ರಾಮನಗರ: ಚಾಲಕನ ನಿಯಂತ್ರಣ ತಪ್ಪಿ ಸರಣಿ ಅಪಘಾತ ಸಂಭವಿಸಿದ್ದು, ಕಾರು ಡಿಕ್ಕಿಯಾಗಿ ಮಹಿಳೆ ದುರ್ಮರಣ ಹೊಂದಿರುವಂತಹ ಘಟನೆ ರಾಮನಗರದ ರಾಯರದೊಡ್ಡಿ ಬಳಿ ಸಂಭವಿಸಿದೆ. ಆಟೋದಲ್ಲಿ ಪ್ರಯಾಣಿಸುತ್ತಿದ್ದ ರೂಪಾ(44) ಮೃತ ಮಹಿಳೆ.
ಗುರುವಾರ ಈ ಕೆಲಸಗಳನ್ನೂ ಮಾಡಿದ್ರೆ ಸಂತೋಷ, ಸಮೃದ್ಧಿಯಿಂದ ನಿಮ್ಮ ಜೀವನ ತುಳುಕುತ್ತೆ..!
ಆಟೋಗೆ ಡಿಕ್ಕಿ ಬಳಿಕ ಹಲವು ವಾಹನಗಳಿಗೆ ಕಾರು ಡಿಕ್ಕೆ ಹೊಡೆದಿದೆ. ಚೇಸ್ ಮಾಡಿ ಕಾರಿನ ಚಾಲಕನನ್ನು ಪೊಲೀಸರು ಹಿಡಿದಿದ್ದು, ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಚಾಲಕ ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿರುವ ಆರೋಪ ಮಾಡಲಾಗಿದೆ. ರಾಮನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.