ಮೈಸೂರು : ತಮಗೆ ಪಕ್ಷದಿಂದ ಬಂದಿರುವ ನೋಟಿಸ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉತ್ತರ ನೀಡಿದ್ದಾರೆ. ಇದೀಗ ಹೈಕಮಾಂಡ್ ಗೆ ಉತ್ತರ ಕೊಟ್ಟಿರೋ ಫೈಲ್ ಪ್ರತಿಯನ್ನು ಚಾಮುಂಡಿ ಸನ್ನಿಧಿಯಲ್ಲಿಟ್ಟು ಪೂಜೆ ಮಾಡಿದ್ದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ಇಂದು ಯತ್ನಾಳ್ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದು, ಈ ವೇಳೆ ಹೈಕಮಾಂಡ್ ನೋಟಿಸ್ ಗೆ ಉತ್ತರ ಕೊಟ್ಟ ಪ್ರತಿಗೆ ಪೂಜೆ ಸಲ್ಲಿಸಿದ್ದಾರೆ, ವಿಜಯೇಂದ್ರ ವಿರುದ್ಧ ಮತ್ತಷ್ಟು ದಾಖಲೆ ಇಟ್ಟು ಪೂಜೆ ಮಾಡಿಸಿದ್ದರಾ ಅನ್ನೋ ಅನುಮಾನವೂ ಶುರುವಾಗಿದೆ.
ಇನ್ನೂ ಚಾಮುಂಡಿ ಬೆಟ್ಟದಲ್ಲಿ ಯತ್ನಾಳ್ ಎದುರು ವಿಜಯೇಂದ್ರ ಪರ ಅಭಿಮಾನಿಗಳು ಜೈ ವಿಜಯೇಂದ್ರ , ಜೈ ಬಿಎಸ್ ವೈ ಎಂದು ಘೋಷಣೆ ಕೂಗಿದ್ದಾರೆ. ಜೈ ವಿಜಯೇಂದ್ರ ಎನ್ನುತ್ತಿದ್ದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ಯತ್ನಾಳ್ ಅಲ್ಲಿಂದ ಹೊರಟು ಹೋಗಿದ್ದಾರೆ.