ಬಿಗ್ ಬಾಸ್ ಮನೆಯಲ್ಲಿ ಪ್ರತಿಯೊಂದಕ್ಕೂ ಅಡ್ಜಸ್ಟ್ ಮಾಡಿಕೊಂಡು ಹೋಗಬೇಕಾಗುತ್ತದೆ. ಅದರಲ್ಲೂ ಊಟದ ವಿಷಯದಲ್ಲಿ ಕಂಪ್ರಮೈಸ್ ಮಾಡಿಕೊಳ್ಳಲೇ ಬೇಕು. ಯಾಕಂದರೆ ದೊಡ್ಮನೆ ಒಳಗೆ ಸ್ಪರ್ಧಿಗಳೆ ಅಡುಗೆ ಮಾಡಬೇಕಾಗುತ್ತದೆ. ಅವರಲ್ಲಿ ಕೆಲವರಿಗೆ ಅಡುಗೆ ಮಾಡಲು ಬಂದರೆ ಮತ್ತೆ ಕೆಲವರಿಗೆ ಅದರ ಗಂಧ ಗಾಳಿಯೂ ಗೊತ್ತಿರುವುದಿಲ್ಲ. ಹಾಗಾಗಿ ಸ್ಪರ್ಧಿಗಳು ಏನೆ ಮಾಡಿದರು ಅದನ್ನು ಅಡ್ಬಸ್ಟ್ ಮಾಡಿಕೊಂಡು ತಿನ್ನಲೇಬೇಕು. ಅದರಲ್ಲೂ ಬಿಗ್ ಬಾಸ್ ಮನೆಯಲ್ಲಿ ಸಸ್ಯಹಾರಿಗಳಿಗೆ ಸಮಸ್ಯೆ ಕೊಂಚ ಚಾಸ್ತಿಯೇ ಇರುತ್ತದೆ.
ಲಕ್ಷುರಿ ಬಜೆಟ್ನಲ್ಲಿ ಸ್ಪರ್ಧಿಗಳು ಮೊದಲು ನಾನ್ವೆಜ್ ಆರ್ಡರ್ ಮಾಡಿಬಿಡುತ್ತಾರೆ, ಪನ್ನೀರು ಕೊನೆಯ ಆಯ್ಕೆ ಆಗಿರುತ್ತದೆ. ಮಾಂಸಹಾರಿಗಳು, ಸಸ್ಯಹಾರಿಗಳು ಇಬ್ಬರೂ ಇದ್ದು, ಒಂದೇ ಒಲೆಯಲ್ಲಿ ಎರಡೂ ಅಡುಗೆ ಆಗುತ್ತಿರುವಾಗ ಮಿಕ್ಸ್ ಆಗಿಬಿಡುತ್ತದೆಯೇ ಎಂಬ ಭಯ ಸಹಜವಾಗಿಯೇ ಸಸ್ಯಹಾರಿಗಳಿಗೆ ಇರುತ್ತದೆ.
ಕಳೆದ ವಾರ ಬಿಗ್ಬಾಸ್ ಮನೆಯಲ್ಲಿ ರೆಸಾರ್ಟ್ ಟಾಸ್ಕ್ ಮಾಡಲಾಗಿದೆ. ಮನೆಯ ಸ್ಪರ್ಧಿಗಳನ್ನು ಎರಡು ಗುಂಪುಗಳನ್ನಾಗಿ ಮಾಡಿ ಅತಿಥಿಗಳಾಗಿ ಮತ್ತು ಸಿಬ್ಬಂದಿಗಳಾಗಿ ಮಾಡಲಾಗಿತ್ತು. ಸಿಬ್ಬಂದಿ ಆಗಿದ್ದವರು ಅತಿಥಿಗಳಿಗೆ ಕೇಳಿದ ಅಡುಗೆ ಮಾಡಿ ಕೊಡಬೇಕಿತ್ತು. ಶನಿವಾರ ಎಪಿಸೋಡ್ಗೆ ಬಂದಿದ್ದ ಸುದೀಪ್, ಭವ್ಯಾ ತಂಡದವರು ಸಿಬ್ಬಂದಿ ಆಗಿದ್ದಾಗ ಅತಿಥಿಗಳಿಗೆ ಮಾಡಿಕೊಟ್ಟ ಊಟವನ್ನು ಮೊದಲು ಅವರು ತಿಂದು ಆ ನಂತರವೇ ಅತಿಥಿಗಳಿಗೆ ಕೊಟ್ಟರು, ಭಾರಿ ಆತುರದಲ್ಲಿ ತಿಂಡಿಗಳನ್ನು ತಿಂದರು, ಆ ವೇಳೆ ಧನರಾಜ್, ಮಿಸ್ ಆಗಿ ಮಾಂಸಾಹಾರ ತಿಂದು ಬಿಟ್ಟರು ಎಂದರು.
