ಬೆಂಗಳೂರು: ಭಾರತದಲ್ಲಿ ಹಲವು ನದಿಗಳು ಹರಿಯುತ್ತವೆ, ಲೆಕ್ಕ ಮಾಡಿದ್ರೆ ಸುಮಾರು 200ಕ್ಕೂ ಅಧಿಕ ನದಿಗಳಿವೆ. ಇವುಗಳಲ್ಲಿ ಗಂಗಾ, ಯಮುನಾ, ನರ್ಮದಾ, ಕಾವೇರಿ, ಕೃಷ್ಣಾ, ಗೋದಾವರಿ ಪ್ರಮುಖ ನದಿಗಳಾಗಿವೆ. ಇವುಗಳ ರಾಜ್ಯಗಳ ಜನರ ಜೀವನಾಧಾರವೂ ಆಗಿದೆ. ನದಿಗಳಲ್ಲಿ ಎಸೆಯುವ ಕಸ ಹಾಗೂ ವಿಷಪೂರಿತ ಕೈಗಾರಿಕಾ ತ್ಯಾಜ್ಯಗಳಿಂದಾಗಿ ನದಿಗಳ ನೀರು ಕಲುಷಿತಗೊಳ್ಳುವುದರ ಜೊತೆಗೆ ಜಲಚರಗಳಿಗೂ ಹಾನಿಯಾಗುತ್ತಿವೆ. ಈ ನಿಟ್ಟಿನಲ್ಲಿ ನದಿಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅವುಗಳ ಸಂರಕ್ಷಣೆಯನ್ನು ಉತ್ತೇಜಿಸಲು ಪ್ರತಿವರ್ಷ ಸೆಪ್ಟೆಂಬರ್ ತಿಂಗಳು ವಿಶ್ವ ನದಿ ದಿನವನ್ನು ಆಚರಿಸಲಾಗುತ್ತದೆ.
ಮನುಷ್ಯನ ಸ್ವಾರ್ಥಕ್ಕೆ ಇಂದು ಅನೇಕ ನದಿಗಳು ಮಾಲಿನ್ಯಗೊಂಡು, ಆ ನೀರು ಕುಡಿಯಲು ಕೂಡಾ ಯೋಗ್ಯವಲ್ಲದಂತಾಗಿದೆ. ಹಾಗಾಗಿ ಪ್ರತಿಯೊಂದು ಜೀವಿಗೂ ಜೀವನಾಧಾರವಾಗಿರುವ ನದಿ ನೀರನ್ನು ಸಂರಕ್ಷಣೆ ಮಾಡಬೇಕೆನ್ನುವ ನಿಟ್ಟಿನಲ್ಲಿ ಪ್ರತಿವರ್ಷ ಸೆಪ್ಟೆಂಬರ್ ತಿಂಗಳ ನಾಲ್ಕನೇ ಭಾನುವಾರದಂದು ವಿಶ್ವ ನದಿಗಳ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ 24 ನೇ ತಾರೀಕಿನಂದು ವಿಶ್ವ ನದಿ ದಿನವನ್ನು ಆಚರಿಸಲಾಗುತ್ತಿದೆ.
ವಿಶ್ವ ನದಿಗಳ ದಿನದ ಇತಿಹಾಸ:
ಜಲ ಮಾಲಿನ್ಯವು ಪ್ರಪಂದ ಒಂದು ಪ್ರಮುಖ ಸಮಸ್ಯೆಯಾಗಿದ್ದು, ಹೀಗಿರುವಾಗ ನದಿಗಳ ಮಾಲೀನ್ಯವನ್ನು ತಡೆಗಟ್ಟುವುದು ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ನದಿಗಳ ಬಗೆಗಿನ ನಿರ್ಲಕ್ಷ್ಯವನ್ನು ಹಾಗೂ ನದಿಗಳ ಮಾಲೀನ್ಯವನ್ನು ಗಮನದಲ್ಲಿಟ್ಟುಕೊಂಡು, 2005ರಲ್ಲಿ ಪ್ರಸಿದ್ಧ ಪರಿಸರವಾದಿ ಮಾರ್ಕ್ ಏಂಜೆಲೋ ಅವರು ಜಲಜೀವ ಅಭಿಯಾದ (ವಾಟರ್ ಫಾರ್ ಲೈಫ್) ಸಂದರ್ಭದಲ್ಲಿ ವಿಶ್ವಸಂಸ್ಥೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಅಭಿಯಾನದಲ್ಲಿ ಅವರು ವಿಶ್ವ ನದಿ ದಿನವನ್ನು ಆಚರಿಸುವ ಅಂಶವನ್ನು ಮುಂದಿಟ್ಟರು.
