ಶಿವಮೊಗ್ಗ : ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಲಾಗಿದೆ. ತನ್ನ ಪತ್ನಿಯನ್ನ ಆಸ್ಪತ್ರೆಗೆ ದಾಖಲಿಸಿದಕ್ಕೆ ಪ್ರಶ್ನೆ ಮಾಡಿ ಪೊಲೀಸರ ಎದುರಲ್ಲೇ ಆಸ್ಪತ್ರೆ ವಾರ್ಡ್ ನಲ್ಲೇ ಹಲ್ಲೆ ನಡೆಸಿದ್ದಾರೆ. ಗಂಡ ಹೆಂಡತಿಯರ ಜಗಳವಾಗಿ ಹಲ್ಲೆಗೊಳಗಾಗಿದ್ದ ಸ್ನೇಹಿತೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದ ಮಹಿಳೆಯನ್ನು ಸಾರ್ವಜನಿಕರೇದುರಲ್ಲೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ. ನನ್ನ ಹೆಂಡತಿಯನ್ನು ಯಾಕೆ ಆಸ್ಪತ್ರೆಗೆ ದಾಖಲಿಸಿದೆ ಎಂದು ಹಲ್ಲೆ ಮಾಡಿದ್ದು, ಆತನನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ.
ಉತ್ತರಪ್ರದೇಶದಲ್ಲಿ ಬೀದರ್ ಯಾತ್ರಿಕರ ಸಾವು ; ಮೃತರ ಕುಟುಂಬಸ್ಥರ ಭೇಟಿಯಾದ ಸಂಸದ ಸಾಗರ್
ಇನ್ನೊಂದೆಡೆ ಭದ್ರಾವತಿಯಲ್ಲಿ ನಡೆದಿದ್ದ ಮತ್ತೊಂದು ದೌರ್ಜನ್ಯ ಬೆಳಕಿಗೆ ಬಂದಿದೆ. ಟೀ ಮಾರುವವನ ಮೇಲೆ ಪುಂಡರು ದೌರ್ಜನ್ಯ ನಡೆಸಿದ್ದಾರೆ. ಕಳೆದ ಶುಕ್ರವಾರ ತಡರಾತ್ರಿ ಭದ್ರಾವತಿಯ ರೈಲ್ವೇ ನಿಲ್ದಾಣದ ಬಳಿ ಘಟನೆ ನಡೆದಿದೆ. ಟೀ ಕುಡಿದು ಹಣ ಕೇಳಿದ್ದಕ್ಕೆ ಪುಂಡಾಟ ಮೆರೆದಿದ್ದಾರೆ.