ಅದನ್ನು ಧನರಾಜ್ ಸಹ ಒಪ್ಪಿಕೊಂಡರು. ಚಿಕನ್ ಪಾಪ್ಕಾರ್ನ್ ಅನ್ನು ತಪ್ಪಿ ಬಾಯಿಗೆ ಹಾಕಿಕೊಂಡೆ ನಂತರ ಹಾಗೆಯೇ ಅದನ್ನು ಉಗಿದು ಬಿಟ್ಟೆ ಎಂದರು. ಆಗ ಚೈತ್ರಾ, ಪರವಾಗಿಲ್ಲ ಸರ್, ಗೊತ್ತಿಲ್ಲದೆ ಮಾಡಿದ ತಪ್ಪಿಗೆ ಕ್ಷಮೆ ಇರುತ್ತದೆ ಎಂದರು. ಆಗ ಸುದೀಪ್ ಹಾಗಿದ್ದರೆ ನಿಮಗೂ ಕ್ಷಮೆ ಇರುತ್ತದೆ ಬಿಡಿ ಎಂದರು. ಚೈತ್ರಾ ಶಾಕ್ ಆದರು. ಇಲ್ಲ ಸಾರ್ ನಾನು ನಾನ್ವೆಜ್ ತಿಂದಿಲ್ಲ, ಕ್ಯಾಪ್ಸಿಕಮ್ ಮೋಮೋಸ್ ತಿಂದೆ ಅಷ್ಟೆ ಎಂದರು. ನಿಮ್ಮ ಗೆಳೆಯರು ನಿಮಗೆ ನಾನ್ ವೆಜ್ ತಿನ್ನಿಸಿಲ್ಲ ಎಂಬ ಭರವಸೆ ನಿಮಗೆ ಇದೆಯೇ? ಎಂದು ಸುದೀಪ್ ಕೇಳಿದರು. ಸುದೀಪ್ರ ಪ್ರಶ್ನೆಗೆ ಆಘಾತಕ್ಕೆ ಒಳಗಾದರು ಚೈತ್ರಾ.
‘ನನಗೆ ನಾನ್ ವೆಜ್ ತಿನ್ನಿಸಿದ್ದೀರಾ? ನಿಮಗೆ ಒಳ್ಳೆಯದಾಗುತ್ತಾ?’ ಎಂದು ಭವ್ಯಾ ತಂಡದ ವಿರುದ್ಧ ಚೈತ್ರಾ ಗುಡುಗಿದರು. ಆದರೂ ಸುದೀಪ್ ಬಳಿ ಇಲ್ಲ ಸಾರ್ ನಾನು ನಾನ್ ವೆಜ್ ತಿಂದಿಲ್ಲ ಎಂದೇ ವಾದಿಸಿದರು. ಆಗ ಸುದೀಪ್ ನಗುತ್ತಾ, ದೋಸೆ ತಿಂದಿರಿ, ಅದರ ಜೊತೆ ಏನು ತಿಂದಿರಿ ಎಂದರು. ಆಗ ಚೈತ್ರಾ ದೋಸೆ ಜೊತೆ ಪಲ್ಯ ತಿಂದೆ ಎಂದರು. ಅದು ಆಲೂಗಡ್ಡೆ ಪಲ್ಯೆ ಅದರಲ್ಲಿ ಏನೂ ಬೆರೆತಿರಲಿಲ್ಲ ಎಂದರು. ಆಗ ಸುದೀಪ್, ಆಲೂಗಡ್ಡೆ ಪಲ್ಯೆ ಮಾಡಲು ಆಲೂಗಡ್ಡೆಯನ್ನು ಬೇಯಿಸಿದರಲ್ಲ, ಆಲೂಗಡ್ಡೆ ಬೇಯಿಸಲು ಬಳಸಿದ್ದು, ಚಿಕನ್ ಬೇಯಿಸಿದ ನೀರನ್ನು ಎಂದರು. ಅದೇ ಕಾರಣಕ್ಕೆ ನಿಮಗೆ ಆಲೂಗಡ್ಡೆ ಪಲ್ಯೆ ಉಪ್ಪು ಹೆಚ್ಚಾಗಿದೆ ಅನಿಸಿದ್ದು’ ಎಂದರು ಸುದೀಪ್. ಆದರೆ ಈ ವಿಷಯವನ್ನು ಸುದೀಪ್ ತಮಾಷೆಯಾಗಿ ಹೇಳಿದರು. ಆದರೆ ನಿಜವಾಗಿಯೂ ಚಿಕ್ಕನ್ ಬೇಯಿಸಿದ ನೀರಿನಲ್ಲೇ ಆಲೂಗಡ್ಡೆ ಬೇಯಿಸಿದ್ದರಾ ಎಂಬುದಕ್ಕೆ ಸ್ಪಷ್ಟನೆ ಇಲ್ಲ.