ಬೆಂಗಳೂರು: ಎಲ್ಲರೂ ಸೇರಿಯೇ ಹಾಸನ ಸಮಾವೇಶ ಮಾಡುತ್ತಿದ್ದೇವೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಮಾಕ್ಯ ಟೆಂಪಲ್ ಭೇಟಿ ವಿಚಾರ ಸಮಯ ಸಿಕ್ಕಿರಲಿಲ್ಲ ಅದಕ್ಕೆ ಹೋಗಿದ್ದೆ, ಜನರನ್ನು ದೇವರು ಎಂದು ನಂಬಿದ್ದೆ. ಜನರು ನನ್ನನ್ನ ನಂಬಲಿಲ್ಲ. ಅದಕ್ಕೆ ದೇವರ ಮೇಲೆ ನಂಬಿಕೆ ಇಟ್ಟಿದ್ದೇನೆ. ದೇಗುಲಗಳಿಗೆ ಭೇಟಿ ನೀಡ್ತಿದ್ದೇನೆ ಎಂದರು. ಇದೇ ವೇಳೆ ಡಿಸೆಂಬರ್ ೧೪ ರಂದು ಚನ್ನಪಟ್ಟಣದಲ್ಲಿ ಕೃತಜ್ಙತಾ ಸಮಾವೇಶ ಮಾಡೋಕೆ ನಿರ್ಧಾರ ಮಾಡಿದ್ದೇವೆ. ಕೆಲವು ಶಾಸಕರು ಅಧಿವೇಶನ ಇದೆ ಅಂತಿದ್ದಾರೆ. ಸಮಯ ಸಿಗ್ತಿಲ್ಲ, ಮತ್ತೊಮ್ಮೆ ಹೇಳ್ತೇವೆ ಎಂದ್ರು.
ಮುನಿರತ್ನ ವಿರುದ್ಧ ನಾರಾಯಣಸ್ವಾಮಿ ಆರೋಪ ವಿಚಾರವಾಗಿ ಮಾತನಾಡಿ, ಅದರ ಬಗ್ಗೆ ನನಗೆ ಮಾಹಿತಿ ಇಲ್ಲ.ಹಿಂದೆ ನನ್ನನ್ಮ ಅವರು ಭೇಟಿ ಮಾಡಿದ್ದರು. ಇವತ್ತಿನ ಆರೋಪದ ಬಗ್ಗೆ ಗೊತ್ತಿಲ್ಲ ಎಂದರು. ಬಿಜೆಪಿಯಲ್ಲಿನ ಕಲಹದ ಬಗ್ಗೆ ಪ್ರತಿಕ್ರಿಯಿಸಿ, ಯತ್ನಾಳ್ ಅವರಿಗೆ ಕೂಡ ಶಿವಕುಮಾರ್ ಜೊತೆ ಆತ್ಮೀಯ ಇದೆ. ವಿಜಯೇಂದ್ರ ಒಬ್ಬರೇ ಅಲ್ಲ, ಯತ್ನಾಳರು ಆಗಾಗ ಸಹಿ ಮಾಡಿಸಿಕೊಳ್ತಾರೆ. ಡಿಕೆಶಿ ಜೊತೆ ಯತ್ನಾಳ್ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ. ಬಿಜೆಪಿಯವರು ಯಾವ ಹೋರಾಟ ಬೇಕಾದರೂ ಮಾಡಲಿ, ನಾವು ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡ್ತೇವೆ. ಎಲ್ಲರು ಅಭಿವೃದ್ಧಿ ಕಡೆ ಗಮನಹರಿಸಲಿ, ವಿಪಕ್ಷಗಳು ಸಕಾರಾತ್ಮಕವಾಗಿ ತೊಡಗಿಕೊಳ್ಳಲಿ ಎಂದರು. ಸರ್ಕಾರದ ವಿರುದ್ಧ ಅಶೋಕ್ ಹೋರಾಟವಾಗಿ ಮಾತನಾಡಿ, ಬಿಜೆಪಿಯವರು ಯತ್ನಾಳ್ ವಿರುದ್ಧ ಹೋರಾಟ ಮಾಡ್ತಾರೋ..? ಎಂದು ವ್ಯಂಗ್ಯವಾಡಿದರು.