ಬಾಲಿವುಡ್ ನ ಹೆಸರಾಂತ ನಟಿ ಕಂಗನಾ ರಣಾವತ್ ರಾಜಕಾರಣಕ್ಕೆ ಬರುವ ವಿಚಾರ ಹಲವು ತಿಂಗಳಿಂದ ಭಾರೀ ಸದ್ದು ಮಾಡುತ್ತಿದೆ. ಅದರಲ್ಲೂ ಅವರು 2024 ಲೋಕಸಭಾ ಚುನಾವಣೆಗೆ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದಾರೆ ಎನ್ನುವುದು ಚರ್ಚೆಗೂ ಕಾರಣವಾಗಿದೆ. ನಿಜವಾಗಿಯೂ ಕಂಗನಾ ಚುನಾವಣೆಗೆ ನಿಲ್ತಾರಾ? ಅವರಿಗೆ ಬಿಜೆಪಿ ಟಿಕೆಟ್ ಕೊಡುತ್ತಾ ಎನ್ನುವ ಕುತೂಹಲ ಮೂಡಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಭೇಟಿ ಮಾಡುವ ಮೂಲಕ ಕಂಗನಾ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.
ಈ ಹಿಂದೆ ಕಂಗನಾ ಅವರ ತಂದೆಯೂ ಮಗಳ ರಾಜಕೀಯ ಭವಿಷ್ಯ ಕುರಿತಂತೆ ಮಾತನಾಡಿದ್ದರು. ತಂದೆ ಅಮರ್ದೀಪ್ ರನೌತ್ ರಾಜಕಾರಣದ ಬಗ್ಗೆ ಮಾತನಾಡಿ, ಮಗಳು 2024 ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಹೇಳಿದ್ದರು. ಆದರೆ, ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವುದನ್ನು ಹೇಳಿರಲಿಲ್ಲ. ಈ ಕುರಿತಂತೆ ನಡ್ಡಾ ಜೊತೆ ಕಂಗನಾ ಮಾತನಾಡಿದ್ದಾರೆ.
ನಟಿ ಕಂಗನಾ ರಣಾವತ್, ರಾಜಕಾರಣಕ್ಕೆ (Politics) ಪ್ರವೇಶ ಮಾಡುತ್ತಾರಾ? ಮುಂದಿನ ಲೋಕಸಭಾ (Lok Sabha) ಚುನಾವಣೆಯಲ್ಲಿ (Elections) ಭಾಗಿ ಆಗ್ತಾರಾ ಇಂಥದ್ದೊಂದು ಪ್ರಶ್ನೆ ಎದುರಾಗಿತ್ತು. ಅವರ ನಟನೆಯ ತೇಜಸ್ ಸಿನಿಮಾ ರಿಲೀಸ್ ಬೆನ್ನಲ್ಲೇ ಕಂಗನಾ ದ್ವಾರಕಾಗೆ ಬಂದಿಳಿದಿದ್ದರು. ದ್ವಾರಕಾಧೀಶನ ದರ್ಶನ ಪಡೆದು, ರಾಜಕಾರಣದ ಕುರಿತಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ್ದರು.