ಬಳ್ಳಾರಿ : ಕೋರ್ ಕಮಿಟಿ ಸಭೆ ಘಟನೆಯ ಬಳಿಕ ಶ್ರೀರಾಮುಲು ಸ್ವಪಕ್ಷೀಯರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋರ್ ಕಮಿಟಿ ಸಭೆಯಲ್ಲಿ ನನ್ನ ಬಗ್ಗೆ ಅಪಮಾನ ಮಾಡಿದ್ದಕ್ಕೆ ನಾನು ಹೊರ ಬಂದೆ ಅಂತಾ ಶ್ರೀರಾಮುಲು ಹೇಳದ್ಧಾರೆ. ಬಳ್ಳಾರಿಯಲ್ಲಿ ಮಾತನಾಡಿದ̧ವ್ರು ರಾಧಾ ಮೊಹನ್ ಅಗರ್ವಲ್ ಅವರು ಕೋರ್ ಕಮೀಟಿ ಸಭೆ ಕರೆದಿದ್ರು. ಸಂಘಟನೆಯ ಬಗ್ಗೆ ಚರ್ಚೆ ನಡೆದಿತ್ತು. ಒಂದು ಗಂಟೆ ಚರ್ಚೆಯಾಯ್ತು. ಆದರೆ ಸಭೆಯಲ್ಲಿ ರಾಧಾಮೋಹನ್ ನೇರವಾಗಿ ಅಸಹ್ಯವಾಗಿ ನನ್ನನ್ನು ನೋಡಿದ್ರು. ಸೋಲಿಗೆ ನೀವೇ ಕಾರಣ ಎಂದು ನೇರವಾಗಿ ಅರೋಪ ಮಾಡಿದ್ರು.ಆರಂಭದಿಂದಲೂ ಚುನಾವಣೆ ಪ್ರಚಾರ ಮಾಡಿದ್ದೇನೆ. ಡಬಲ್ ಗೇಮ್ ಮಾಡ್ತೀರಾ ಎಂದು ಅರೋಪ ಮಾಡಿದ್ರು. ಇದು ಸರಿಯಲ್ಲ ಎಂದು ಗಟ್ಟಿಯಾಗಿ ವಾದ ಮಾಡಿದೆ. ಕೋರ್ ಕಮಿಟಿಯಲ್ಲಿ ಅಪಮಾನ ಮಾಡಿ ನೋವು ಕೊಡ್ತಿದ್ದಿರಾ. ಗಾಯದ ಮೇಲೆ ಬರೆ ಎಳೆಯ ಬೇಡಿ ಎಂದು ಹೇಳಿ ಎದ್ದು ಹೊರಗೆ ಬಂದೆ. ಕೆಲ ಹಿರಿಯ ಮುಖಂಡರು ಎದ್ದು ಹೋಗೋದು ಶೋಭೆಯಲ್ಲ ಎಂದು ಹೇಳಿದ್ರು. ಆದರೆ ಉಸ್ತುವಾರಿಗಳು ಹಿಂದಿಯಲ್ಲಿ ಮಾತನಾಡುವ ವೇಳೆ ರಾಜ್ಯಾಧ್ಯಕ್ಷರು ನನ್ನ ರಕ್ಷಣೆಗೆ ಬರಲಿಲ್ಲ. ರಾಜ್ಯ ಅಧ್ಯಕ್ಷರಿಗೆ ನೇರವಾಗಿ ಅರೋಪ ಮಾಡಿದೆ. ನಾನೇನು ಮಾಡೋಕೆ ಅಗಲ್ಲ ಎಂದು ವಿಜಯೇಂದ್ರ ಹೇಳಿದ್ರು. ಸಂಡೂರು ಸೋಲಿನ ಬಗ್ಗೆ ಸದಾನಾಂದ ಗೌಡ ವರದಿ ಕೊಡ್ತೇವೆ ಎಂದು ಹೇಳಿದ್ರು. ವರದಿ ಕೊಡೋ ಮುನ್ನವೇ ಇಷ್ಟೇಲ್ಲ ಹೇಗಾಯ್ತು ಶ್ರೀರಾಮುಲು ತಪ್ಪಿತಸ್ಥರು ಎಂದು ಯಾರು ಹೇಳಿದ್ರು ಅಂತಾ ತಮ್ಮ ವಿರೋಧಿಗಳ ಬಗ್ಗೆ ಕಿಡಿಕಾರಿದ್ರು.
