ಥಾಯ್ಲೆಂಡ್:- ಮಹಿಳೆ ಓರ್ವರು ಮಾವಿನ ಹಣ್ಣು ಕೀಳಲು ಬುದ್ಧನ ಪ್ರತಿಮೆ ಹತ್ತಿದ್ದು, ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ʻಜೊತೆಯಲಿ ಜೊತೆ ಜೊತೆಯಲಿʼ ಎಂದು ಹೆಂಡ್ತಿಗೆ ಹಾಡು ಹಾಡಿದ ರಾಕಿಂಗ್ ಸ್ಟಾರ್ ಯಶ್!
ಬಿಳಿ ಸಲ್ವಾರ್ ಹಾಕಿರುವ ಮಹಿಳೆ ಮತ್ತೊಬ್ಬಳ ಸಹಾಯದಿಂದ ಪ್ರತಿಮೆಯನ್ನು ಹತ್ತಿ ಅಲ್ಲಿಂದ ಮಾವಿನ ಹಣ್ಣು ಕಿತ್ತಿದ್ದಾರೆ. ಟಿಕ್ಟಾಕ್ನಲ್ಲಿ ಈ ವಿಡಿಯೋ ಪ್ರಸಾರ ಮಾಡಲಾಗಿತ್ತು.
ಅನೇಕ ಮಂದಿ ಇದನ್ನು ಖಂಡಿಸಿದ್ದಾರೆ. ಇಬ್ಬರು ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಆ ಮಹಿಳೆಯರು ಎಲ್ಲಿಯವರು ಎಂದು ಇದುವರೆಗೂ ತಿಳಿಯದಿದ್ದರೂ ಅವರು ಭಾರತದವರಿರಬಹುದು ಎಂದು ಅಂದಾಜಿಸಿದ್ದಾರೆ. ಮಾವಿನ ಹಣ್ಣು ಕೀಳಲು ಮಹಿಳೆ ಥಾಯ್ ದೇವಾಲಯದ ಪ್ರತಿಮೆಯನ್ನು ಹತ್ತಿದ ವಿಡಿಯೋ ಆಕ್ರೋಶಕ್ಕೆ ಕಾರಣವಾಗಿದೆ.
ಒಬ್ಬರು ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು ದೇವಾಲಯದ ಕೆಳಗೆ ನಿಂತಿದ್ದಾರೆ, ಇನ್ನೊಬ್ಬರು ಮಾವಿನ ಹಣ್ಣು ಕಿತ್ತು ಕೆಳಗಿರುವ ಮಹಿಳೆಗೆ ಕೊಡುತ್ತಿರುವ ವಿಡಿಯೋ ಇದಾಗಿದೆ.
ವಿಯೆಟ್ನಾಂಗೆ ಭೇಟಿ ನೀಡಿದ ಭಾರತೀಯ ಪ್ರವಾಸಿಗರೊಬ್ಬರು ತಮ್ಮ ದೇಶದ ಮರ್ಯಾದೆಯನ್ನು ಕಳೆದಿದ್ದಕ್ಕೆ ಇಬ್ಬರನ್ನು ತರಾಟೆಗೆ ತೆಗೆದುಕೊಂಡರು.