ಬೆಂಗಳೂರು:- ಸಂಕ್ರಾಂತಿ ನಂತರ ಕಾಂಗ್ರೆಸ್ ಸರ್ಕಾರ ಹೋಗುತ್ತದೆ ಎಂಬ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ MB ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ರವಿ ಪ್ರಕರಣ: ಸಿಐಡಿ ಸ್ಥಳ ಪರಿಶೀಲನೆ ಅನುಮತಿ ಕೊಟ್ಟಿಲ್ಲ- ಬಸವರಾಜ ಹೊರಟ್ಟಿ
ಈ ಸಂಬಂಧ ಮಾತನಾಡಿದ ಅವರು,
ಉಪ ಚುನಾವಣೆಯಲ್ಲಿ ಕುಮಾರಸ್ವಾಮಿಗೆ ಹಿನ್ನಡೆಯಾಗಿದೆ. ಅವರು ಹಾಗೂ ಜೆಡಿಎಸ್ ಅಸ್ತಿತ್ವದ ಪ್ರಶ್ನೆ ಎದ್ದಿದೆ. ಇದರಿಂದ ಹತಾಶರಾಗಿ ಅವರು ಮಾತನಾಡುತ್ತಿದ್ದಾರೆ ಎಂದು ಸಚಿವ ಎಂ.ಬಿ ಪಾಟೀಲ್ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಈ ವೇಳೆ 60% ಸರ್ಕಾರ ಎಂಬ ಹೆಚ್ಡಿಕೆ ಹೇಳಿಕೆಗೆ ತಿರುಗೇಟು ನೀಡಿದರು. ಅವರು ಸಾಕ್ಷಿ ನೀಡಿ ಮಾತನಾಡಲಿ. ಸುಮ್ಮನೆ ಹಿಟ್ ಆ್ಯಂಡ್ ರನ್ ಮಾಡುವುದು ಬೇಡ. ಸಂಕ್ರಾಂತಿ ನಂತರ ಕಾಂಗ್ರೆಸ್ ಸರ್ಕಾರ ಹೋಗುತ್ತದೆ ಎಂದಿದ್ದಾರೆ. ಸಂಕ್ರಾಂತಿ ಬಳಿಕ ಜೆಡಿಎಸ್ ಪಕ್ಷ ಇರುತ್ತಾ ನೋಡಿ. ಅವರ ಪಕ್ಷದಲ್ಲಿ ಶಾಸಕರು ಇರಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಸರ್ಕಾರದ ವಿರುದ್ಧ ಯಾವ ಗುತ್ತಿಗೆದಾರರು ಅಸಮಧಾನಗೊಂಡಿದ್ದಾರೆ ಅದನ್ನು ನಿರ್ದಿಷ್ಟವಾಗಿ ಹೇಳಲಿ. ನಾವು ತನಿಖೆ ಮಾಡಿಸುತ್ತೇವೆ. ಕುಮಾರಸ್ವಾಮಿ ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ. ಇಂತಹ ಅವ್ಯವಹಾರ ಆಗಿದೆ ಎಂದು ಮಾಹಿತಿ ಕೊಡಲಿ. ಬಿಜೆಪಿ ಸರ್ಕಾರ ಇದ್ದಾಗ ಕೆಂಪಣ್ಣ ದೂರು ಕೊಟ್ಟಿದ್ದರು. ಅದರ ಮೇಲೆ ಆರೋಪ ಮಾಡಲಾಗಿತ್ತು. ಈಗ ಸುಮ್ಮನೆ ಆರೋಪ ಮಾಡುವುದು ಬೇಡ ಎಂದಿದ್ದಾರೆ.