ಕೊಪ್ಪಳ ತಾಲೂಕು ಹುಲಗಿ ಗ್ರಾಮ ಪಂಚಾಯತ್ದಲ್ಲಿ ಮಹಿಳೆಯರ ಮತ್ತು ಮಕ್ಕಳ ಕಾವಲು ಸಮಿತಿ ಸಭೆ ಮಾಡಲಾಯಿತು.ಸಭೆಯಲ್ಲಿ ಚರ್ಚಿಸಿದ ವಿಷಯಗಳನ್ನು ನಾವು ನೋಡೋಣ ಹಾಗೆ ಹಿಂದಿನ ಸಭೆಯ ನಡುವಳಿಯನ್ನು ಕೂಡ ಸಭೆಯಲ್ಲಿ ಮಂಡಿಸಲಾಯಿತು.
1) ಸಭೆಯಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ 18 ವರ್ಷದೊಳಗಿನ ಮಕ್ಕಳ ಅಂಕಿ ಸಂಖ್ಯೆಯ ಬಗ್ಗೆ.
2)ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಮರಳಿ ಬರಲು ಸಭೆಯಲ್ಲಿ ಕಮಿಟಿ ಸದಸ್ಯರು ಮನೆ ಬೇಟಿ ಮಾಡಲು ದಿನಾಂಕವನ್ನು ನಿಗದಿಪಡಿಸಿ ಸದಸ್ಯರು ಮನೆ ಬೇಟಿ ಮಾಡಲು ತೀರ್ಮಾನಿಸಲಾಯಿತು.
ಮತ್ತು ಬಾಲ್ಯ ವಿವಾಹ ವಾದರೆ ಮಕ್ಕಳ್ ಸಹಾಯ ವಾಣಿ 1098/112 ಗೆ ಕರೆಮಾಡಲು ತೀರ್ಮಾನಿಸಲಾಯಿತು.
3)ಹುಲಗಿ ದೇವಸ್ಥಾನ ದಲ್ಲಿ ಮಂಗಳವಾರ ಮತ್ತು ಶುಕ್ರವಾರ, ಹುಣ್ಣಿಮೆ ದಿನಗಳಲ್ಲಿ.
1)ಜನೆವರಿ -9 & 25 – 2024 ರಂದು.
2) ಫೆಬ್ರವರಿ –6 & 16 -2024 ರಂದು.
3) ಮಾರ್ಚ್ -5-2024 ರಂದು, ಬಾಲಕಾರ್ಮಿಕವನ್ನು ತಡೆಗಟ್ಟಲು ಬಾಲಕಾರ್ಮಿಕರ ಅಧಿಕಾರಿಗಳಿಗೆ ಮತ್ತು ಕಾವಲು ಸಮಿತಿಯ ಸದಸ್ಯರು ರೇಡ್ ಮಾಡಲು ತೀರ್ಮಾನಿಸಲಾಯಿತು.
4) ಬಾಲ್ಯ ವಿವಾಹ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ ಎ0ದು ಸಭೆಯಲ್ಲಿ ತಿಳಿಸಲಾಯಿತು.
5) ಗರ್ಭಿಣಿಯರಿಗೆ ತಾಯಿಕಾರ್ಡ್ ಕೊಡುವಾಗ ಆಧಾರಕಾರ್ಡ್
/ಶಾಲಾ ದಾಖಲಾತಿ ಪರಿಶೀಲನೆ ಮಾಡಿ ಕೊಡುತ್ತೇವೆ ಎ0ದು PHCO ರವರು ತಿಳಿಸಿದರು.
6) ಬೀಟ್ ಪೊಲೀಸ್ ರವರು FIR ಮತ್ತು ಕಾನೂನು ಪರಿಪಾಲನೆ ಬಗ್ಗೆ ಮತ್ತು ತೆರೆದ ಮನೆ ಕಾರ್ಯಕ್ರಮದ ಬಗ್ಗೆ ಮಾಹಿತಿ ತಿಳಿಸಿದರು.
7) ಮಹಿಳೆ ಮತ್ತು ಹೆಣ್ಣು ಮಕ್ಕಳಿಗೆ ದೌರ್ಜನ್ಯವಾದರೆ ಪೊಲೀಸ್ ಇಲಾಖೆಯಿಂದ ತಡೆಗಟ್ಟಲು 100 ಕರೆ ಮಾಡಿದರೆ ಚೆನ್ನಮ್ಮ ಪಡೆ (ಮಹಿಳಾ ಪೊಲೀಸ್ ಪಡೆ )ಬಂದು ರಕ್ಷಣೆ ಮಾಡುತ್ತದೆ ಎ0ದು ಬೀಟ್ ಪೊಲೀಸರವರು ಸಭೆಯಲ್ಲಿ ಮಾಹಿತಿ ತಿಳಿಸಿದರು.
8) ರೀಡ್ಸ್ ಸಂಸ್ಥೆ ವತಿಯಿಂದ ಉಚಿತ ಹಿಮೋಗ್ಲೋಬಿನ ರಕ್ತ ಪರೀಕ್ಷೆ ಹದಿಹರೆಯದ ಹೆಣ್ಣುಮಕ್ಕಳಿಗೆ ಮತ್ತು ಸರಕಾರಿ ಶಾಲಾ ಮಕ್ಕಳಿಗೆ , ಮಕ್ಕಳ ಗ್ರಾಮಸಭೆ ಯಲ್ಲಿ ಚರ್ಚೆಸಿದ ವಿಷಯಗಳ ಅನುಪಾಲನೆ ಕುರಿತು ನಡೆದ ಚರ್ಚೆ.
ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ನೀಲಮ್ಮ g ಗುಂಗಾಡಿ, ಮತ್ತು gp ಸದಸ್ಯರು ಉಮಾದೇವಿ ಮೇಟಿ, ಯಮನೂರಪ್ಪಾ, ಕಾಜವಾಲಿ ಜವಳಿ ಮತ್ತು ಪ್ಹ್ಚ್, ಅಂಗನವಾಡಿ ಮೇಲ್ವಿಚಾರಕರು, ಬೀಟ್ ಪೊಲೀಸ, ಶಾಲಾ ಮುಕ್ಯೋಪಾಧ್ಯಾಯರು, ಆಶಾ, ಅಂಗನವಾಡಿ ಕಾರ್ಯ ಕರ್ತರು, kHPT ಸಿಬ್ಬಂದಿ ಮತ್ತು ರೀಡ್ಸ್ ಸಂಸ್ಥೆಯ ಯೋಜನಾ ವ್ಯವಸ್ಥಾಪಕರು ಮತ್ತು ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.