ಶಬರಿಮಲೆ ಎಂದಾಕ್ಷಣ ನಮಗೆ ಮೊದಲು ನೆನಪಿಗೆ ಬರೋದು ಅಯ್ಯಪ್ಪ ಸ್ವಾಮಿ ಮತ್ತು ಭಕ್ತಿಯಿಂದ ಮಾಲೆ ಧರಿಸುವ ಅವನ ಭಕ್ತರು. ಕಾರ್ತಿಕ ಮಾಸ ಆರಂಭವಾಗುತ್ತಿದ್ದಂತೆ ಲಕ್ಷಾಂತರ ಜನ ಅಯ್ಯಪ್ಪ ಮಾಲೆಯನ್ನು ಧರಿಸುತ್ತಾರೆ. ಕೆಲವರು ಮಂಡಲ ದೀಕ್ಷಾ, ಇನ್ನು ಕೆಲವರು ಅರ್ಥ ಮಂಡಲ ದೀಕ್ಷಾ ತೆಗೆದುಕೊಳ್ಳುತ್ತಾರೆ. 41 ದಿನಗಳ ದೀಕ್ಷೆ ಪಡೆದು ಶಬರಿಮಲೆಗೆ ತೆರಳಿ ಅಯ್ಯಪ್ಪನ ದರ್ಶನ ಪಡೆದು ಬಂದ ಬಳಿಕ ಪೂಜೆಯೊಂದಿಗೆ ಅಯ್ಯಪ್ಪ ಮಾಲೆಯನ್ನು ತೆಗೆಯುತ್ತಾರೆ.
3 ಕಾರುಗಳ ನಡುವೆ ಸರಣಿ ಅಪಘಾತ: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ನಲ್ಲಿ ಫುಲ್ ಟ್ರಾಫಿಕ್!
ಅಯ್ಯಪ್ಪ ಮಾಲೆ ಹಾಕಿದವರು ತಲೆಯ ಮೇಲೆ ಇರುಮುಡಿ ಹೊತ್ತಿರುವುದನ್ನು ನಾವೆಲ್ಲ ನೋಡಿಯೇ ಇರುತ್ತೇವೆ. ಈ ಇರುಮುಡಿಯ ಪ್ರಾಮುಖ್ಯತೆ ಏನು, ಅದರೊಳಗೆ ಏನೆಲ್ಲ ಇರುತ್ತದೆ ಗೊತ್ತಾ?
ಎರಡು ಭಾಗವಿರುವ ಚೀಲದೊಳಗೆ ಪೂಜೆ ಹಾಗೂ ಯಾತ್ರೆಗೆ ಬೇಕಾದ ವಸ್ತುಗಳನ್ನಿಟ್ಟುಕೊಂಡು ಗಂಟು ಹಾಕಿಕೊಂಡು ಹೊತ್ತು ಹೋಗುವುದೇ ಇರುಮುಡಿ ಕಟ್ಟು. ಈ ಇರುಮುಡಿಯು ಬಹಳ ಪವಿತ್ರವಾದುದಾಗಿದ್ದು, 41 ದಿನ ವ್ರತ ಆಚರಿಸುವವರು ಮಾತ್ರ ಇದನ್ನು ಹೊರಬಹುದು. ಅಷ್ಟೇ ಅಲ್ಲ, ಇರುಮುಡಿ ಇಲ್ಲದ ಭಕ್ತರನ್ನು ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ 18 ಮೆಟ್ಟಿಲ ನ್ನು ಹತ್ತಲು ಬಿಡುವುದೇ ಇಲ್ಲ. ವ್ರತ ಆಚರಿಸದೆ ಇರುವವರು ಇರುಮುಡಿ ಹೊರುವಂತಿಲ್ಲ ಹಾಗೂ ಮೆಟ್ಟಿಲು ಹತ್ತಲೂ ಅವಕಾಶವಿಲ್ಲ. ಅವರು ಅಯ್ಯಪ್ಪನನ್ನು ಬೇರೊಂದು ಪ್ರವೇಶದ್ವಾರ ಮೂಲಕ ದೇವಾಲಯಕ್ಕೆ ಹೋಗಿ ನೋಡಬೇಕು.
