ಬಳ್ಳಾರಿ:- ಊಟಕ್ಕೆಂದು ಹೊಟೇಲ್ಗೆ ಬಂದ ದಲಿತ ಯುವಕರಿಗೆ “ಹೊಟೇಲ್ ಮುಚ್ಚುತ್ತೇನೆ, ಆದರೆ, ನಿಮಗೆ ಊಟ ಕೊಡಲ್ಲ” ಎಂದು ಮಹಿಳೆಯೊಬ್ಬಳು ಹೇಳಿರುವ ಘಟನೆ ಬಳ್ಳಾರಿಯಲ್ಲಿ ಜರುಗಿದೆ.
ಗುತ್ತಿಗನೂರು ಗ್ರಾಮದ ಹೊಟೇಲ್ನಲ್ಲಿ ಆಹಾರ ನೀಡಲು ಮಹಿಳೆ ನಿರಾಕರಣೆ ಮಾಡಿದ್ದಾರೆ. ಅಸ್ಪೃಶ್ಯತೆ ವಿರುದ್ಧ ಗರಂ ಆದ ಯುವಕರು ಹೊಟೇಲ್ನಲ್ಲಿ ಆಹಾರ ನೀಡದ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ
ಹೊಟೇಲ್ ಬಾಗಿಲ್ ಬಂದ್ ಮಾಡುತ್ತೇನೆ. ಆದರೆ ಊಟ ಕೊಡುವುದಿಲ್ಲ ಎಂದು ಮಹಿಳೆ ಹೇಳಿದ್ದಾಳೆ. ದಲಿತರಿಗೆ ನಿಂದಿಸಿದ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಈ ವಿಚಾರ ತಿಳಿದ ಕುರುಗೋಡು ತಹಶೀಲ್ದಾರ್ ರಾಘವೇಂದ್ರ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.