ವಿಜಯಪುರ: ಸೋನಿಯಾ, ರಾಹುಲ್ ಜೆರುಸಲೇಂಗೆ ಹೋದ್ರೆ ಬಡವರ ಹೊಟ್ಟೆ ತುಂಬುತ್ತಾ? ಎಂದು ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ. ವಿಜಯಪುರದಲ್ಲಿ ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಖರ್ಗೆ ಕುಂಭ ಮೇಳದ ಬಗ್ಗೆ ಮಾತಾಡ್ತಾರೆ,
ಹಿಂದೂ ಸಮಾಜಕ್ಕೆ ಅಪಮಾನ ಮಾಡುವ, ಗೋ ಹತ್ಯೆ ಮಾಡುವ ಗೂಂಡಾಗಳ ಬಗ್ಗೆ ಆತಂಕ ಇದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಜೇರುಸಲೆಂಗೆ ಹೋದರೆ ಬಡವರ ಹೊಟ್ಟೆ ತುಂಬುತ್ತಾ? ಮೆಕ್ಕಾಗೆ ಹೋದರೆ ಬಡವರ ಹೊಟ್ಟೆ ತುಂಬುತ್ತಾ? ಧೈರ್ಯ ಇದ್ರೆ ಈ ಬಗ್ಗೆ ಮಾತನಾಡಲಿ ಎಂದು ಈಶ್ವರಪ್ಪ ಖರ್ಗೆಗೆ ಸವಾಲು ಹಾಕಿದ್ದಾರೆ.
ಹೊನ್ನಾವರದಲ್ಲಿ ಗೋ ಹಂತಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಗಬ್ಬದ ಹಸು ಯಾರಿಗೆ ಬೇಕು ಅಂತಾ ಕೇಳ್ತಾರೋ ಅದರ ಮಾಂಸದ ಪೋಟೊವನ್ನು ವಾಟ್ಸಾಪ್ ಮೂಲಕ ಕಳಿಸ್ತಾರೆ. ಗಬ್ಬದ ಹಸು, ಗೋವನ್ನು ತಾಯಿ ಎನ್ನುತ್ತೇವೆ. ಇದು ಯಾವ ನ್ಯಾಯಾ? ಎಲ್ಲಿದ್ದೇವೆ?, ನಾವು ಬದುಕಬೇಕಾ. ಸಾಯಬೇಕಾ ತಿಳಿತಿಲ್ಲ ಎಂದು ಆಕ್ರೋಶ ಹೊರಹಾಕಿದರು.