ಹಾಸನ: ಗಡಿನಾಡು ಚಾಮರಾಜನಗರದ ಸಂತ ಫ್ರಾನ್ಸಿಸ್ ಶಾಲೆಯ 3 ನೇ ತರಗತಿ ವಿದ್ಯಾರ್ಥಿನಿ ತೇಜಸ್ವಿನಿ ಕಡಿಮೆ ರಕ್ತದೊತ್ತಡ, ಹೃದಯಾಘಾತದಿಂದ ಶಾಲಾವರಣದಲ್ಲಿ ಕುಸಿದು ಮೃತಪಟ್ಟಿದ್ದಳು. ಇದೀಗ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ವೆಂಕಟಹಳ್ಳಿ ಗ್ರಾಮದಲ್ಲಿ ಹೃದಯಾಘಾತದಿಂದ ಮಹಿಳೆಯೊಬ್ಬರು ಮೃತಪಟ್ಟಿರುವ ನಡೆದಿದೆ.
ಸಕಲೇಶಪುರ ತಾಲ್ಲೂಕು ವೀರಶೈವ ಸಮಾಜದ ಯುವ ವೇದಿಕೆಯ ಅಧ್ಯಕ್ಷ ಶಶಿಕುಮಾರ್ ಅವರ ಪತ್ನಿ ದೀಪಾ (35) ಹೃದಯಾಘಾತದಿಂದ ಸಾವನ್ನಪ್ಪಿದ ಮಹಿಳೆಯಾಗಿದ್ದು,
ಫ್ರೀಜ್ ನಲ್ಲಿ ಅಪ್ಪಿತಪ್ಪಿಯೂ ಈ ಆಹಾರ ಪದಾರ್ಥಗಳನ್ನು ಇಡಬೇಡಿ! ಇವು ವಿಷಕ್ಕೆ ಸಮ
ಸ್ನಾನ ಮಾಡುತ್ತಿದ್ದ ವೇಳೆ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದಿದ್ದ ದೀಪಾ ಅವರನ್ನು ಪೋಷಕರು ಸಕಲೇಶಪುರ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದರು. ಆದರೆ ಪರಿಶೀಲಿಸಿದ ವೈದ್ಯರು ಅವರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಅವರು ಪತಿ ಓರ್ವ ಪುತ್ರನನ್ನು ಅಗಲಿದ್ದು ಅವರ ಪೋಷಕರು ಹಾಗೂ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.