ಹೆಣ್ಣು ಮಕ್ಕಳೇ ನೀವು ರಾತ್ರಿ ಮನೆಯಿಂದ ಹೊರಬಂದಾಗಲೆಲ್ಲಾ ಕೂದಲನ್ನು ಕಟ್ಟಿ ಎಂದು ಮನೆಯ ಹಿರಿಯರು ಹೇಳುವುದನ್ನು ನೀವು ಎಷ್ಟು ಬಾರಿ ಕೇಳಿದ್ದೀರಿ ಅಲ್ವಾ? ಅದು ಯಾಕೆ ಅನ್ನೋದನ್ನು ತಿಳಿಯೋಣ.
DK Suresh: ಲೋಕಸಭಾ ಚುನಾವಣೆಯಲ್ಲಿ ಸೋಲು: ಡಿ.ಕೆ ಸುರೇಶ್ ಕೊಟ್ಟ ಮೊದಲ ರಿಯಾಕ್ಷನ್ ಹೀಗಿದೆ!
ಇದು ವಿಶೇಷವಾಗಿ ಮಹಿಳೆಯರಿಗೆ ಅನ್ವಯಿಸುತ್ತದೆ ಮತ್ತು ಕೂದಲು ಬಿಚ್ಚಿ ಹೊರಗಡೆ ಹೋಗ್ಬೇಡಿ ಅಂತ ಮನೆಯ ಹಿರಿಯರು ರೇಗಾಡಿದ್ದು ಕೇಳಿರ್ತೀವಿ. ಹೀಗೆ ಮಾಡೋದರಿಂದ ಮನೆ ಮೇಲೆ ನಕಾರಾತ್ಮಕ ಶಕ್ತಿ ಬೀಳುತ್ತದೆ ಅಥವಾ ಕೆಟ್ಟ ದೃಷ್ಟಿ ಬೀಳುವ ಸಾಧ್ಯತೆಯೂ ಇದೆ ಅನ್ನೋದನ್ನು ಗ್ರಂಥಗಳಲ್ಲಿ ಬರೆಯಲಾಗಿದೆ. ಅವುಗಳನ್ನು ಬಗ್ಗೆ ಪೂರ್ತಿಯಾಗಿ ತಿಳಿಯೋಣ.
ಕೂದಲನ್ನು ಓಪನ್ ಆಗಿ ಬಿಡೋದ್ರಿಂದ ನಕಾರಾತ್ಮಕ ಶಕ್ತಿ (Negative Energy) ಹೆಚ್ಚುತ್ತೆ
ಜ್ಯೋತಿಷ್ಯ ಮತ್ತು ಅನೇಕ ಸಾಂಪ್ರದಾಯಿಕ ನಂಬಿಕೆಗಳು ನಕಾರಾತ್ಮಕ ಶಕ್ತಿಗಳು ಮತ್ತು ದುಷ್ಟ ಶಕ್ತಿಗಳು ರಾತ್ರಿಯಲ್ಲಿ ಹೆಚ್ಚು ಸಕ್ರಿಯವಾಗಿರುತ್ತೆ ಎಂದು ಹೇಳುತ್ತವೆ. ಕೂದಲನ್ನು ಓಪನ್ ಆಗಿ ಬಿಟ್ಕೊಂಡ್ರೆ ಇದರಿಂದ ಕೆಟ್ಟ ದೃಷ್ಟಿ ನಿಮ್ಮೆಡೆಗೆ ಬೇಗ ಆಕರ್ಷಿತವಾಗುತ್ತವೆ. ಕೂದಲು ಯಾವುದೇ ವ್ಯಕ್ತಿಯ ದೇಹದ ಪ್ರಬಲ ಭಾಗವಾಗಿರುವುದರಿಂದ, ನಕಾರಾತ್ಮಕ ಶಕ್ತಿ ಬಹು ಬೇಗ ಕೂದಲಿನತ್ತ ಆಕರ್ಷಿತವಾಗುತ್ತದೆ ಎಂದು ಗ್ರಂಥಗಳು ತಿಳಿಸಿವೆ. ಇದರಿಂದಾಗಿ ನೀವು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು (mental problem) ಹೊಂದಬಹುದು. ಹಾಗಾಗಿ ರಾತ್ರಿ ಹೊತ್ತು ಕೂದಲು ಓಪನ್ ಆಗಿ ಬಿಟ್ಕೊಂಡು ಹೊರಗೆ ಹೋಗಬೇಡಿ.
ರಾತ್ರಿ ಮನೆಯಿಂದ ಹೊರಗೆ ಹೋಗೋದಾದರೆ ಕೂದಲನ್ನು ಕಟ್ಟಿಕೊಂಡೇ ಹೊರಗೆ ಹೋಗಿ. ಕೂದಲನ್ನು ಕಟ್ಟುವುದು ವ್ಯಕ್ತಿಗೆ ರಕ್ಷಣಾತ್ಮಕ ಗುರಾಣಿಯಾಗಿ ಕಾರ್ಯನಿರ್ವಹಿಸುತ್ತದೆ. ನೀವು ನಿಮ್ಮ ಕೂದಲನ್ನು ಓಪನ್ ಆಗಿ ಬಿಟ್ಕೊಂಡು, ರಾತ್ರಿಯಲ್ಲಿ ನಕಾರಾತ್ಮಕ ಶಕ್ತಿ ಹೇರಳವಾಗಿರುವ ಸ್ಥಳಕ್ಕೆ ಪ್ರವೇಶಿಸಿದರೆ, ಅದು ಬೇಗ ಕೂದಲಿನ ಮೂಲಕ ನಿಮ್ಮ ದೇಹವನ್ನು ಪ್ರವೇಶಿಸುತ್ತದೆ. ಇದರಿಂದ ಅನೇಕ ಸಮಸ್ಯೆಗಳು ನಿಮ್ಮನ್ನು ಕಾಡುತ್ತೆ. ,
ಓಪನ್ ಹೇರ್ (open hair) ಬಿಡೋದು ಪ್ರಾಚೀನ ಕಾಲದಿಂದಲೂ ಕ್ರೋಧ ಮತ್ತು ಕೋಪದೊಂದಿಗೆ ಸಂಬಂಧ ಹೊಂದಿದೆ. ರಾಮಾಯಣದ ಕಾಲದಲ್ಲಿಯೂ ಕೈಕೇಯಿ ಕೋಪಗೊಂಡಿದ್ದಾಗ, ಆಕೆ ಕೂದಲನ್ನು ಬಿಚ್ಚಿ ಕುಳಿತಿದ್ದಳು, ಅಂದಿನಿಂದಲೇ ಕೂದಲು ಓಪನ್ ಆಗಿ ಬಿಡೋದು ಅಂದ್ರೆ ಕ್ರೋಧದ ಸಂಕೇತ ಅನ್ನೋದನ್ನು ಸೂಚಿಸುತ್ತದೆ. ಅದಕ್ಕಾಗಿಯೇ ರಾತ್ರಿ ವೇಳೆ ಮಹಿಳೆಯರು ಕೂದಲು ಬಿಟ್ಟು ಹೊರ ಹೋಗಬಾರದು ಎನ್ನುತ್ತಾರೆ.