊತ್ತಾ!?
ಪುರುಷರಿಗೆ 7-8 ಗಂಟೆ ಸಮಯದ ನಿದ್ರೆ ಸಾಕಾಗುತ್ತದೆ. ಆದರೆ ಮಹಿಳೆಯರು ಪುರುಷರಿಗಿಂತ ಹೆಚ್ಚಾಗಿ ನಿದ್ರೆ ಮಾಡುವುದು ಉತ್ತಮ. ಈ ಬಗ್ಗೆ ಇಂಡಿಯಾ ಟುಡೇಗೆ ಮುಂಬೈನ ಡಾ ಬಾಬಾಸಾಹೇಬ್ ಅಂಬೇಡ್ಕರ್ ಸ್ಮಾರಕ ಆಸ್ಪತ್ರೆಯ ಡಾ ಸೋನಮ್ ಸಿಂಪತ್ವಾರ್ ಅವರು ವಿವರಿಸಿದ್ದಾರೆ. “ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಸಾಮಾನ್ಯವಾಗಿ ಹೆಚ್ಚಿನ ನಿದ್ರೆಯ ಅವಶ್ಯಕತೆಯಿದೆ ಎಂದು ಹಲವಾರು ಅಧ್ಯಯನಗಳು ತಿಳಿಸಿವೆ.
ಪ್ರತಿಯೊಬ್ಬರಿಗೂ ನಿದ್ರೆ ಯಾಕೆ ಮುಖ್ಯ?: ಉತ್ತಮ ಆರೋಗ್ಯಕ್ಕೆ ನಿದ್ರೆ ಅತ್ಯಂತ ನಿರ್ಣಾಯಕ ಅಂಶವಾಗಿದೆ. ಉತ್ತಮ ನಿದ್ರೆ ಮೆದುಳಿನ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಉತ್ತಮ ಹೃದಯದ ಆರೋಗ್ಯ, ಚಯಾಪಚಯ, ಚರ್ಮ, ಕೂದಲಿನ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ನೀಡುತ್ತದೆ. ನಿಮ್ಮ ಭಾವನೆಗಳನ್ನು ಉತ್ತಮವಾಗಿ ನಿರ್ವಹಿಸಲು ಸಹ ನಿದ್ರೆ ಮುಖ್ಯ. ಆತಂಕ ಮತ್ತು ಖಿನ್ನತೆಯ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಉತ್ತಮ ಜೀವನಕ್ಕೆ ಸಹಾಯ ಮಾಡುತ್ತದೆ. ಸರಿಯಾದ ನಿದ್ರೆ ಇಲ್ಲದಿದ್ದರೆ, ಬುದ್ಧಿಮಾಂದ್ಯತೆ, ನರ ಸಂಬಂಧಿತ ಕಾಯಿಲೆಗಳು, ಬೊಜ್ಜು, ಹೃದ್ರೋಗ ಸಮಸ್ಯೆಗಳು ಕಾಣಿಸುತ್ತದೆ. ವಯಸ್ಸಿಗೆ ತಕ್ಕಂತೆ ನಿದ್ರೆಯ ಅವಧಿ ಮುಖ್ಯ. ನವಜಾತ ಶಿಶುಗಳು, ಪುಟ್ಟ ಮಕ್ಕಳಿಗೆ 10 ಗಂಟೆ ಕಾಲ ನಿದ್ರೆ ಅತ್ಯವಶ್ಯಕ. ಇದರಿಂದ ಅವರ ಬೆಳವಣಿಗೆಗೆ ಸಹಾಯವಾಗುತ್ತದೆ. ವಯಸ್ಕರಿಗೆ ಸಾಮಾನ್ಯವಾಗಿ ಪ್ರತಿ ರಾತ್ರಿ 7-9 ಗಂಟೆಗಳ ನಿದ್ರೆ ಬೇಕಾಗುತ್ತದೆ. ವಯಸ್ಸಾದ ವೃದ್ಧರಿಗೆ ಸುಮಾರು 7-8 ಗಂಟೆಗಳ ಕಾಲ ನಿದ್ರೆ ಬೇಕು. 40ರ ನಂತರ ನಿದ್ರಾವಸ್ಥೆಯಲ್ಲಿ ಸಾಮಾನ್ಯವಾಗಿ ಬದಲಾವಣೆಗಳು ಇರುತ್ತದೆ ಎಂದು ವೈದ್ಯರು ಹೇಳಿದ್ದಾರೆ
ಮಹಿಳೆಯರಿಗೆ ಹೆಚ್ಚು ನಿದ್ರೆ ಅತ್ಯವಶ್ಯಕ: ಪುರುಷರಿಗಿಂತ ಮಹಿಳೆಯರಿಗೆ ಸುಮಾರು 20 ನಿಮಿಷ ಹೆಚ್ಚು ನಿದ್ರೆ ಬೇಕು ಎಂದು ಇತ್ತೀಚಿನ ಅಧ್ಯಯನಗಳು ತಿಳಿಸಿವೆ. ಮಹಿಳೆಯರಲ್ಲಿ ನಿದ್ರೆ ಮತ್ತು ನಿದ್ರಾಹೀನತೆಗಳ ಬಗ್ಗೆ ಕಡಿಮೆ ಮಾಹಿತಿ ಲಭ್ಯವಿದ್ದರೂ, ದೈನಂದಿನ ಚಟುವಟಿಕೆಗಳಿಂದ ಚೇತರಿಸಿಕೊಳ್ಳಲು ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ನಿದ್ರೆ ಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಮಹಿಳೆಯರು ನಿದ್ರಾಹೀನತೆಯಿಂದ ಬಳಲಿದರೆ ಮಾನಸಿಕ ಮತ್ತು ಶಾರೀರಿಕವಾಗಿ ಕುಗ್ಗುತ್ತಾರೆ ಎಂದು ವೈದ್ಯರು ಹೇಳುತ್ತಾರೆ. ಮಹಿಳೆಯರಿಗೆ ನಿದ್ರೆ ಕಡಿಮೆಯಾದರೆ ಹಾರ್ಮೋನುಗಳ ಬದಲಾವಣೆಗಳು ಕಂಡು ಬರುತ್ತದೆ. ಋತುಚಕ್ರದಲ್ಲಿನ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ನಂತಹ ಹಾರ್ಮೋನುಗಳಲ್ಲಿ ಏರಿಳಿತ ಕಂಡು ಬರುತ್ತದೆ. ಇದರಿಂದ ಮಹಿಳೆಯರ ದೇಹ ಅನಾರೋಗ್ಯಕ್ಕೆ ಬೇಗನೆ ತುತ್ತಾಗುತ್ತದೆ.
ಬಿಜಿಎಸ್ ಆಸ್ಪತ್ರೆ ಸೈಕಾಲಾಜಿಸ್ಟ್ ಸುಮಲತಾ ವಾಸುದೇವ್ ಅವರು “ಪುರುಷರಿಗೆ ಹೋಲಿಸಿದರೆ, ಮಹಿಳೆಯರು ಹೆಚ್ಚಾಗಿ ಹಲವು ಕಾರ್ಯಗಳಲ್ಲಿ ತೊಡಗಿಕೊಂಡಿರುತ್ತಾರೆ. ಸಾಮಾನ್ಯವಾಗಿ, ಮಹಿಳೆಯರು ತಮ್ಮ ಆರೋಗ್ಯಕ್ಕಿಂತ ಹೆಚ್ಚಾಗಿ ತಮ್ಮ ಜವಾಬ್ದಾರಿಗಳಿಗೆ ಆದ್ಯತೆ ನೀಡುತ್ತಾರೆ. ಇದು ಅವರನ್ನು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಕುಗ್ಗಿಸುತ್ತದೆ” ಎಂದು ಹೇಳಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)