ಇರು’ ಎಂದರೆ ಎರಡು ಎಂದರ್ಥ. ‘ಮುಡಿ’ ಎಂದರೆ ಚೀಲ, ಕಟ್ಟು’ ಎಂದರೆ ಗಂಟು ಹಾಕುವುದು. ಇವು ಪೂಜೆ ಹಾಗೂ ಯಾತ್ರೆಗೆ ಬೇಕಾದ ವಸ್ತುಗಳನ್ನು ಇಟ್ಟುಕೊಳ್ಳಲು ನೆರವಾಗುತ್ತವೆ. ಅಯ್ಯಪ್ಪ ದೀಕ್ಷಾಧಾರಿಗಳು ಈ ಇರುಮುಡಿಯಲ್ಲಿ ತುಪ್ಪ ತುಂಬಿದ ಕಾಯಿ, ಕಾಣಿಕೆ ನಾಣ್ಯಗಳು, ಅಕ್ಕಿ ಹಾಗೂ ಬೆಲ್ಲ, ಎಲೆಅಡಿಕೆ, ಅರಿಶಿನ, ಗಂಧದ ಪುಡಿ, ವಿಭೂತ ಮತ್ತೆರಡು ತೆಂಗಿನಕಾಯಿ, ಗುಲಾಬಿ ನೀರು, ಅವಲಕ್ಕಿ, ಊದುಬತ್ತಿ, ಕಾಳುಮೆಣಸು(pepper), ಕರ್ಪೂರ ಇತ್ಯಾದಿಗಳನ್ನು ಇಟ್ಟುಕೊಂಡಿರುತ್ತಾರೆ. ಇದರೊಂದಿಗೆ ಭಕ್ತರು ಯಾತ್ರೆ ಸಂದರ್ಭದಲ್ಲಿ ಬೇಕಾಗುವ ಟವೆಲ್, ಹಾಸಲು ಬೆಡ್ಶೀಟ್, ಬದಲಿಸುವ ಬಟ್ಟೆ ಕೂಡಾ ಇಟ್ಟುಕೊಂಡಿರುತ್ತಾರೆ.
ಇವು ಪೂಜೆ ಹಾಗೂ ಯಾತ್ರೆಗೆ ಬೇಕಾದ ವಸ್ತುಗಳನ್ನು ಇಟ್ಟುಕೊಳ್ಳಲು ನೆರವಾಗುತ್ತವೆ. ಅಯ್ಯಪ್ಪ ದೀಕ್ಷಾಧಾರಿಗಳು ಈ ಇರುಮುಡಿಯಲ್ಲಿ ತುಪ್ಪ ತುಂಬಿದ ಕಾಯಿ, ಕಾಣಿಕೆ ನಾಣ್ಯಗಳು, ಅಕ್ಕಿ ಹಾಗೂ ಬೆಲ್ಲ, ಎಲೆಅಡಿಕೆ, ಅರಿಶಿನ, ಗಂಧದ ಪುಡಿ, ವಿಭೂತಿ(holy ash), ಮತ್ತೆರಡು ತೆಂಗಿನಕಾಯಿ(coconut), ಗುಲಾಬಿ ನೀರು, ಅವಲಕ್ಕಿ, ಊದುಬತ್ತಿ, ಕಾಳುಮೆಣಸು(pepper), ಕರ್ಪೂರ ಇತ್ಯಾದಿಗಳನ್ನು ಇಟ್ಟುಕೊಂಡಿರುತ್ತಾರೆ. ಇದರೊಂದಿಗೆ ಭಕ್ತರು ಯಾತ್ರೆ ಸಂದರ್ಭದಲ್ಲಿ ಬೇಕಾಗುವ ಟವೆಲ್, ಹಾಸಲು ಬೆಡ್ಶೀಟ್, ಬದಲಿಸುವ ಬಟ್ಟೆ ಕೂಡಾ ಇಟ್ಟುಕೊಂಡಿರುತ್ತಾರೆ.
ನಿಮ್ಮ ಇರುಮುಡಿ ಕಟ್ಟುವನ್ನು ದೇವಸ್ಥಾನದಿಂದ ಅಥವಾ ನಿಮ್ಮ ಗುರುಸ್ವಾಮಿಯಿಂದ ತೆಗೆದುಕೊಂಡು ಹೋಗಬೇಕೆಂದು ನೀವು ಬಯಸಿದರೆ ಯಾವ ವಸ್ತುಗಳನ್ನು ತೆಗೆದುಕೊಂಡು ಹೋಗಬೇಕೆಂಬುದರ ಕುರಿತು ಸರಿಯಾಗಿ ಪರಿಶೀಲಿಸಿ. ಇರುಮುಡಿ ಕಟ್ಟಿನಲ್ಲಿ ನೀವು ಯಾವೆಲ್ಲಾ ವಸ್ತುಗಳನ್ನು ಬಳಸಬೇಕೆಂಬುದರ ಪಟ್ಟಿ ಇಲ್ಲಿದೆ.
