ಬಳ್ಳಾರಿ : ಬಳ್ಳಾರಿ ಕೆಎಂಎಫ್ ಮೊದಲೇ ನಷ್ಟದಲ್ಲಿದೆ. ಆದರೆ ಇದರ ನಡುವೆಯೇ ಕೆಎಂಎಫ್ ನ ಆಡಳಿತ ಕಚೇರಿ ಮುಂದೆ ವಾಮಾಚಾರ ನಡೆಸಲಾಗಿದೆ ಎನ್ನಲಾಗ್ತಿದೆ. ಆಡಳಿತ ಕಚೇರಿಯ ಎದುರೇ ಎಂಟು ನಿಂಬೆ ಹಣ್ಣಿಗೆ, ಕುಂಬಳೆಕಾಯಿಗೆ ಕುಂಕುಂಮ ಹಾಕಿ ಮೊಳೆ ಹೊಡೆಯಲಾಗಿದೆ. ಸಣ್ಣ ಗಡಗಿಗೆ ದಾರ ಸುತ್ತಿ, ಟೆಂಗಿನಕಾಯಿಗೆ ತಾಯತದ ತಗಡು ಕಟ್ಟಿ, ಗೊಂಬೆಯೊಂದನ್ನು ಇಟ್ಟು ಮತ್ತೊಂದು ಕವರ್ ನಲ್ಲಿ ಏನೋ ಬರೆದು ವಾಮಾಚಾರ ಮಾಡಲಾಗಿದೆ. ಕಚೇರಿಯಲ್ಲಿ ಸಿಸಿಟಿವಿ ಇದೆ. ಭದ್ರತೆ ಸಿಬ್ಬಂದಿಯನ್ನು ನೇಮಿಸಲಾಗಿದೆ. ಇದೆಲ್ಲವನ್ನೂ ಮೀರಿ ವಾಮಾಚಾರ ಹೇಗೆ ನಡೆಯಿತು ಎಂಬ ಪ್ರಶ್ನೆಯೂ ಎಲ್ಲರನ್ನು ಕಾಡ್ತಿದೆ.
ಚುನಾಯಿತ ಆಡಳಿತ ಮಂಡಳಿ ಇಲ್ಲದೇ ಹಿಂದಿನ ಆಡಳಿತ ಮಂಡಳಿಯನ್ನೇ ತಾತ್ಕಾಲಿಕವಾಗಿ ಮುಂದುವರಿಸಲಾಗಿದೆ. ಕೆಎಂಎಫ್ ಅಂತರಿಕ ಭಿನ್ನಾಭಿಪ್ರಾಯ ಇದ್ದವರು ಈ ಕಾರ್ಯ ಮಾಡಿದ್ದಾರೆ ಎನ್ನಲಾಗ್ತಿದ ನಷ್ಟದ ಹೊರೆ ಕಡಿಮೆ ಮಾಡಲು ಸಹಕಾರ ಸಚಿವರು ಅನಾವಶ್ಯಕ ವೆಚ್ಚ ಕಡಿತಗೊಳಿಸಲು ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರಂತೆ. ಹೀಗಾಗಿ ಕೆಲ ವಿರೋಧಿ ತಂಡ ವಾಮಾಚಾರ ಮಾಡಿದೆ ಎನ್ನಲಾಗ್ತಿದೆ.