ನಾನೇಕೆ ಯಡಿಯೂರಪ್ಪನವರಿಗೆ ಕ್ಷಮೆ ಕೇಳಬೇಕು? ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳಿದ್ದಾರೆ. ಶಿವಮೊಗ್ಗದಲ್ಲಿಂದು ಮಾತನಾಡಿದ ಅವರು, ಶಿವಮೊಗ್ಗದ ಕೆಎಡಿಬಿ ಹಗರಣದ ಬಗ್ಗೆ ಮಾತಾಡಿದ್ದೆ. ಅದಕ್ಕೆ ಸಮಜಾಯಿಸಿ ಕೋಡ್ತಾರಂತ ತಿಳಿದುಕೊಂಡಿದ್ದೇ. ನಾನು ಸಂಸದ ರಾಘವೇಂದ್ರ ಹಾಗೂ ಬಿವೈ ವಿಜಯೇಂದ್ರ ವಿರುದ್ದ ಮಾತಾಡಿದ್ದೇ ದಾರಿ ತಪ್ಪಿಸುವ ಸುದ್ದಿಗೋಷ್ಠಿಯನ್ನು ಹರತಾಳು ಹಾಲಪ್ಪ ಮಾಡಿದ್ದಾರೆ ಎಂದು ಆಯನೂರು ಕುಟುಕಿದ್ದಾರೆ.
ಹತ್ತು ವರ್ಷದಿಂದ ಯಡಿಯೂರಪ್ಪನವರ ಬಗ್ಗೆ ಮಾತನಾಡದ ಹಾಲಪ್ಪ ಈಗ ಮಾತಾಡಿದ್ದಾರೆ. ಎಲ್ಲಾ ಸಂಕಷ್ಟದ ಸಂದರ್ಭದಲ್ಲಿ ಯಡಿಯೂರಪ್ಪ ಪರ ಮಾತಾಡಿದ್ದು ನಾನು ಮತ್ತು ರೇಣುಕಾಚಾರ್ಯ ಮಾತ್ರ.ಕೇವಲ ನಾನು ವಿಜಯೇಂದ್ರ ರಾಘವೇಂದ್ರ ಭ್ರಷ್ಟಾಚಾರದ ಬಗ್ಗೆ ಮಾತಾಡಿದ್ದು ಬಂಗಾರಪ್ಪ ಮಕ್ಕಳ ಬಗ್ಗೆ ಮಾತಾಡಿದ್ದೀರಾ ಅಲ್ವಾ ಹಾಲಪ್ಪನವರೇ, ಸಾಮಾನ್ಯ ವ್ಯಕ್ತಿ ನಾನು ಯಡಿಯೂರಪ್ಪ ಕುಟುಂಬದ ಬಗ್ಗೆ ಮಾತಾಡೋಕೆ ಆಗುತ್ತಾ ಎಂದು ಪ್ರಶ್ನಿಸಿರುವ ಆಯನೂರು, ಯಡಿಯೂರಪ್ಪನವರು ರಾಜವಂಶಸ್ಥರು.ಶಿವಮೊಗ್ಗ ತಾಲೂಕಿನವೊಂದರಲ್ಲಿಯೇ 450 ಎಕರೆ ಭೂ ಮಾಲೀಕರು ಅವರು ಎಂದು ಹೇಳಿದ್ದಾರೆ.
ಗಡಿಬಿಡಿಯಲ್ಲಿ ಗರ್ಭ ನಿರೋಧಕ ಮಾತ್ರೆಯನ್ನು ಹೀಗೆಲ್ಲಾ ತಿನ್ಬೇಡಿ: ಇಲ್ಲದಿದ್ರೆ ಪ್ರಾಣಕ್ಕೆ ಆಪತ್ತು!
ಶ್ರೀಮಂತ ರಾಜವಂಶಸ್ಥದ ಬಗ್ಗೆ ನನ್ನಂತ ಸಾಮಾನ್ಯ ವ್ಯಕ್ತಿ ಮಾತಾಡೋಕೆ ಆಗುತ್ತಾ ? ಬಿಜೆಪಿಯ ರಾಜ್ಯಾಧ್ಯಕ್ಷರ ಬಗ್ಗೆ ಹಾಗೂ ಸಂಸದರ ಬಗ್ಗೆ ಮಾತಾಡಿದ್ದೆ. ಸಹ್ಯಾದ್ರಿ ನಾರಾಯಣ ಹಾಸ್ಪೆಟಲ್ ವಿಜಯೇಂದ್ರ ಹೆಸರಿನಲ್ಲಿದೆ. ಗದಗದ ಮೂಲದ ವ್ಯಕ್ತಿಗಳ ಹೆಸರಿನ ಮೇಲೆ ರಾಘವೇಂದ್ರ ಜಮೀನು ಮಾಡಿದ್ದಾರೆ. ಸಂಸದ ರಾಘವೇಂದ್ರ ಪತ್ನಿಯ ಸಹೋದರ ಯಾವಾಗ ಬಂದು ಇಲ್ಲಿ ಜಮೀನು ಮಾಡಿದ್ರು, ಬಸವಾಪುರದಲ್ಲಿರುವ 380 ಎಕರೆ ಇರುವ ಜಾಗ ಕೇಳಿದ್ದೇನಾನಿಮ್ಮದು ರಾಜ ವಂಶ,
ರಾಘವೇಂದ್ರ ಮತ್ತು ವಿಜಯೇಂದ್ರ ಇಬ್ಬರು ಸಾಮಂತರು, ನಾನೇಕೆ ಯಡಿಯೂರಪ್ಪನವರ ಕ್ಷೇಮೆ ಕೇಳಬೇಕು. ನಕಲಿ ಸಹಿ ಮಾಡಿ ಜೈಲಿಗೆ ಹೋಗಲು ನಾನು ಕಾರಣನಾ. ಕ್ಷೇಮೆ ಕೆಳುವ ಪ್ರಶ್ನೇಯೇ ಇಲ್ಲ ಎಂದು ಆಯನೂರು ಸ್ಪಷ್ಟಪಡಿಸಿದ್ದಾರೆ. ರಾಜವಂಶದ ಋಣ ನಾನು ತಿಂದಿಲ್ಲ, ಯಡಿಯೂರಪ್ಪ ನವರಿಂದ ನಾನು ಬೆಳೆದಿಲ್ಲ ಅವರ ಸಹಕಾರ ಇದೆ ಅಷ್ಟೇ. ವಿದ್ಯಾರ್ಥಿಯಾಗಿದ್ದಾಗಲೇ ಬಳ್ಳಾರಿ, ಗುಲ್ಬರ್ಗ, ಬೆಂಗಳೂರು ಜೈಲಿನಲ್ಲಿ ಇದ್ದು ಬಂದವನು ನಾನು.
ನಮ್ಮ ರೆಂಬೆ ಕೊಂಬೆ ಕತ್ತರಿಸಿದ್ದೂ ಯಾರು ಅಂತ ಗೊತ್ತಿದೆ ಎಂದು ಆಯನೂರು ಕುಟುಕಿದ್ದಾ