ಕಳೆದ ಕೆಲವ ದಿನಗಳ ಹಿಂದೆ ವಯೋಸಹಜ ಕಾಯಿಲೆಯಿಂದ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ನಿಧನರಾಗಿದ್ದಾರೆ. ಟಾಟಾ ನಿಧನದ ಬಳಿಕ ಅವರ ಆಸ್ತಿ ಯಾರಾ ಪಾಲಾಗಲಿದೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿತ್ತು. ಇದೀಗ ರತನ್ ಟಾಟಾ ಅವರು ಬರೆದಿಟ್ಟಿರಿವು ವಿಲ್ ಮಾಹಿತಿ ಬಯಲಾಗಿದೆ.
ಹಂಡತಿ-ಮಕ್ಕಳಿಲ್ಲದ ಟಾಟಾ ಅವರು ತಮ್ಮ ಮುದ್ದಿನ ಸಾಕು ನಾಯಿಯನ್ನು ವಿಲ್ನಲ್ಲಿ ಉಲ್ಲೇಖಿಸಿರುವುದು ನಿಜಕ್ಕೂ ಅಪರೂಪದ ಸಂಗತಿ. ಟಾಟಾ ಅವರ ಹಿಂದಿನ ನಾಯಿಯ ಮರಣದ ನಂತರ ಸುಮಾರು ಆರು ವರ್ಷಗಳ ಹಿಂದೆ ಟಿಟೊವನ್ನು ದತ್ತು ಪಡೆಯಲಾಯಿತು. ಅದರ ಮುಂದಿನ ಆರೈಕೆಯ ಜವಾಬ್ದಾರಿ, ವೆಚ್ಚದ ಬಗ್ಗೆ ವಿಲ್ನಲ್ಲಿ ಉಲ್ಲೇಖಿಸಿದ್ದಾರೆ. ಅವರ ದೀರ್ಘಕಾಲದ ಬಾಣಸಿಗರಾದ ರಾಜನ್ ಶಾಗೆ ಮುದ್ದಿನ ಶ್ವಾನವನ್ನು ನೋಡಿಕೊಳ್ಳುವ ಜವಬ್ದಾರಿಯನ್ನು ನೀಡಿದ್ದಾರೆ.
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ರತನ್ ಟಾಟಾ ಅವರ ಎಸ್ಟೇಟ್ ₹ 10,000 ಕೋಟಿ ಮೌಲ್ಯಕ್ಕೂ ಮೀರಿದ್ದು ಎಂದು ಅಂದಾಜಿಸಲಾಗಿದೆ. ಅವರ ಆಸ್ತಿಯನ್ನು ಸಹೋದರ ಜಿಮ್ಮಿ ಟಾಟಾ, ಮಲ ಸಹೋದರಿಯರಾದ ಶಿರೀನ್ ಮತ್ತು ಡೀನಾ ಜೆಜೀಬಾಯ್ ಮತ್ತು ತಮ್ಮ ಮನೆಯ ಸಿಬ್ಬಂದಿ ಸೇರಿದಂತೆ ವಿವಿಧ ಫಲಾನುಭವಿಗಳಿಗೆ ಆಸ್ತಿಗಳನ್ನು ಹಂಚಿದ್ದಾರೆ.
ಟಾಟಾ ಅವರ ಉಯಿಲಿನಲ್ಲಿ ಅವರ ಬಾಣಸಿಗ ಸುಬ್ಬಯ್ಯನಿಗೂ ವ್ಯವಸ್ಥೆಯನ್ನು ಮಾಡಿದ್ದಾರೆ. ಆತ ಟಾಟಾ ಅವರೊಂದಿಗೆ ಮೂರು ದಶಕಗಳ ಕಾಲ ನಿಕಟ ಬಂಧವನ್ನು ಹೊಂದಿದ್ದರು. ಉಯಿಲಿನಲ್ಲಿ ಟಾಟಾ ಅವರ ಕಾರ್ಯನಿರ್ವಾಹಕ ಸಹಾಯಕ ಶಂತನು ನಾಯ್ಡು ಅವರ ಹಸರನ್ನು ಕೂಡ ಉಲ್ಲೇಖಿಸಲಾಗಿದೆ. ವರದಿಯ ಪ್ರಕಾರ, ನಾಯ್ಡು ಅವರ ಉದ್ಯಮವಾದ ಗುಡ್ಫೆಲೋಸ್ಗೆ ನೆರವು ಮುಂದುವರೆಸಿದ್ದಾರೆ. ನಾಯ್ಡು ಅವರ ವಿದೇಶದಲ್ಲಿನ ಶಿಕ್ಷಣದ ವೆಚ್ಚಗಳನ್ನು ಸಹ ಭರಿಸಿದ್ದಾರೆ.
ಟಾಟಾ ಅವರ ಆಸ್ತಿಗಳಲ್ಲಿ ಮಹಾರಾಷ್ಟ್ರದ ಅಲಿಬಾಗ್ನಲ್ಲಿ 2,000 ಚದರ ಅಡಿ ಬೀಚ್ ಬಂಗಲೆ, ಮುಂಬೈನ ಜುಹು ತಾರಾ ರಸ್ತೆಯಲ್ಲಿರುವ ಎರಡು ಅಂತಸ್ತಿನ ನಿವಾಸ ಮತ್ತು ₹ 350 ಕೋಟಿಗೂ ಹೆಚ್ಚಿನ ಸ್ಥಿರ ಠೇವಣಿ ಇದೆ. $165 ಶತಕೋಟಿ ಟಾಟಾ ಗ್ರೂಪ್ನ ಮೂಲ ಕಂಪನಿಯಾದ ಟಾಟಾ ಸನ್ಸ್ನಲ್ಲಿ ಅವರು 0.83% ಪಾಲನ್ನು ಹೊಂದಿದ್ದಾರೆ.