ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದ ಸ್ವಾಮಿ ಗಡ್ಡದೇವರಮಠ ಆನಂದ್ ಸ್ವಾಮಿ ಪತ್ನಿ ದೀಪಾ ಗಡ್ಡದೇವರಮಠ ಮತಬೇಟೆ ಆರಂಬಿಸಿದ್ದಾರೆ.ಹಾವೇರಿ ಮತಕ್ಷೇತ್ರದ ಹುಕ್ಕೇರಿಮಠದ ಲಲಿತ ಸಹಸ್ರನಾಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರಿಗೆ ಉಡಿ ತುಂಬುವ ಮೂಲಕ ಮತಯಾಚನೆ ಮಾಡಿದ ಅವರು.ನಂತರ ಮಾತನಾಡಿ ಆನಂದ ಸ್ವಾಮಿ ಗಡ್ಡದೇವರಮಠಗೆ ಕಾಂಗ್ರೆಸ್ ಟಿಕೆಟ್ ಸಿಗಲಿ ಎಂದು ಪೂಜೆಗಳನ್ನ ಕೈಗೊಳ್ಳಲಾಗಿತ್ತು, ಪೂಜೆಯ ಫಲವಾಗಿ ಅವರಿಗೆ ಟಿಕೆಟ್ ಸಿಕ್ಕಿರಬಹುದು.
ಲಿಂಗಯ್ಯ ಟ್ರಸ್ಟ್ ನಿಂದ ಹಾವೇರಿ ಜಿಲ್ಲೆಯ ವಿವಿದೆಡೆ ಲಲಿತ ಸಹಸ್ರನಾಮ ಪೂಜೆ ಆಯೋಜಿಸಲಾಗಿದೆ.ಆನಂದಸ್ವಾಮಿ ಗಡ್ಡದೇವರಮಠ ಗೆಲುವಿಗೆ ಶ್ರಮಿಸುವುದಾಗಿ ಪತ್ನಿ ದೀಪಾ ಗಡ್ಡದೇವರಮಠ ತಿಳಿಸಿದರು.ಹಾವೇರಿ ಕ್ಷೇತ್ರದ ವಿವಿಧ ತಾಲೂಕುಗಳಿಗೆ ಓಡಾಡಿ ಪತಿಯ ಪರ ಮತಯಾಚನೆ ಮಾಡುವುದಾಗಿ ತಿಳಿಸಿದರು.