1. ತುಪ್ಪದ ತೆಂಗಿನಕಾಯಿ:
ತೆಂಗಿನಕಾಯಿ ಮೇಲಿನ ಸಿಪ್ಪೆಯನ್ನು ತೆಗೆದು ಆ ತೆಂಗಿನಕಾಯಿಯನ್ನು ಪಾಲಿಶ್ ಮಾಡಬೇಕು. ತೆಂಗಿನಕಾಯಿಯ ಒಂದು ಕಣ್ಣನ್ನು ತೆರವುಗೊಳಿಸಬೇಕು ಮತ್ತು ನೀರು ಬರಿದಾಗುವವರೆಗೆ ಚೂಪಾದ ವಸ್ತುವಿನಿಂದ ತಿರುಳನ್ನು ತೆಗೆಯಬೇಕು. ತುಪ್ಪವನ್ನು ತುಂಬುವ ಮೊದಲು ತೆಂಗಿನಕಾಯಿಯನ್ನು ಒಣಗಿಸಬೇಕಾಗಿರುವುದರಿಂದ ಇರುಮುಡಿ ಕಟ್ಟನ್ನು ಕಟ್ಟುವ ಕೆಲವು ಗಂಟೆಗಳ ಮೊದಲು ಇದನ್ನು ಮಾಡಬೇಕು.
2. ತುಪ್ಪ:
ಇರುಮುಡಿ ಕಟ್ಟುವಾಗ ತುಪ್ಪದ ತೆಂಗಿನಕಾಯಿಯ ಒಳಗೆ ತುಂಬಲು ತುಪ್ಪ ಅವಶ್ಯಕವಾಗಿದೆ.
3. ಅಕ್ಕಿ:
ಇರುಮುಡಿ ಹೊತ್ತವರು ಅಥವಾ ಅವರ ಕುಟುಂಬದ ಸದಸ್ಯರು ಅಕ್ಕಿಯನ್ನು ತುಂಬಬೇಕು. ಅಕ್ಕಿ ತುಂಬುವಾಗ ಅಯ್ಯಪ್ಪನಿಗೆ ಅರ್ಪಿಸುವ ಹಣವನ್ನೂ ಹಾಕಬೇಕು. ಅಕ್ಕಿ ತುಂಬಿದ ನಂತರ ತುಪ್ಪ ತೆಂಗಿನಕಾಯಿಯನ್ನು ಚೀಲದಲ್ಲಿ ಇರಿಸಬೇಕು.
4. ವೀಳ್ಯದೆಲೆ ಮತ್ತು ಅಡಿಕೆ
5. ಅರಿಶಿನ ಪುಡಿ
6. ವಿಭೂತಿ (ಪವಿತ್ರ ಬೂದಿ).
ತುಪ್ಪದ ತೆಂಗಿನಕಾಯಿಯನ್ನು ತೆರೆಯಲು ಕರ್ಪೂರವನ್ನು ಬೆಳಗಿಸುವ ರಾಶಿಯನ್ನು ರೂಪಿಸುತ್ತಾರೆ. ನಂತರ ಇದರಿಂದ ಸೃಷ್ಟಿಯಾದ ವಿಭೂತಿಯನ್ನು ಮನೆಗೆ ಪ್ರಸಾದವಾಗಿ ತೆಗೆದುಕೊಂಡು ಹೋಗುತ್ತಾರೆ.
7. ರೋಸ್ ವಾಟರ್ (ಪನೀರ್)
8. ಶ್ರೀಗಂಧದ ಪೇಸ್ಟ್ ಅಥವಾ ಚಕ್ಕೆ ಅಥವಾ ಪುಡಿ
9. ಜೇನು (ಒಂದು ಸಣ್ಣ ಬಾಟಲ್)
ದರ್ಶನದ ನಂತರವೇ ಮುನ್ ಮುಡಿ ತೆರೆಯಬಹುದು. ಮುನ್ ಮುಡಿಯನ್ನು ಗುರುಸ್ವಾಮಿಯವರೇ ತೆರೆಯಬೇಕು. ನೀವು ಒಬ್ಬರೇ ಹೋಗುತ್ತಿದ್ದರೆ, ಸಾಧ್ಯವಾದರೆ ಅದನ್ನು ತೆರೆಯಲು ಗುರುಸ್ವಾಮಿಯನ್ನು ಕೇಳಬಹುದು. ಜನರು ಖಂಡಿತವಾಗಿಯೂ ನಿಮಗೆ ಸಹಾಯ ಮಾಡುತ್ತಾರೆ. ನಂತರ ಒಂದು ತಟ್ಟೆಯಲ್ಲಿ ನೀವು ಕರ್ಪೂರವನ್ನು ಬೆಳಗಿಸಬೇಕು. ನೀವು ಪೂಜೆ ಮುಗಿಯುವವರೆಗೂ ಈ ಕರ್ಪೂರವನ್ನು ಇಡಬೇಕು. ನಿಮ್ಮೊಂದಿಗೆ ಸಾಕಷ್ಟು ಕರ್ಪೂರವನ್ನು ತೆಗೆದುಕೊಂಡು ಹೋಗುವುದು ಉತ್ತಮ.
