ಟಿ20 ವಿಶ್ವಕಪ್ನ ಅವಿಸ್ಮರಣೀಯ ಗೆಲುವಿನ ವಿದಾಯ ಪಡೆದ ವಿರಾಟ್ ಕೊಹ್ಲಿ, ಈಗ ಮತ್ತೊಂದು ಫಾರ್ಮೆಟ್ನಿಂದಲೂ ತೆರೆಮರೆಗೆ ಸರಿಯುವ ಕಾಲ ಸನ್ನಿಹಿತವಾಗಿದೆ. ಟಿ20 ಫಾರ್ಮೆಟ್ನಂತೆಯೇ ಏಕದಿನ ಕ್ರಿಕೆಟ್ನಿಂದಲೂ ದೂರ ಸರಿಯುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಭದ್ರತಾ ಕಾರಣಕ್ಕಾಗಿ ಭಾರತವನ್ನು ಕಳುಹಿಸಲು ನಿರಾಕರಿಸಿದ್ರೆ BCCI ಲಿಖಿತ ರೂಪದಲ್ಲಿ ಕೊಡಿ: ಪಾಕ್ ಪಟ್ಟು
ಇದೇ ನವೆಂಬರ್ ಬಳಿಕ 36ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಮುಂದಿನ 2027ರ ಏಕದಿನ ವಿಶ್ವಕಪ್ ವೇಳೆಗೆ ವಿರಾಟ್ ಕೊಹ್ಲಿ ವಯಸ್ಸು 39 ಆಗಿರಲಿದೆ. ಹೀಗಾಗಿ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲುವಿನೊಂದಿಗೆ ಏಕದಿನ ಫಾರ್ಮೆಟ್ಗೂ ಗುಡ್ ಬೈ ಹೇಳುವ ಲೆಕ್ಕಚಾರ ಕೊಹ್ಲಿಯದ್ದಾಗಿದೆ. ಅಕಸ್ಮಾತ್ ಇದೇ ನಡೆಯೋದಾದ್ರೆ, ಮುಂದಿನ 7 ತಿಂಗಳು ಮಾತ್ರವೇ ವಿರಾಟ್, ಏಕದಿನ ಫಾರ್ಮೆಟ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
2027ರ ಏಕದಿನ ವಿಶ್ವಕಪ್ಗೆ ಹೊಸ ತಂಡವನ್ನು ಕಟ್ಟಬೇಕಾದ ಸವಾಲು ಕೂಡ ಇದೆ. ಇದೇ ಕಾರಣಕ್ಕೆ ವಿರಾಟ್, ಚಾಂಪಿಯನ್ಸ್ ಟ್ರೋಫಿ ಗೆಲುವಿನೊಂದಿಗೆ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ
ಟೆಸ್ಟ್ ಕ್ರಿಕೆಟ್ಗೆ ಮಾತ್ರ ಸೀಮಿತವಾಗೋ ಸಾಧ್ಯತೆ ಇದೆ. 2025ರ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ನತ್ತಲೇ ದೃಷ್ಟಿ ನೆಡಲಿರುವ ವಿರಾಟ್, ಎರಡ್ಮೂರು ವರ್ಷಗಳ ಕಾಲ ರೆಡ್ ಬಾಲ್ ಕ್ರಿಕೆಟ್ನಲ್ಲಿ ಮುಂದುವರಿಯಲಿದ್ದಾರೆ. ಈ ಬಳಿಕ ಟೆಸ್ಟ್ನಿಂದ ನಿರ್ಗಮಿಸಬಹುದು.