ಪ್ರತಿ ವರ್ಷ ಮಾರ್ಚ್ 1 ರಂದ ಜಗತ್ತಿನಾದ್ಯಂತ ‘ವಿಶ್ವ ನಾಗರಿಕ ರಕ್ಷಣಾ ದಿನ’ ವನ್ನು ಆಚರಣೆ ಮಾಡಲಾಗುತ್ತದೆ. ನಾಗರಿಕ ರಕ್ಷಣೆ ಮತ್ತು ಸನ್ನದ್ಧತೆಯ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಈ ದಿನವನ್ನು ಆಚರಣೆ ಮಾಡಲಾಗುತ್ತದೆ.ಈ ದಿನವನ್ನು ಅಂತರರಾಷ್ಟ್ರೀಯ ನಾಗರಿಕ ರಕ್ಷಣಾ ಸಂಸ್ಥೆ(ಐಸಿಡಿಒ) ಆಚರಿಸುತ್ತದೆ. ಪ್ರಕೃತಿ ವಿಕೋಪ, ಅಗ್ನಿ ದುರಂತ, ರಸ್ತೆ ಅಪಘಾತ, ಕಟ್ಟಡ ದುರಂತದಂತಹ ತುರ್ತು ಸಂದರ್ಭದಲ್ಲಿ ಜನರ ರಕ್ಷಣೆಗೆ ಸ್ಪಂದಿಸುವಲ್ಲಿ ಸಿವಿಲ್ ಡಿಫೆನ್ಸ್ ಪ್ರಮುಖ ಪಾತ್ರ ವಹಿಸುತ್ತದೆ.
ವಿಶ್ವ ನಾಗರಿಕ ರಕ್ಷಣಾ ದಿನದ ಇತಿಹಾಸ
1931 ರಲ್ಲಿ ಸರ್ಜನ್ ಜನರಲ್ ಜಾರ್ಜ್ ಸೇಂಟ್ ಪಾಲ್ ಅವರು ಜಿನೀವಾ ವಲಯಗಳ ಸಂಘವನ್ನು ಸ್ಥಾಪಿಸಿದರು. ಆದರೆ ಈ ಸಂಘವು ಐಎಸ್ಡಿಒ (ಸಿವಿಲ್ ಡಿಫೆನ್ಸ್ ಅನ್ನು ನಾಗರಿಕ ರಕ್ಷಣೆ)ಯಾಗಿ ಬದಲಾಯಿತು. ಇತ್ತ ಐಎಸ್ಡಿಒ ದ ಪ್ರಸ್ತುತ ಸಂವಿಧಾನವನ್ನು 1972 ರಲ್ಲಿ ಸಂಸ್ಥೆಯ ಸದಸ್ಯ ರಾಜ್ಯಗಳಿಂದ ಅನುಮೋದನೆಯು ಸಿಕ್ಕಿತು. ವಿಶ್ವ ನಾಗರಿಕ ರಕ್ಷಣೆ ಪಡೆ ದಿನವನ್ನು 1990 ರಲ್ಲಿ ಇಂಟರ್ನ್ಯಾಷನಲ್ ಸಿವಿಲ್ ಡಿಫೆನ್ಸ್ ಆರ್ಗನೈಸೇಶನ್ ಜಾಗತಿಕ ರಜಾದಿನವೆಂದು ಘೋಷಣೆ ಮಾಡಿತ್ತು. ಆದರೆ ವಿಶ್ವ ನಾಗರಿಕ ಪಡೆ ದಿನವನ್ನು ಅಂತಾರಾಷ್ಟ್ರೀಯ ನಾಗರಿಕ ರಕ್ಷಣಾ ಸಂಸ್ಥೆ ಆರಂಭಿಸಿದ್ದು, ಹೀಗಾಗಿ ಪ್ರತಿ ವರ್ಷವೂ ಮಾರ್ಚ್ 1 ರಂದು ವಿಶ್ವ ನಾಗರಿಕ ರಕ್ಷಣಾ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ನಾಗರಿಕ ರಕ್ಷಣಾ ದಿನದ ಮಹತ್ವ
ಪ್ರಕೃತಿ ವಿಕೋಪ, ಅಗ್ನಿ ದುರಂತ, ರಸ್ತೆ ಅಪಘಾತ ಸೇರಿದಂತೆ ಇನ್ನಿತ್ತರ ತುರ್ತು ಸಂದರ್ಭದಲ್ಲಿ ಜನರ ರಕ್ಷಣೆಗೆ ಸ್ಪಂದಿಸುವಲ್ಲಿ ನಾಗರಿಕ ರಕ್ಷಣಾ ತಂಡವು ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ನೈಸರ್ಗಿಕ ವಿಕೋಪಗಳಿಂದ ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂದು ನಾಗರಿಕರಿಗೆ ಕಲಿಸುವುದು. ಅದಲ್ಲದೇ ಈ ವಿಪತ್ತುಗಳ ಪರಿಣಾಮವನ್ನು ಕಡಿಮೆ ಮಾಡುವಲ್ಲಿ ಮತ್ತು ಬಿಕ್ಕಟ್ಟಿನ ಸಮಯದಲ್ಲಿ ವ್ಯಕ್ತಿಗಳ ಸುರಕ್ಷತೆ ಹಾಗೂ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳುವಲ್ಲಿ
ನಾಗರಿಕ ರಕ್ಷಣಾ ನಿರ್ವಹಿಸಿದ ನಿರ್ಣಾಯಕ ಪಾತ್ರವನ್ನು ಈ ದಿನ ಎತ್ತಿಹಿಡಿಯಲಾಗುತ್ತದೆಂ ತುರ್ತು ಪರಿಸ್ಥಿತಿಗಳಲ್ಲಿ ತಮ್ಮ ಆತ್ಮರಕ್ಷಣೆ ಜೊತೆಗೆ ವಿಪತ್ತು ತಡೆಗಟ್ಟುವಿಕೆಯ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ದಿನವು ಮಹತ್ತರದ್ದಾಗಿದೆ. ಈ ದಿನದಂದು ಶಾಲಾ ಕಾಲೇಜುಗಳಲ್ಲಿ ವಿಪತ್ತುಗಳು ಸಂಭವಿಸಿದಾಗ ಯಾವ ರೀತಿಯಲ್ಲಿ ರಕ್ಷಿಸಿಕೊಳ್ಳಬಹುದು ಎನ್ನುವ ಬಗ್ಗೆ ಮಾಹಿತಿ ಕಾರ್ಯಗಾರಗಳು ಹಾಗೂ ರಕ್ಷಣಾ ಸಿಬ್ಬಂದಿಗಳಿಂದ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.