ನವದೆಹಲಿ: ಅರ್ಜುನ ಪ್ರಶಸ್ತಿ ಪುರಸ್ಕೃತ ಪೊಲೀಸ್ ಅಧಿಕಾರಿಯೊಬ್ಬರ ಕೊಲೆ ಪ್ರಕರಣವನ್ನು ಜಲಂಧರ್ ಪೊಲೀಸರು ಸುಧಾರಿತ ತಾಂತ್ರಿಕ ತನಿಖಾ ವಿಧಾನದ ಮೂಲಕ 48 ಗಂಟೆಗಳಲ್ಲಿ ಭೇದಿಸಿದ್ದಾರೆ. ಪೊಲೀಸ್ ಅಧಿಕಾರಿ ದಲ್ಬೀರ್ ಸಿಂಗ್ ಡಿಯೋಲ್ ಅವರು, ತಲೆಯ ಮೇಲೆ ಬಿದ್ದಿದ್ದ ಗುಂಡಿನ ಗಾಯದಿಂದ ಬುಧವಾರ ಸಾವನ್ನಪ್ಪಿದ್ದರು. ಆಟೋರಿಕ್ಷಾ ಚಾಲಕನನ್ನು ಬಂಧಿಸುವ ಮೂಲಕ ಪೊಲೀಸರು ಪ್ರಕರಣ ಭೇದಿಸಿದ್ದಾರೆ. ಆಟೋ ಚಾಲಕ ಮನೆಗೆ ಡ್ರಾಪ್ ಕೊಡುವ ವೇಳೆ ನಡೆದ ಮಾತಿನ ಚಕಮಕಿಯಿಂದ ಪೊಲೀಸ್ ಅಧಿಕಾರಿಯ ಮೇಲೆ ಗುಂಡು ಹಾರಿಸಿದ್ದಾನೆ.
ಪೊಲೀಸ್ ಅಧಿಕಾರಿ ಜುಗಲ್ ಕಿಶೋರ್ ಅವರು ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದಾಗ ಕಾಲುವೆ ಬಳಿ ಶವವನ್ನು ನೋಡಿದ್ದಾರೆ. ಕಿಶೋರ್ ತಕ್ಷಣ ತನ್ನ ಸಹೋದ್ಯೋಗಿಗಳಿಗೆ ಕರೆ ಮಾಡಿ ಶೀಘ್ರದಲ್ಲೇ ತನಿಖೆ ನಡೆಸಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಅವುಗಳ ಪೈಕಿ ಒಂದರಲ್ಲಿ ಡಿಯೋಲ್ ಆಟೋರಿಕ್ಷಾದಲ್ಲಿ ಪ್ರಯಾಣಿಸಿರುವುದು ಕಂಡುಬಂದಿದೆ. ಆ ವಾಹನ ಸಂಖ್ಯೆ ನಮೂದಿಸಿಕೊಂಡು ಪೊಲೀಸರು, ಆಟೋ ಹೋದ ಮಾರ್ಗಗಳಲ್ಲಿ ಇದ್ದ ಸಿಸಿಟಿವಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಆಟೋರಿಕ್ಷಾ ಪತ್ತೆಯಾಗಿದೆ.
India’s richest person: ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ ಭಾರತದ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ
ಆರೋಪಿ ವಿಜಯ್ ಕುಮಾರ್ ಸರ್ವೀಸ್ ಪಿಸ್ತೂಲ್ ಕಸಿದುಕೊಂಡು ಡಿಯೋಲ್ ಅವರ ತಲೆಗೆ ಗುಂಡು ಹಾರಿಸಿದ್ದಾನೆ. ನಂತರ ಮೃತದೇಹವನ್ನು ಕಾಲುವೆ ಬಳಿ ಎಸೆದು ಹೋಗಿದ್ದಾನೆ. ಮೃತದೇಹದ ಬಳಿ ಮಾರಕಾಸ್ತ್ರ ಪತ್ತೆಯಾಗಿದೆ. ಪೊಲೀಸ್ ಅಧಿಕಾರಿ ತಾನು ಹೇಳಿದ ಜಾಗಕ್ಕೆ ಬಿಡಲು ಚಾಲಕ ನಿರಾಕರಿಸಿದ್ದು, ಜಗಳಕ್ಕೆ ಕಾರಣವಾಯಿತು. ವಾಗ್ವಾದದ ನಡುವೆ ಆರೋಪಿಯು ಡಿಯೋಲ್ನಿಂದ ಸರ್ವೀಸ್ ಪಿಸ್ತೂಲ್ ಕಸಿದುಕೊಂಡು ಆತನ ತಲೆಗೆ ಗುಂಡು ಹಾರಿಸಿದ್ದಾನೆ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ.