ಚಿಕ್ಕಮಗಳೂರು:– ಧ್ವನಿ ಮುನಿರತ್ನದ್ದೇ ಎಂಬ ಸ್ಪಷ್ಟನೆ ಇಲ್ಲದೇ ಆತುರವಾಗಿ ಬಂಧಿಸಿದ್ದು ಯಾಕೆ ಎಂದು CT ರವಿ ವಾಗ್ದಾಳಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ 24 ವರ್ಷದ ವಿದ್ಯಾರ್ಥಿ ನಿಫಾಗೆ ಬಲಿ!
ಈ ಸಂಬಂಧ ಮಾತನಾಡಿದ ಅವರು, ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದವನ ಬಂಧನಕ್ಕೆ 3 ದಿನ ಮಾಡಿದ್ರಿ. ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದವನ ಬಂಧನಕ್ಕೆ 3 ದಿನ ಮಾಡಿದ್ರಿ. ಎಫ್ಎಸ್ಎಲ್ ರಿಪೋರ್ಟ್ ಬರಲಿ ಎಂದು ಕಾದಿದ್ರಿ. ಮುನಿರತ್ನ ಅವರು ನನ್ನ ವಾಯ್ಸ್ ಅಲ್ಲ, ನಕಲು ಮಾಡಿದ್ದಾರೆ ಎಂದಿದ್ದಾರೆ. ಮಾಜಿ ಸಂಸದ ಡಿ.ಕೆ.ಸುರೇಶ್, ಡಿಸಿಎಂ ಡಿಕೆಶಿ ಒತ್ತಡದ ಪ್ಲ್ಯಾನ್ ಎಂದು ಆರೋಪಿಸಿದ್ದಾರೆ. ಗೃಹ ಸಚಿವರೇ, ಈ ವಾಯ್ಸ್ ಮುನಿರತ್ನ ಅವರದ್ದೇ ಎಂದು ಎಫ್ಎಸ್ಎಗೆ ಕಳಿಸಿದ್ರಾ, ವರದಿ ಬಂದಿದ್ಯಾ? ವರದಿ ಬರುವ ಮುನ್ನವೇ ನಿಮ್ಮ ಅರೆಸ್ಟ್ ಆತುರ ತೋರಿಸುತ್ತೆ. ನಿಮ್ಮ ದ್ವೇಷದ ರಾಜಕಾರಣ ತೋರಿಸುತ್ತೆ ಎಂದು ಟೀಕಿಸಿದರು.
ಯಾದಗಿರಿ ಶಾಸಕನ ಮೇಲೆ ಮೃತ ಪಿಎಎಸ್ಐ ಪತ್ನಿ ದೂರು ನೀಡಿದ್ರು. ಅರೆಸ್ಟ್ ಮಾಡಿದ್ರಾ? ಅರೆಸ್ಟ್ ಮಾಡುವ ಬದಲು ಸಿಎಂ ಮನೆಗೆ ಭೋಜನ ಕೂಟಕ್ಕೆ ಆಹ್ವಾನ ನೀಡಿದ್ರಿ. ಕೃಷಿ ಸಚಿವ ಚಲುವರಾಯಸ್ವಾಮಿ ಮೇಲೆ ಅಧಿಕಾರಿ ರಾಜ್ಯಪಾಲರಕ್ಕೆ ದೂರು ನೀಡಿದ್ರು. ನಿಮ್ಮ ಕೃಷಿ ಸಚಿವರನ್ನ ನೀವು ಅರೆಸ್ಟ್ ಮಾಡಿದ್ರಾ? ಗೃಹ ಸಚಿವರೇ ನಿಮಗೆ ಅವರ ಬಗ್ಗೆ ಮೌನ. ಬಿಜೆಪಿ ಶಾಸಕರ ಬಗ್ಗೆ ಆತುರ ಎಂದು ತರಾಟೆಗೆ ತೆಗೆದುಕೊಂಡರು.
ಪ್ರಜಾಪ್ರಭುತ್ವ ದಿನ, ಒಳ್ಳೆ ಕಾರ್ಯಕ್ರಮ, ಆದ್ರೆ ಅವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಅನ್ನೋದು ಸಂವಿಧಾನದ ಆಶಯ. ಈಗ ಆಗಿರೋದು ಏನು? ಕುಟುಂಬದಿಂದ, ಕುಟುಂಬಕ್ಕಾಗಿ, ಕುಟುಂಬಕ್ಕೋಸ್ಕರ ಅನ್ನೋ ರೀತಿ ರಾಜಕಾರಣ ಬದಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಐದು ಕಡೆ ಕುಟುಂಬದವರಿಗೆ ಟಿಕೆಟ್ ಕೊಟ್ಟಿತ್ತು. ಬೀದರ್ನಿಂದ ಚಾಮರಾಜನಗರದವರೆಗೂ ಕಾಂಗ್ರೆಸ್ 21 ಕಡೆ ಕುಟುಂಬದವರಿಗೆ ಟಿಕೆಟ್ ಕೊಟ್ಟಿತ್ತು. ಪ್ರಜಾಪ್ರಭುತ್ವದ ಆಶಯ ಏನಾಗುತ್ತೆ. ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಅಂತ ಹೇಗಂತೀರಾ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.