ಪ್ರತಿವರ್ಷವೂ ಕೇಂದ್ರ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇರುತ್ತೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ 14ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಪ್ರತಿವರ್ಷವೂ ಸಹ ಫೆ.1ರಂದು ಬೆಳಗ್ಗೆ ಆಯ ವರ್ಷದ ಆಯವ್ಯಯ ಮಂಡನೆ ಮಾಡ್ತಾರೆ. ಆದರೆ ಯಾಕೆ ಆ ದಿನವೇ ಬಜೆಟ್ ಮಂಡನೆ ಮಾಡ್ತಾರೆ. ಇದರ ಹಿಂದಿರೋ ರಹ್ಯಸವೇನು ಅನ್ನೋದನ್ನು ಹೇಳ್ತಿವಿ
ಬ್ರಿಟಿಷರ ಆಳ್ವಿಕೆ ಕಾಲದಿಂದಲೂ ಸಹ ಫೆಬ್ರವರಿ ತಿಂಗಳ ಕೊನೆಯ ದಿನ ವರ್ಕಿಂಗ್ ಡೇಯಂದು ಬಜೆಟ್ ಮಂಡನೆ ಮಾಡ್ತಿದ್ದರು. ಫೆಬ್ರವರಿ ಕೊನೆ ತಿಂಗಳ ಕೊನೆಯ ದಿನದ ಸಂಜೆ 5 ಗಂಟೆಗೆ ಬಜೆಟ್ ಮಂಡನೆ ಮಾಡಲಾಗ್ತಿತ್ತು.ಬ್ರಿಟಿಷರ ಸಮಯಕ್ಕೆ ಭಾರತದ ಸಮಯ 5.5. ಗಂಟೆಗಳಷ್ಟು ಮುಂದಿದೆ. ಹೀಗಾಗಿ ಯುನೈಡೆಡ್ ಕಿಂಗ್ಡಮ್ ನ ಕಾಲಮಾನದ ಪ್ರಕಾರ ಅಲ್ಲಿ ಭಾರತದಲ್ಲಿ ಸಂಜೆ 5 ಗಂಟೆಗೆ ಬಜೆಟ್ ಮಂಡಿಸಲಾಗುತ್ತಿದೆ. ಅದು ಯುನೈಟೆಡ್ ಕಿಂಗ್ಡಮ್ನಲ್ಲಿ ಬೆಳಗ್ಗೆ 11 ಗಂಟೆ ಸಮಯ ಅಗಿರುತ್ತಿತ್ತು.
ಸ್ವಾತಂತ್ರ್ಯನಂತರವೂ ಸಹ ಹೀಗೆ ಮುಂದುವರೆಯುತ್ತಿತ್ತು. 1999 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ಯಶವಂತ್ ಸಿನ್ಹಾ ಈ ಪದ್ಧತಿಯನ್ನು ಬದಲಾಯಿಸಿದರು. ಸಂಜೆ 5 ಗಂಟೆಗೆ ಬದ್ಲಿಗೆ ಬೆಳಗ್ಗೆ 11 ಗಂಟೆಗೆ ಬದಲಾಯಿಸಬಹುದು ಎಂದು ಯಶ್ವಂತ್ ಸಿನ್ಹಾ ಸಲಹೆ ನೀಡಿದರು. ಹೀಗಾಗಿ ಸಮಯವನ್ನು ಬದಲಾಯಿಸಲಾಯ್ರು.
ಜಾಹೀರಾತು
ತದನಂತರವೂ ಸಹ ಕೇಂದ್ರ ಬಜೆಟ್ನ್ನು ಫೆಬ್ರವರಿ ಕೊನೆಯ ಕೆಲಸದ ದಿನದಂದು ಮಂಡಿಸಲಾಗುತ್ತಿತ್ತು. 2017 ರಲ್ಲಿ ಇನ್ನುಮುಂದೆ ಫೆಬ್ರವರಿ 1 ರಂದು ಬಜೆಟ್ ಮಂಡಿಸಲಾಗುವುದು ಎಂದು ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಘೋಷಿಸಿದರು. ಫೆಬ್ರವರಿ ಕೊನೆಯ ದಿನದಂದು ಬಜೆಟ್ ಮಂಡಿಸಿದರೆ, ಏಪ್ರಿಲ್ 1 ರಿಂದ ಪ್ರಾರಂಭವಾಗುವ ವರ್ಷಕ್ಕೆ ಹೊಸ ನೀತಿಗಳನ್ನು ರೂಪಿಸಲು ಕೇಂದ್ರಕ್ಕೆ ಸಾಕಷ್ಟು ಸಮಯ ಸಿಗುವುದಿಲ್ಲ ಎಂದು ಎಂಬ ಫೆಬ್ರವರಿ 1ರಕ್ಕೆ ಬಜೆಟ್ ಮಂಡನೆ ಎಂದು ನಿರ್ಧರಿಸಿದರು.
ಜಾಹೀರಾತು
ಬಜೆಟ್ ಅನ್ನು ಮೊದಲೇ ಮಂಡಿಸುವುದರಿಂದ ಹೊಸ ನೀತಿಗಳನ್ನು ಜಾರಿಗೆ ತರಲು ಮತ್ತು ಅಗತ್ಯವನ್ನು ಮಾಡಲು ಹೆಚ್ಚಿನ ಸಮಯವನ್ನು ನೀಡುತ್ತದೆ ಅನ್ನೋದು ಈ ನಿರ್ಧಾರದ ಹಿಂದಿನ ಉದ್ದೇಶ.