ಹುಬ್ಬಳ್ಳಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ಅಮೂಲ್ಯ ವಾದ ಸಂವಿಧಾನ ನೀಡಿದ್ದಾರೆ. ಆದರೆ ಅದೇ ಸಂವಿಧಾನವನ್ನು ಬಿಜೆಪಿಯವರು ಸುಟ್ಟು ಹಾಕಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಒಂದಿನಿತು ಮಾತನಾಡಲಿಲ್ಲ ಎಂದು ಗುಜರಾತ ಶಾಸಕ ಜಿಗ್ನಶ ಮೇವಾನಿ ಅವರು ಬಿಜೆಪಿ ವಿರುದ್ಧ ಹರಿಹಾಯ್ದರು.
ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗದಿದ್ದರೆ ಭಾರತದಲ್ಲಿ ಹಿಂದೂ ಬಾವುಟ ಹಾರುತ್ತಿರಲಿಲ್ಲ – ಲಾಡ್!
ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ನಿಮಿತ್ತ ಕಾಂಗ್ರೆಸ್ ವತಿಯಿಂದ ಇಲ್ಲಿಯ ನೆಹರು ಮೈದಾನದಲ್ಲಿ ಏರ್ಪಡಿಸಿದ್ದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಸದ ಅನಂತಕುಮಾರ ಹೆಗಡೆ ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿದರು. ಮೋದಿ ಅವಧಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರಗಳಾಗಿವೆ. ದಲಿತ ಮತ್ತುಆದಿವಾಸಿಗಳ ಸಂಖ್ಯೆ ಹೆಚ್ಚಿದೆ. ಇದಕ್ಕೆ ಅನುಗುಣವಾಗಿ ಸೌಲಭ್ಯ ಸಿಕ್ಕಿಲ್ಲ. ಎಲ್ಲ ರಂಗದಲ್ಲೂ ದಲಿತರು ಹಿಂದುಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜಾತಿ ಗಣತಿ ಬಗ್ಗೆ ಮಾತನಾಡುತ್ತಿದೆ. ಇದನ್ನು ಬಿಜೆಪಿಗರು ಪರಿಗಣಿಸದೇ ವಿರೋಧಿಸುತ್ತಿದ್ದಾರೆ. ಇದರ ಜತೆಗೆ ಅಂಬೇಡ್ಕರ್ ಅವರನ್ನೂ ಹೀಗಳೆಯುತ್ತಿದ್ದಾರೆ ಎಂದು ಆರೋಪಿಸಿದರು.