ಬೆಂಗಳೂರು: ರಾಜ್ಯದಂತೆ ನೆರೆಯ ಆಂಧ್ರದಲ್ಲೂ ಮಾನವ-ಪ್ರಾಣಿ ಸಂಘರ್ಷ ಹೆಚ್ಚಾಗಿದೆಯಂತೆ.ಈ ಸಂಘರ್ಷವನ್ನ ತಪ್ಪಿಸಿ ಮಾನವನ ಜೀವ ಉಳಿಸುವುದು ಅತ್ತ ಅರಣ್ಯ ಸಂರಕ್ಷಿಸುವ ಕೆಲಸಕ್ಕೆ ಕರ್ನಾಟಕಕ್ಕೆ ,ಆಂಧ್ರಪ್ರದೇಶ ಸಹಕಾರ ಕೋರಿದೆ.ಇಂದು ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆಯವರನ್ನ ಭೇಟಿ ಮಾಡಿರುವ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಒಪ್ಪಂದ ಮಾಡಿಕೊಂಡಿದ್ದಾರೆ..
ರಾಜ್ಯದಲ್ಲಿ ಆನೆ ಹಾಗೂ ಮಾನವ ಸಂಘರ್ಷ ನಿರಂತರವಾಗಿದೆ.ಕಾಡಿನಿಂದ ನಾಡಿಗೆ ಕಾಡು ಪ್ರಾಣಿಗಳ ಹಾವಳಿಯೂ ಹೆಚ್ಚಿದೆ.ವನ್ಯಮೃಗಗಳ ಹಾವಳಿ ತಡೆಗೆ ರಾಜ್ಯ ಸರ್ಕಾರ ಹಲವು ಮಾರ್ಗೋಪಾಯಗಳನ್ನ ಮಾಡ್ತಿದೆ.ಅದೇ ರೀತಿ ನೆರೆಯ ಆಂಧ್ರದಲ್ಲೂ ಕಾಡು ಪ್ರಾಣಿಗಳ ಹಾವಳಿ ಮಿತಿಮೀರಿದ್ದು,ಜೀವ ಹಾನಿಯ ಜೊತೆ ಆಸ್ತಿಪಾಸ್ತಿಯೂ ನಷ್ಟವಾಗ್ತಿದೆ.ಈ ಕಾರಣಕ್ಕಾಗಿ ಆಂದ್ರ ಸರ್ಕಾರ ಕರ್ನಾಟಕದ ಸಹಕಾರವನ್ನ ಕೊರಿದೆ..
ಹಾಕಿಯಲ್ಲಿ ಸ್ಪೇನ್ ವಿರುದ್ಧ ಭಾರತಕ್ಕೆ ಐತಿಹಾಸಿಕ ಗೆಲುವು: ಸಿಎಂ ಸಿದ್ದರಾಮಯ್ಯ ಅಭಿನಂದನೆ!
ಇನ್ನು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಚಿವ ಈಶ್ವರ್ ಖಂಡ್ರೆ ಹಾಗೂ ಪವನ್ ಕಲ್ಯಾಣ ಎರಡೂ ರಾಜ್ಯಗಳ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ರು.ಹಲವು ಮಾಹಿತಿಗಳನ್ನ ಪಡೆದುಕೊಂಡ್ರು.ಆಂಧ್ರದಲ್ಲಿ ಕಾಡಾನೆಗಳ ಸೆರೆ ಹಿಡಿದು ಪಳಗಿಸಲು ಎಂಟ ಕುಮ್ಕಿ ಆನೆಗಳನ್ನ ಕೊಡುವಂತೆ ಪವನ್ ಕಲ್ಯಾಣ್ ಬೇಡಿಕೆ ಇಟ್ಟಿದ್ದಾರೆ.ಜೊತೆಗೆ ಆನೆಗಳನ್ನ ಪಳಗಿಸಲು ಅನುಕೂಲವಾಗುವಂತೆ ಮಾವುತರು ಹಾಗೂ ಕಾವಾಡಿಗಳಿಗೆ ಅಗತ್ಯ ತರಬೇತಿ ನೀಡುವಂತೆ ಮನವಿ ಇಟ್ಟಿದ್ದಾರೆ.ಇದಕ್ಕೆ ಪೂರಕವಾಗಿ ಉನ್ನತ ಮಟ್ಟದ ಸಮಿತಿ ಜೊತೆ ಚರ್ಚೆಯನ್ನ ಮಾಡಿ ಆನೆಗಳನ್ನ ಹಸ್ತಾಂತರಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಈಶ್ವರ್ ಖಂಡ್ರೆ ಭರವಸೆ ನೀಡಿದ್ದಾರೆ.ಇನ್ನು ಆನೆಗಳು ಕಾಡಿನಿಂದ ಹೊರಬರದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ಹಾಕುವುದರ ಬಗ್ಗೆಯೂ ಮಾತುಕತೆ ನಡೆಸಿದ್ದಾರೆ..
ವಾಯ್ಸ್- ಇನ್ನು ಕರ್ನಾಟಕ ಆಂಧ್ರಪ್ರದೇಶದ ನಡುವೆ ಮೊದಲಿನಿಂದಲೂ ಅವಿನಾಭಾವ ಸಂಬಂಧವಿದೆ.ಪಂಚ ದ್ರಾವಿಡ ಭಾಷೆಗಳಲ್ಲಿ ಕನ್ನಡ,ತೆಲುಗು ಎರಡೂ ಭಾಷೆಗಳಿವೆ.ತೆಲುಗು, ಕನ್ನಡ ಭಾಷೆಯ ಲಿಪಿಯಲ್ಲಿ ಸಾಮ್ಯತೆ ಇದೆ, ರಾಷ್ಟ್ರಕವಿ ಕುವೆಂಪು ಅವರ “ಅರಣ್ಯಕ್ಕೆ ಹಾಡು ಹಾಡುವ ಮುನ್ನ ನಾನು ನನ್ನ ಮನದ ಮುಂದೆ ನಿಲ್ಲುತ್ತೇನೆ” ಎಂಬ ಸಾಲುಗಳನ್ನು ಉಲ್ಲೇಖಿಸಿ ತಮಗೆ ಈ ಸಭೆಯಿಂದ ಕನ್ನಡ ಕಲಿಯುವ ಪ್ರೇರಣೆ ಲಭಿಸಿದೆ ಅಂತ ಪವನ್ ಕಲ್ಯಾಣ್ ಹೇಳಿದ್ದಾರೆ.ರಾಜಕುಮಾರ್ ಅವರ ಗಂಧದಗುಡಿ ಚಿತ್ರದ ಉಲ್ಲೇಖ ಮಾಡಿ ಅರಣ್ಯ ಸಂರಕ್ಷಣೆ ಸಂದೇಶ ಸಾರಿದ ಚಿತ್ರವೆಂದು ಹೊಗಳಿದ್ರು.ಶ್ರೀಶೈಲ, ತಿರುಪತಿಯಲ್ಲಿ ಕರ್ನಾಟಕದ ಭಕ್ತಾದಿಗಳಿಗೆ ಅನುಕೂಲತೆ ಕಲ್ಪಿಸಲು ಸಿಎಂ ಜೊತೆ ಚರ್ಚಿಸಿ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.
ಒಟ್ನಲ್ಲಿ,ರಾಜ್ಯದಲ್ಲಿದ್ದ ಆನೆ ಹಾಗೂ ಮಾನವ ಸಂಘರ್ಷ ನೆರೆಯ ಆಂಧ್ರದಲ್ಲೂ ಉಲ್ಬಣಿಸಿದೆ.ಹೀಗಾಗಿ ಇದರ ನಿಯಂತ್ರಣಕ್ಕೆ ಸಹಕಾರವನ್ನ ನೀಡಬೇಕೆಂದು ಆಂಧ್ರ ಸರ್ಕಾರ ಕರ್ನಾಟಕ ಸರ್ಕಾರಕ್ಕೆಮನವಿಮಾಡಿದೆ.ಇಂದು ಪವನ್ ಕಲ್ಯಾಣ್ ವಿಧಾನಸೌಧದಲ್ಲಿ ಖಂಡ್ರೆ ಜೊತೆ ಸಭೆ ನಡೆಸಿ ಪರಸ್ಪರ ಸಹಕಾರ ನೀಡುವ ತತ್ವಕ್ಕೆ ಒಪ್ಪಿಗೆ ಕೊಟ್ಟಿದ್ದಾರೆ.