Pooja Room: ದೇವರ ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ಮೂರ್ತಿಯನ್ನು ಇಡಬೇಡಿ!
ಮತ್ತು ಈ ಒಂದು ಅಭಿಯಾನದಿಂದ ಪ್ರಪಂಚಕ್ಕೆ ನದಿಗಳು ಎಷ್ಟು ಮುಖ್ಯ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳುತ್ತಾರೆ. ಅದೇ ವರ್ಷ ಅಂದರೆ 2005 ರಲ್ಲಿ ಮೊದಲ ವಿಶ್ವ ನದಿಗಳ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಸೆಪ್ಟೆಂಬರ್ ನಾಲ್ಕನೇ ಭಾನುವಾರದಂದು ವಿಶ್ವ ನದಿಗಳ ದಿನವನ್ನು ಆಚರಿಸಲಾಗುತ್ತದೆ. ಮತ್ತು ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ನದಿಗಳನ್ನು ಸ್ವಚ್ಛಗೊಳಿಸುವುದು ಮತ್ತು ನದಿಗಳ ಪ್ರಾಮುಖ್ಯತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯಗಳನ್ನು ಮಾಡುತ್ತವೆ.
ವಿಶ್ವ ನದಿಗಳ ದಿನದ ಮಹತ್ವ:
ಪ್ರಂಚದಾದ್ಯಂತ ನದಿಗಳ ಸ್ವಚ್ಛತೆ ಮತ್ತು ಅವುಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸುವುದು ವಿಶ್ವ ನದಿಗಳ ದಿನದ ಆಚರಣೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ. ಭವಿಷ್ಯದ ಪೀಳಿಗೆಗಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಲು ಮತ್ತು ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವ ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.ಇಂದು ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ನದಿಗಳ ನೀರು ಕಲುಷಿತವಾಗುತ್ತಿದೆ. ಹಾಗಾಗಿ ನದಿಗಳ ರಕ್ಷಣೆಗಾಗಿ,
ವಿಶ್ವ ನದಿಗಳ ದಿನದಂದು ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳು, ಎನ್.ಜಿ.ಒಗಳು ನದಿಗಳ ರಕ್ಷಣೆ ಕಾರ್ಯವನ್ನು ಮಾಡುತ್ತವೆ, ನದಿಗಳನ್ನು ಸ್ವಚ್ಛಗೊಳಿಸುವ ಆಂದೋಲನಗಳನ್ನು ಆಯೋಜಿಸುತ್ತವೆ. ಹಾಗೂ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಸ್ಥಳೀಯ ಮಟ್ಟದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಅಲ್ಲದೆ ಈ ದಿನ ಜನರು ನದಿಗಳನ್ನು ಕಲುಷಿತಗೊಳಿಸುವುದಿಲ್ಲ ಮತ್ತು ನದಿಗಳು ಕಲುಷಿತಗೊಳ್ಳದಂತೆ ಅವುಗಳನ್ನು ರಕ್ಷಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಾರೆ. ಮುಖ್ಯವಾಗಿ ಈ ದಿನ ನದಿಗಳ ಮಹತ್ವ ಮತ್ತು ಅವುಗಳ ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತದೆ.