ಬಳ್ಳಾರಿ: ದರ್ಶನ್ ಅವರು ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಇದ್ದಾರೆ. ಸದ್ಯ ಅವರ ನ್ಯಾಯಾಂಗ ಬಂಧನದ ಅವಧಿ ಸೆಪ್ಟೆಂಬರ್ 30ರವರೆಗೆ ವಿಸ್ತರಣೆ ಆಗಿದೆ. ಜೈಲಿನಲ್ಲಿ ಸಖತ್ ಹಿಂಸೆ ಆಗುತ್ತಿದೆ ಎಂದು ಅಲವತ್ತುಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ ದರ್ಶನ್ಗೆ ಜಾಮೀನು ಚಿಂತೆಯಾಗಿದ್ದು, ಪತ್ನಿ ವಿಜಯಲಕ್ಷ್ಮಿಯವರು ಭೇಟಿಗೆ ಬಂದಾಗಲೂ ಜಾಮೀನು ವಿಚಾರವಾಗಿ ಚರ್ಚೆ ಮಾಡಿದ್ದು, ಜಾಮೀನಿಗೆ ಅರ್ಜಿ ಸಲ್ಲಿಸುವುದು ಯಾವಾಗ? ಎಂದು ಪ್ರಶ್ನಿಸಿದ್ದಾರೆ.
ದರ್ಶನ್ ವಿರುದ್ಧ ಸಿಕ್ಕಿರುವ ಪ್ರಬಲ ಸಾಕ್ಷಿಗಳ ಬಗ್ಗೆ ದರ್ಶನ್ ಗಮನಕ್ಕೆ ತಂದಿದ್ದ ವಿಜಯಲಕ್ಷ್ಮಿ, ಏನೇ ಸಾಕ್ಷಿ ಸಿಕ್ಕಿದ್ದರೂ ನಮ್ಮ ವಕೀಲರು ಸ್ಟ್ರಾಂಗ್ ಆಗಿ ವಾದ ಮಾಡುತ್ತಿದ್ದಾರೆ. ಆದಷ್ಟು ಬೇಗ ಜಾಮೀನಿಗೆ ಅರ್ಜಿ ಹಾಕೋಣ. ಅದರ ಬಗ್ಗೆಯೇ ನಾನು ವಕೀಲರ ಜೊತೆ ನಿತ್ಯ ಸಂಪರ್ಕದಲ್ಲಿದ್ದೇನೆ.
40 ವರ್ಷದ ನಂತರ ಮೊಟ್ಟೆಯ ಸೇವನೆ ಆರೋಗ್ಯಕ್ಕೆ ಒಳ್ಳೆಯದೇ..? ಇಲ್ಲಿದೆ ಮಾಹಿತಿ
ಯಾವುದಕ್ಕೂ ಆತಂಕ ಪಡಬೇಡಿ, ಆದಷ್ಟು ಬೇಗ ಜಾಮೀನಿಗೆ ಅರ್ಜಿ ಹಾಕುತ್ತೇವೆ ಎಂದು ಹೇಳಿದ್ದಾರೆ. ಬಹುತೇಕ ಇನ್ನೆರಡು ದಿನಗಳಲ್ಲಿ ಜಾಮೀನಿಗೆ ಅರ್ಜಿ ಹಾಕುವ ಸಾಧ್ಯತೆ ಇದೆ. ಎಲ್ಲಾ ಸಾಧಕ, ಬಾಧಕಗಳನ್ನು ನೋಡಿಕೊಂಡು ಜಾಮೀನಿಗೆ ಅರ್ಜಿ ಹಾಕುವುದಾಗಿ ಪ್ರತಿಕ್ರಿಯಿಸಿದ್ದಾರೆ. ಈ ವಿಚಾರಗಳ ಕುರಿತು ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಅರ್ಧ ಗಂಟೆ ಚರ್ಚಿಸಿದ್ದಾರೆ.