ಬೆಂಗಳೂರು: 2022ರಲ್ಲಿ ಐಪಿಎಲ್ಗೆ ಪದಾರ್ಪಣೆ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ನಾಯಕನಾಗಿದ್ದ ಕೆ.ಎಲ್ ರಾಹುಲ್ ಸತತ 2 ಬಾರಿ ತಂಡವನ್ನು ಪ್ಲೇ ಆಫ್ ಪ್ರವೇಶಿಸುವಂತೆ ಮಾಡಿದ್ದರು. ಆದ್ರೆ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿವೆ.
2024ರ ಐಪಿಎಲ್ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಹೀನಾಯವಾಗಿ ಸೋತಿತ್ತು. ಈ ವೇಳೆ ಲಕ್ನೋ ಫ್ರಾಂಚೈಸಿ ಮಾಲೀಕರಾದ ಸಂಜೀವ್ ಗೋಯೆಂಕಾ ರಾಹುಲ್ ವಿರುದ್ಧ ಮೈದಾನದಲ್ಲೇ ರೇಗಾಡಿದ್ದರು. ಈ ವೀಡಿಯೋ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಘಟನೆಯಿಂದ ರಾಹುಲ್, ಲಕ್ನೋ ತಂಡದಲ್ಲಿ ಮುಂದುವರಿಯುವ ಆಸಕ್ತಿ ಕಳೆದುಕೊಂಡಿದ್ದು, ಮೆಗಾ ಹರಾಜಿಗೂ ಮುನ್ನ ರಾಹುಲ್ ಆರ್ಸಿಬಿ ತಂಡ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.
Okra For Diabetes: ಮಧುಮೇಹಕ್ಕೆ ಬೆಂಡೆಕಾಯಿ ರಾಮಬಾಣ! ಕ್ಷಣಾರ್ಧದಲ್ಲಿ ನಿಮ್ಮ ಸಕ್ಕರೆ ಮಟ್ಟ ನಿಯಂತ್ರಣ
2013ರಿಂದ ಐಪಿಎಲ್ ವೃತ್ತಿ ಬದುಕು ಆರಂಭಿಸಿದ ಕೆ.ಎಲ್ ರಾಹುಲ್ ಮೊದಲು ಸೇರಿದ್ದು ಆರ್ಸಿಬಿ ತಂಡವನ್ನೇ. 2013ರಲ್ಲಿ ಆರ್ಸಿಬಿ ತಂಡದಲ್ಲಿ ಆಡಿದ್ದ ರಾಹುಲ್ 2014 ಮತ್ತು 2015ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಿದ್ದರು. ಪುನಃ 2016ರಲ್ಲಿ ಆರ್ಸಿಬಿ ತಂಡವನ್ನೇ ಸೇರಿಕೊಂಡಿದ್ದರು.
2017ರಲ್ಲಿ ಆರ್ಸಿಬಿಯಲ್ಲೇ ಆಡುವ ಅವಕಾಶವಿದ್ದರೂ ಗಾಯದ ಸಮಸ್ಯೆಯಿಂದ ಹೊರಗುಳಿದ್ದರು. ಬಳಿಕ 2018 ರಿಂದ 2021ರ ವರೆಗೆ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದ ಕೆ.ಎಲ್ ರಾಹುಲ್ 2022ರಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೇರಿಕೊಂಡರು. ಈ ವರೆಗೆ ಐಪಿಎಲ್ನಲ್ಲಿ 132 ಪಂದ್ಯಗಳನ್ನಾಡಿರುವ ಕೆ.ಎಲ್ ರಾಹುಲ್ 134.61 ಸ್ಟ್ರೈಕ್ ರೇಟ್ನಲ್ಲಿ 4,683 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕ, 37 ಅರ್ಧಶತಕ ಸೇರಿವೆ.