ಜನಾರ್ದನ ರೆಡ್ಡಿ ಸುಳ್ಳು ಹೇಳಿದ್ದಾರೆ ನನ್ನ ಮೇಲೆ ಸುಳ್ಳು ಅರೋಪ ಮಾಡಿದ್ದಾರೆ. ನಾನು ಏನು ಮಾತಾಡಿಲ್ಲ ಅಂದರೆ ತಪ್ಪಿಲ್ಲ, ಪಕ್ಷ ತಾಯಿಯಂತೆ ನಾನು ದ್ರೋಹ ಮಾಡಿಲ್ಲ. ಪಕ್ಷ ಬಿಟ್ಟು ಹೋಗುವ ಸಂದರ್ಭ ಬಂದರೇ, ಪಿಎಂ ಹೋಗಿ ಎಲ್ಲಾ ವಿಷಯ ತಿಳಿಸುತ್ತೇನೆ. ಮೋದಿ ಅವರು ನನಗೆ ತುಂಬಾ ಗೌರವ ಕೊಡ್ತಾರೆ ಅವರ ಹತ್ತಿರ ವಿಶ್ವಾಸ ಕಳೆದುಕೊಳ್ಳೋಕೆ ಇಷ್ಟ ಪಡೋದಿಲ್ಲ. ರಾಜನಾಥ್ ಸಿಂಗ್ ಸೇರಿದಂತೆ ಎಲ್ಲಾ ಹಿರಿಯರಿಗೆ ಸತ್ಯ ತಿಳಿಸುತ್ತೇನೆ. ಸುಳ್ಳು ಬಲಾಢ್ಯರ ಕೈಗೆ ಹೋದ್ರು ಸತ್ಯವಾಗ್ತದೆ. ಸತ್ಯ ಬಲವಿಲ್ಲದವರ ಕಡೆ ಇದ್ರೇ ಸುಳ್ಳಾಗುತ್ತಿದೆ. ಸತ್ಯ ಸೋಲುತ್ತಿದೆ ಎಂದು ಸಂಘದ ಪ್ರಮುಖರಿಗೆ ಪಕ್ಷದ ಮುಖಂಡರಿಗೆ ಎಲ್ಲವನ್ನೂ ತಿಳಿಸಿದ್ದೇನೆ.
ಸರ್ಕಾರ ಒಂದು ಮಹಿಳೆಯರಿಗೆ ಕೊಟ್ಟು ಇನ್ನೊಂದು ಕಡೆ ಕಸಿದುಕೊಳ್ಳುತ್ತಿದೆ – ಬೊಮ್ಮಾಯಿ
ನಾನು ಹಾದಿ ಬೀದಿಯಲ್ಲಿ ಹೋದ ವ್ಯಕ್ತಿಯಲ್ಲ, ನಮ್ಮದು ಪೊಲಿಟಿಕಲ್ ಕುಟುಂಬ. ನಮ್ಮ ಸೋದರ ಮಾವ ರೈಲ್ವೆ ಬಾಬು ವಿಧಾನಸಭೆ ಅಕಾಂಕ್ಷಿಯಾಗಿದ್ರು. ಯಾರೋ ಹೇಳಿದ ಹಾಗೆ ಹಾದಿಬೀದಿ ಪ್ಯಾಮಿಲಿ ಅಲ್ಲ. ಯಾರೊ ಕಾರ್ಪೋರೆಟ್ ಹತ್ಯೆಯಾಯ್ತು ಎಂದು ಸುಳ್ಳಿನ ಮೇಲೆ ಗೋಡೆ ಕಟ್ಟುವ ಕೆಲಸ ವಾಗಿದೆ. ದಬ್ಬಾಳಿಕೆ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಯಾರ ಕೃಪಾಕಟಾಕ್ಷದಿಂದ ನಾನು ಬೆಳೆದಿಲ್ಲ ಅಂತಾ ಜನಾರ್ದನ ರೆಡ್ಡಿಗೆ ಟಾಂಗ್ ನೀಡಿದರು.
