ರಾಯಲ್ಟಿ ಇಲ್ಲ ಓವರ್ ಲೋಡ್ ಗೆ ಕಡಿವಾಣ ಇಲ್ಲ..ಹೀಗೆ ಕಲಬುರಗಿಯಲ್ಲಿ ಅಕ್ರಮ ಮರಳು ದಂಧೆ ನಡೀತಿದ್ರೂ ಉಸ್ತುವಾರಿ ಮಂತ್ರಿಗಳು ಮೌನವಹಿಸಿದ್ದು ಯಾಕೆ ಅಂತ ಸಚಿವ ಪ್ರಿಯಾಂಕ್ ಖರ್ಗೆಗೆ ಬಿಜೆಪಿ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ಪ್ರಶ್ನೆ ಮಾಡಿದ್ದಾರೆ..
Black water: ಬ್ಲ್ಯಾಕ್ ವಾಟರ್ ಎಂದರೇನು..? ಸೆಲೆಬ್ರಿಟಿಗಳು ಯಾಕೆ ಇದನ್ನು ಜಾಸ್ತಿ ಕುಡಿಯುತ್ತಾರೆ ಗೊತ್ತಾ.?
ಕಲಬುರಗಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಾಟೀಲ್ ಅಕ್ರಮ ಮರಳು ದಂಧೆಯಲ್ಲಿ ಸಚಿವರ ಬೆಂಬಲಿಗರು ಇದ್ದಾರೆ ಅಂತ ಆರೋಪಿಸಿದ್ರು..ಚಿತ್ತಾಪುರ ಸೇಡಂ ಜೇವರ್ಗಿ ಎಲ್ಲಾಕಡೆ ರಾಜಾರೋಷವಾಗಿ ದಂಧೆ ನಡೆಯುತ್ತಿದ್ರೂ ಜಿಲ್ಲಾಡಳಿತ ಸ್ತಭ್ಧವಾಗಿದೆ ಅಂದ್ರು. ಮಾತ್ರವಲ್ಲ ಎಲ್ಲಾ ವಿಷಯಕ್ಕೂ ಮಾತನಾಡುವ ಪ್ರಿಯಾಂಕ್ ಖರ್ಗೆ ಜಿಲ್ಲೆಯಲ್ಲಿನ ಅಕ್ರಮ ದಂಧೆ ಬಗ್ಗೆ ಮಾತಾಡುತ್ತಿಲ್ಲ ಕಿಡಿಕಾರಿದ್ರು..