ಕೊಹ್ಲಿ 2028ರಲ್ಲಿ ನಿವೃತ್ತಿ ಹೊಂದಲಿದ್ದಾರೆ ಎಂದು ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದು, ಅದರ ಫೋಟೋವೊಂದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.
ಒಂದೆಡೆ ಅಭಿಮಾನಿಗಳು ವಿರಾಟ್ ಕೊಹ್ಲಿ ಎರಡನೇ ಮಗುವಿಗೆ ತಂದೆಯಾದ ವಿಷಯ ಕೇಳಿ ಸಂತಸಪಟ್ಟರೇ ಮತ್ತೊಂದೆಡೆ ಈ ವೈರಲ್ ಸುದ್ದಿ ತಿಳಿದು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. 2016ರಲ್ಲಿ ಈ ಜ್ಯೋತಿಷಿ ಮಾಡಿರುವ ಪೋಸ್ಟ್ಗಳು ಸದ್ಯ ನೆಟ್ಟಿಗರಲ್ಲಿ ಭಾರಿ ಅನುಮಾನಗಳನ್ನು ಹುಟ್ಟುಹಾಕಿತ್ತು. ಇದೀಗ ಈ ಪೋಸ್ಟ್ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ವ್ಯಾಪಕವಾಗಿ ಹರಿದಾಡುತ್ತಿದೆ.
ಕಳೆದ 8 ವರ್ಷಗಳ ಹಿಂದೆ ಈ ವ್ಯಕ್ತಿ ಕೊಹ್ಲಿ ಅವರ ವೈಯಕ್ತಿಕ ಹಾಗೂ ವೃತ್ತಿ ಜೀವನದ ಕುರಿತು ತಮ್ಮ ಫೇಸ್ಬುಕ್ ಖಾತೆಯಲ್ಲಿ ಭವಿಷ್ಯ ನುಡಿದಿದ್ದಾರೆ. ಇವರು ಪಾಯಿಂಟ್ ಮಾಡಿ ಹಾಕಿರುವ ಒಂದಷ್ಟು ಭವಿಷ್ಯವಾಣಿಗಳು ಈ ಕೆಳಕಂಡಂತಿದೆ ಗಮನಿಸಿ.
‘ವಿರಾಟ್ ಸೆಪ್ಟಂಬರ್ 2021-2025ರ ನಡುವೆ ವೃತ್ತಿಪರವಾಗಿ ಮತ್ತು ವಿತ್ತೀಯವಾಗಿ ದೊಡ್ಡ ಯಶಸ್ಸಿನೊಂದಿಗೆ ಸ್ಟ್ರಾಂಗ್ ಕಮ್ಬ್ಯಾಕ್ ಮಾಡಲಿದ್ದಾರೆ’
‘ಆಗಸ್ಟ್ ಫೆಬ್ರವರಿ 2025- 2027ರ ನಡುವೆ ವಿರಾಟ್ ವೃತ್ತಿಜೀವನದಲ್ಲಿ ತೊಡಕುಗಳು ಎದುರಾಗಲಿದೆ’.
‘2027ರಲ್ಲಿ ವಿರಾಟ್ ವೃತ್ತಿಜೀವನವು ಮತ್ತೊಮ್ಮೆ ಪ್ರಾರಂಭವಾಗಲಿದ್ದು, ಮಾರ್ಚ್ 2028ರ ವೇಳೆಗೆ ನಿವೃತ್ತಿ ಹೊಂದಲಿದ್ದಾರೆ’ ಎಂದು ಭವಿಷ್ಯ ನುಡಿದಿದ್ದಾರೆ.
ಅಕಸ್ಮಾತ್ ಇದೇನಾದರೂ ನಿಜವಾದರೆ ಹೇಗೆ? ವಿರಾಟ್ ಅವರ ಅಂತಾರಾಷ್ಟ್ರೀಯ ಸೆಂಚುರಿಗಳು ಮಿಸ್ ಆಗಲಿದೆಯಾ? ಈ ರೀತಿಯ ಹಲವು ಆತಂಕಗಳು ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