ಬೆಂಗಳೂರು:- ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಆಗುತ್ತಾರೆ, ಡಿಸಿಎಂ ಆಗ್ತಾರೆ ಎಂಬ ವಿಚಾರದ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಸದ್ಯಕ್ಕೆ ಯಾವ ಚರ್ಚೆಯೂ ಇಲ್ಲ. ಎಲ್ಲರೂ ಚುನಾವಣೆಯಲ್ಲಿ ಬಿಜಿಯಾಗಿದ್ದಾರೆ. ಅದೇನೆ ಇದ್ರೂ ಹೈಕಮಾಂಡ್ ತೀರ್ಮಾನ ಮಾಡಬೇಕು. ಅಂತಹ ಚರ್ಚೆ ಈಗ ಸದ್ಯಕ್ಕೆ ನಡೆಯುತ್ತಿಲ್ಲ. ಚುನಾವಣೆ ಮುಗಿದ ಮೇಲೆ ಏನಾಗುತ್ತದೆ, ಮುಗಿದ ಮೇಲೆ ಏನು ಮಾಡ್ತಾರೆ ಕಾದುನೋಡಬೇಕಿದೆ ಎಂದು ಹೇಳಿದರು.
ಇನ್ನೂ ಬೆಳಗಾವಿ ರಾಜಕಾರಣದಲ್ಲಿ ಹೊರಗಿನವರ ಹಸ್ತಕ್ಷೇಪದ ವಿಚಾರದಲ್ಲಿ ಬುಸುಗುಡುತ್ತಿರುವ ಸಚಿವ ಸತೀಶ್ ಜಾರಕಿಹೊಳಿ ಅವರು ಇದೀಗ ಮತ್ತೊಮ್ಮೆ ತಮ್ಮ ಆಕ್ಷೇಪವನ್ನು ಹೊರಹಾಕಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಮಾತೇ ಇಲ್ಲ ಎಂದರು.
ʻʻಡಿ.ಕೆ ಶಿವಕುಮಾರ್ ಅವರು ನಮ್ಮ ಮನೆಗೆ ಸುಮಾರು ಬಾರಿ ಬಂದಿದ್ದಾರೆ. ಈ ವೇಳೆ ಪಕ್ಷದ ವಿಚಾರ ಮತ್ತು ಅಭಿವೃದ್ಧಿ ವಿಚಾರದ ಕುರಿತು ಚರ್ಚೆ ಆಗಿದೆʼʼ ಎಂದು ಹೇಳಿದ ಅವರು, ನಾವು ಮೈಸೂರಿಗೆ ಭೇಟಿ ನೀಡುವ ವಿಚಾರವೇ ಬೇರೆ, ಅವರನ್ನು ಭೇಟಿಯಾದ ಉದ್ದೇಶವೇ ಬೇರೆ ಎಂದರು. ಈ ಎಲ್ಲ ವಿಚಾರಗಳು ಚುನಾವಣೆ ಆದ ಬಳಿಕ ಚರ್ಚೆಗೆ ಬರಬಹುದು. ಚುನಾವಣೆ ಬಳಿಕ ಯಾವ ಹೊಸ ವಿಚಾರ ಬರುತ್ತದೆ ಎಂದು ಕಾದು ನೋಡೋಣ ಎಂದು ಹೇಳಿದರು. ಆದರೆ, ಅಡ್ಜಸ್ಟ್ಮೆಂಟ್ ಎನ್ನುವ ಪ್ರಶ್ನೆಯೇ ಬರುವುದಿಲ್ಲ ಎಂದರು.