ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಬೇಕು ಎಂದು ವರ್ತೂರು ಸಂತೋಷ್ ಅವರು ತೀರ್ಮಾನಿಸಿದ್ದಾರೆ. ಆದರೆ ಅವರ ಮನವೊಲಿಸಲು ಸಕಲ ಪ್ರಯತ್ನ ಮಾಡಲಾಗುತ್ತಿದೆ. ಹಾಗಿದ್ದರೂ ಕೂಡ ವರ್ತೂರು ಸಂತೋಷ್ ಅವರು ದೊಡ್ಮನೆ ತೊರೆಯಲು ಏನೇನೋ ಪ್ಲ್ಯಾನ್ ಮಾಡುತ್ತಿದ್ದಾರೆ.
‘ಎರಡು ದೊಡ್ಡ ಡ್ರೋನ್ ತರಿಸು. ಅದರ ಮೇಲೆ ಕಾಲಿಟ್ಟುಕೊಂಡು ಹಾರಿ ಹೋಗ್ತೀನಿ’ ಎಂದು ಪ್ರತಾಪ್ಗೆ ವರ್ತೂರು ಸಂತೋಷ್ ಹೇಳಿದ್ದಾರೆ.
ಅವರಿಗೆ ತುಕಾಲಿ ಸಂತೋಷ್ ಕೂಡ ಒಂದಷ್ಟು ಐಡಿಯಾ ಕೊಟ್ಟಿದ್ದಾರೆ. ‘ನಿಮ್ಮನ್ನೆಲ್ಲ ಹೊಡೆದರೆ ಸಾಕು. ಅವರೇ ನನ್ನನ್ನು ಹೊರಗೆ ಕಳಿಸುತ್ತಾರೆ’ ಎಂದು ವರ್ತೂರು ಸಂತೋಷ್ ಹೇಳಿದ್ದಾರೆ. ಈ ಮೂವರ ಸಂಭಾಷಣೆ ಇರುವ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ.