ಡಿಸೆಂಬರ್ನಲ್ಲಿ ನಡೆಯಲಿರುವ ಈ ವರ್ಷದ ಐಪಿಎಲ್ ಹರಾಜಿಗೂ ಮುನ್ನ ಹಾರ್ದಿಕ್ ಪಾಂಡ್ಯ ಐದು ಬಾರಿ ಐಪಿಎಲ್ ವಿಜೇತ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಲು ಕುರಿತು ವರದಿಯಾಗಿದೆ.
ಐಪಿಎಲ್ ಫ್ರಾಂಚೈಸಿಗಳು ಆಟಗಾರರನ್ನು ವಿನಿಮಯ ಮಾಡಿಕೊಳ್ಳುವ ಟ್ರೇಡಿಂಗ್ ವಿಂಡೋ ಮುಗಿಯಲು ಇನ್ನೊಂದು ದಿನ ಬಾಕಿ ಇರುವಂತೆಯೇ ಹಾರ್ದಿಕ್ ವಿಚಾರ ಚರ್ಚೆಗೆ ಗ್ರಾಸವಾಗಿದೆ.
ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ಗೆ ಮರಳಲಿದ್ದಾರೆ ಎಂಬ ವರದಿಗಳಿವೆ. ಆದರೆ ಈ ಬಗ್ಗೆ ಗುಜರಾತ್ ಟೈಟಾನ್ಸ್ ಅಥವಾ ಮುಂಬೈ ಇಂಡಿಯನ್ಸ್ ಯಾವುದೇ ಹೇಳಿಕೆ ನೀಡಿಲ್ಲ. ಆಟಗಾರರನ್ನು ಬದಲಿಸಲು ಫ್ರಾಂಚೈಸಿಗಳಿಗೆ ಭಾನುವಾರದವರೆಗೆ ಅವಕಾಶವಿದೆ. ಅಲ್ಲಿಯವರೆಗೆ ಈ ಬಗ್ಗೆ ಸ್ಪಷ್ಟತೆ ಸಿಗುವ ಸಾಧ್ಯತೆ ಇಲ್ಲದಂತಾಗಿದೆ. ಪಾಂಡ್ಯ ಏಳು ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ಪರ ಆಡಿರುವುದು ಗಮನಾರ್ಹ.
2022ರ ಸೀಸನ್ಗೂ ಮುನ್ನ ಮುಂಬೈ ತಂಡದ ಪರ ಆಡುತ್ತಿದ್ದ ಪಾಂಡ್ಯರನ್ನು ತಮ್ಮೆ ತಂಡಕ್ಕೆ ಕರೆತಂದ ಗುಜರಾತ್ ಟೈಟಾನ್ಸ್, ನಾಯಕತ್ವ ಪಟ್ಟವನ್ನು ನೀಡಿತು. ಹಾರ್ದಿಕ್ ನಾಯಕತ್ವದಲ್ಲಿ ಗುಜರಾತ್ ಸತತ ಎರಡು ವರ್ಷಗಳ ಫೈನಲ್ ತಲುಪಿದೆ. ಮೊದಲ ವರ್ಷ ಪ್ರಶಸ್ತಿ ಗೆದ್ದಿದ್ದ ಗುಜರಾತ್ ತಂಡ ಈ ವರ್ಷ ಚೆನ್ನೈ ವಿರುದ್ಧ ಸೋಲು ಕಂಡಿತು. ಹಾರ್ದಿಕ್ ಮುಂಬೈಗೆ ಮರಳುವ ಬಗ್ಗೆ ಮಾತುಕತೆ ನಡೆದಿದೆ. ಫ್ರಾಂಚೈಸಿ ಆಗುವ ಸಾಧ್ಯತೆ ಇದೆ. ಒಪ್ಪಂದ ಇನ್ನೂ ಮುಗಿದಿಲ್ಲ ಎಂದು ಗುಜರಾತ್ ಟೈಟಾನ್ಸ್ ಮೂಲಗಳು ತಿಳಿಸಿವೆ.