ಇದೇ ನಾಯಕರು, ಮೊಳಕಾಲ್ಮೂರಿನಿಂದ ಸ್ಪರ್ಧೆ ಮಾಡಿದಾಗ ಮ್ಯಾಜಿಕ್ ಮಾಡಿ ಗೆಲ್ಲಿಸಿದ್ದೇನೆ ಎಂದು ಹೇಳಿದರು. ಆದರೆ ರಾಮುಲುಗೆ ಶಕ್ತಿ ಇದೆ. ಎರಡು ಕಡೆ ನಿಂತು ಸ್ಪರ್ಧೆ ಮಾಡೋದು ಅಷ್ಟು ಸುಲಭ ಅಲ್ಲ. ಈತ ಬಂದು ಮ್ಯಾಜಿಕ್ ಮಾಡಿ ಗೆಲ್ಲಿಸಿಲ್ಲ.. ಪಕ್,ನನ್ನ ಕ್ಯಾಪಸಿಟಿ ನೋಡಿ ಎರಡು ಕಡೆ ಟಿಕೆಟ್ ನೀಡಿದೆ. ಚಿತ್ರದುರ್ಗದಲ್ಲಿ ಅರು ವಿಧಾನಸಭೆ ಕ್ಷೇತ್ರದಲ್ಲಿ ಗೆದ್ದಿದ್ದೇವೆ.. ರಾಮುಲು ಪ್ರಭಾವಿ ಕ್ಯಾಂಡೇಟ್ ಎಂದು ಅಮಿತ್ ಶಾ ಹೇಳಿದ್ದಾರೆ. ಲೋಕಸಭೆ ಬಿಟ್ಟು ಶ್ರೀರಾಮುಲು ಮತ್ತು ಯಡಿಯೂರಪ್ಪ ಇಬ್ಬರನ್ನು 2018ರಲ್ಕಿ ವಿಧಾನ ಸಭೆಗೆ ಕಳುಹಿಸಿದ್ರು. ಬಾದಾಮಿಯಲ್ಲಿ ನಮ್ಮ ಸಮುದಾಯವೇ ಇರಲಿಲ್ಲ ಅದ್ರೂ ಪಕ್ಷದ ನಿರ್ಣಯ ಹಿನ್ನೆಲೆ ಸ್ಪರ್ಧೆ ಮಾಡಿದೆ. ಅವನು ಇವನು ಅನ್ನೋ ಸಂಪ್ರದಾಯ ನನ್ನದಲ್ಲ. ಅವನು ಅಂದ ಹಾಗೇ ನಾನು ಹೇಳೋಕೆ ಅಗಲ್ಲ. ನನ್ನನ್ನು ಕ್ರಿಮಿನಲ್ ಅಗಿ ಬಿಂಬಿಸಲು ಪ್ರಯತ್ನ ಮಾಡಿದ್ದಾರೆ. ನಾನು ಯಾರಿಗೂ ವಯಕ್ತಿಕ ಹಾನಿ ಮಾಡಿದ್ರೇ ತೋರಿಸಲು.
