ಚಿತ್ರದುರ್ಗ: ಸಿದ್ದರಾಮಯ್ಯ ನವರೇ ರಾಮ ಅಯೋಧ್ಯೆಗೆ ಹೋಗಿ ಯಾಕೆ ಪೂಜೆ ಮಾಡಬೇಕು, ಅವರ ಊರಿನಲ್ಲಿ ರಾಮಮಂದಿರವಿದೆ ಅಲ್ಲಿ ಪೂಜೆ ಮಾಡುತ್ತಾರೆ ಎಂದು ಮಾಜಿ ಸಚಿವ ಹೆಚ್. ಆಂಜನೇಯ ಹೇಳಿದರು. ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದರು. ಅದು ಬಿಜೆಪಿ ರಾಮ,ಅವರಿವರನ್ನು ಕರೆಯಿಸಿ ಉದ್ಘಾಟನೆ ಮಾಡುತ್ತಾರೆ, ನಮ್ಮ ರಾಮ ಎಲ್ಲಾ ಜಿಲ್ಲೆಯಲ್ಲಿರುತ್ತಾರೆ. ನಮ್ಮ ಎದೆಯಲ್ಲಿದ್ದಾರೆ. ನಾನು ಆಂಜನೇಯ, ಆಂಜನೇಯ ಏನು ಮಾಡಿದ್ದ ಎಂದು ಗೊತ್ತಲ್ಲ? ನಮ್ಮ ಸಮುದಾಯದವರು ಹೆಚ್ಚು ಶ್ರೀರಾಮ, ಆಂಜನೇಯ ಹನುಮಂತ ಎಂದು ಹೆಸರಿಟ್ಟುಕೊಳ್ಳುತ್ತೇವೆ,
Dry Black Grapes Benefit: ಕಪ್ಪು ಒಣ ದ್ರಾಕ್ಷಿಯನ್ನ ತಿನ್ನೋದ್ರಿಂದ ಸಿಗುವ ಲಾಭಗಳು!
ಧರ್ಮ ಧರ್ಮಗಳ ನಡುವೆ ಒಡೆದಾಳುವ ನೀತಿ ಅವರದ್ದು, ಮುಸ್ಲಿಂ ಧರ್ಮವನ್ನು ಇಯಾಳಿಸಿದರೆ ಇತರೇ ಧರ್ಮದವರು ಮತ ಹಾಕುತ್ತಾರೆ ಎನ್ನುವ ಭ್ರಮೆಯಲ್ಲಿದ್ದಾರೆ. ಯಾವ ಹಿಂದೂ ಧರ್ಮದವರಿಗೆ ಅವರು ಒಳ್ಳೆದುಮಾಡಿದ್ದಾರೆ. ನಾವು ಹಿಂದುಗಳೇ, ಯಾವ ಧರ್ಮ ಶೋಷಣೆ ಮಾಡುತ್ತಿದೆ. ಶೋಷಿತರಿಗೆ ಯಾವುದಾದರೂ ಪರಿಹಾರ ಇಟ್ಟಿದ್ದಾರೆ ಎಂದು ಪ್ರಶ್ನಿಸಿದರು. ಇಂದಿಗೂ ಕೂಡ ಜನ ವಾಸ ಮಾಡದಿರುವ ಸ್ಥಳಗಳಲ್ಲಿ ವಾಸ ಮಾಡುತ್ತಿದ್ದಾರೆ ಅಲ್ಲಿಮೊದಲು ಮನೆ ಕಟ್ಟಿ ಮಂದಿರ ಕಟ್ಟಬೇಕು. ಇಂತವರ ಕಣ್ಣೀರೊರೆಸಿ ಕೈ ಹಿಡಿದು ಸೂರು ನೀಡಬೇಕು. ರಕ್ಷಣೆ ಮಾಡಬೇಕು. ಇಲ್ಲಿ ಮನೆ ಕಟ್ಟಿ ಇದಕ್ಕೆ ರಾಮ ಮಂದಿರ ಎಂದು ಹೆಸರಿಡಬೇಕು ಎಂದರು.