ರಾಜಕೀಯ ಇರಲಿ ಇರದೇ ಇರಲಿ ನಾನು ಬಡವರ ಪರ ಇರುತ್ತೆ. ಯಾರನ್ನೂ ಯಾರು ಬೆಳೆಸಲು ಅಗಲ್ಲ ಬೆಳೆಯಲು ಹಣೆಬರಹ ಇರಬೇಕು. ಕ್ರಿಮಿನಲ್ ಅನ್ನೋದು ಬಿಂಬಿಸೋದು ಸರಿಯಲ್ಲ ಅವರನೇ ಅವರ ಕ್ರಿಮಿನಲ್ ಅ್ಯಕ್ಟಿವಿಟಿ ಬಗ್ಗೆ ನಾನು ದಾಖಲೆ ಬಿಡುವೆ. ಅವರು ಕತೆಗಳು ನನಗೂ ಗೊತ್ತು ಸಮಯ ಬಂದಾಗ ಎಲ್ಲವನ್ನೂ ಬಿಚ್ಚಿಡುವೆ. ನನ್ನ ರಾಜಕೀಯ ಜೀವನಕ್ಕೆ ಕಳಂಕ ಇಡೋ ಕೆಲಸ ಮಾಡಬೇಡಿ. ನೀವು ಹೀಗೆ ಮಾಡಿದರೆ, ನಿಮ್ಮ ಕುಕೃತ್ಯ ಬಿಚ್ಚಿಡುವೆ ಎಂದು ಜನಾರ್ದನ ರೆಡ್ಡಿಗೆ ಟಾಂಗ್ ನೀಡಿದರು.
ಇನ್ನೂ ಕಾಂಗ್ರೆಸ್ ಸೇರುವ ಸುದ್ದಿ ವಿಚಾರವಾಗಿ ಪ್ರತಿಕ್ರಿಯಿಸಿ, ಸತೀಸ್ ಜಾರಕಿಹೊಳಿ ಮಣಿಸೋಕೆ ನಾನ್ಯಾರು. ಈ ಊರಿನ ರಾಜ ಮತ್ತೊಂದು ಊರಿನಲ್ಲಿ ಗುಲಾಮನಷ್ಟೇ.ಈ ಪಕ್ಷದಲ್ಲಿ ನಾನು ಪ್ರಭಾವಿ ಅದ್ರೇ ಅಲ್ಲಿ ನಾನು ಪ್ರಭಾವಿಯಾಗೋಕೆ ಅಗಲ್ಲ. ಡಿಕೆಶಿ ನನ್ನನ್ನು ಬಳಸಲು ನಾನು ಮಗು ಅಲ್ಲ.. ಸಮುದಾಯದ ಲೀಡರ್ ಅದ್ರೇ ಕಾಂಗ್ರೆಸ್ ಗೂ ನಮಗೂ ಸಂಬಂಧವಿಲ್ಲ. ದುರುದ್ದೇಶದಿಂದ ರಾಮುಲು ತುಳಿಯುವ ಪ್ರಯತ್ನ ಮಾಡಿರೋದು. ಜನಾರ್ದನ ರೆಡ್ಡಿ ಇಲ್ಲದೇ ಹೋದಾಗಲು ಬಿಜೆಪಿ ಪಕ್ಷವನ್ನು ಕಟ್ಟಿದ್ದೇನೆ. ಯಡಿಯೂರಪ್ಪ ನನ್ನನ್ನು ಕರೆದು ಮೋದಿ ಹೇಳಿದಾಗ ನಾವು ಪಕ್ಷ ಬಿಟ್ಟು ಬಿಜೆಪಿಗೆ ಬಂದಿದ್ದೇವೆ. ಆಗ ಜನಾರ್ದನ ರೆಡ್ಡಿ ನಾಗೇಂದ್ರ ಎಲ್ಲರೂ ಜೈಲಲ್ಲಿಇದ್ದರು. ಜನಾರ್ದನ ರೆಡ್ಡಿ ಜೈಲಿನ ಒಳಗಡೆ ಇದ್ದಾಗ. ನಾಲ್ಕು ವರ್ಷ ಜೈಲಿನಲ್ಲಿ ಇದ್ದರು ಅವರಿವರ ಕೈಕಾಲು ಹಿಡಿದು ಹೊರಗೆ ತರುವ ಕೆಲಸ ಮಾಡಿದೆ. ನಾನು ಏನು ಮಾಡಿದೆ ಅನ್ನೋ ಬಗ್ಗೆ ಅವರಿಗೆ ಗೊತ್ತಿದೆ..