ನಂತರ ನೀವು ತುಪ್ಪದ ತೆಂಗಾಯಿಯನ್ನು ಒಡೆಯಲು ಪ್ರಾರಂಭಿಸಬೇಕು ಮತ್ತು ತುಪ್ಪವನ್ನು ಒಂದು ಪಾತ್ರೆಯಲ್ಲಿ ಹಾಕಿಟ್ಟುಕೊಳ್ಳಬೇಕು. ನಂತರ ನೀವು ಅಯ್ಯಪ್ಪನ ಅಭಿಷೇಕಕ್ಕೆಂದು ಈ ತುಪ್ಪವನ್ನು ನೀಡಬಹುದು. ತುಪ್ಪವನ್ನು ತೆಂಗಿನಕಾಯಿಯಿಂದ ತೆಗೆದ ನಂತರ ಆ ಖಾಲಿ ತೆಂಗಿನಕಾಯಿಯನ್ನು ಟವೆಲ್ ಅಥವಾ ಪ್ರತ್ಯೇಕ ಪಾತ್ರೆಯಲ್ಲಿ ಇಟ್ಟುಕೊಂಡು ಅದನ್ನು ಅಗ್ನಿಕುಂಡದಲ್ಲಿ ಎಸೆಯಬೇಕು, 18 ಮೆಟ್ಟಿಲುಗಳ ಪಕ್ಕದಲ್ಲಿ ನೀವು ನೋಡುವ ಬೆಂಕಿಗೆ ಅದನ್ನು ಹಾಕಬೇಕು.
ಮಾಲಂಗಪುರಥು ಅಮ್ಮನ ದೇವಸ್ಥಾನದಲ್ಲಿ ವೀಳ್ಯದೆಲೆ, ಅಡಿಕೆ, ಅರಿಶಿನ, ಕುಂಕುಮ ಅದನ್ನೆಲ್ಲಾ ಅರ್ಪಿಸುವಿರಿ. ಈ ಅಮ್ಮನ ದೇವಸ್ಥಾನದಲ್ಲಿ ನೀವು ಒಂದು ತೆಂಗಿನಕಾಯಿಯನ್ನು ದೇವಸ್ಥಾನದ ಸುತ್ತಲೂ ಸುತ್ತಿ ಅಲ್ಲಿಯೇ ಬಿಡುತ್ತೀರಿ ಮತ್ತು ಅದನ್ನು ಒಡೆಯಬಾರದು. ಮೊದಲ ಬಾರಿಗೆ ಈ ಆಚರಣೆಯನ್ನು ಮಾಡಬೇಕು.
1. 2 ತೆಂಗಿನಕಾಯಿ:
ಅಯ್ಯಪ್ಪ ಸ್ವಾಮಿ ದೇವಾಲಯದ 18 ಮೆಟ್ಟಿಲುಗಳನ್ನು ಹತ್ತುವ ಮೊದಲು ಒಂದು ತೆಂಗಿನಕಾಯಿಯನ್ನು ಒಡೆಯಬೇಕು. ಶಬರಿ ಮಲೆಯಿಂದ ಹಿಂದಕ್ಕೆ ಬರುವಾಗ ಎರಡನೇ ತೆಂಗಿನಕಾಯಿಯನ್ನು ಒಡೆಯಬೇಕು. ಇದು ಶಬರಿಮಲೆ ಭೇಟಿಯ ಅಂತ್ಯವನ್ನು ಸೂಚಿಸುತ್ತದೆ.
2. ಅಕ್ಕಿ (ಮುನ್ ಮುಡಿ ಮತ್ತು ಪಿನ್ ಮಡಿ ನಡುವಿನ ತೂಕವನ್ನು ಸಮತೋಲನಗೊಳಿಸಲು ಸಹ ಬಳಸಲಾಗುತ್ತದೆ)
3. ಅವಲಕ್ಕಿ
4. ಬೆಲ್ಲ
5. ಒಣದ್ರಾಕ್ಷಿ
6. ಅಗರಬತ್ತಿ
7. ಕರ್ಪೂರ
8. ಕುಂಕುಮ
9. ಕಲ್ಲುಸಕ್ಕರೆ
ನೀವು ಶಬರಿ ಮಲೆಯಿಂದ ಮನೆಗೆ ಹಿಂದಿರುಗುವ ಸಮಯದಲ್ಲಿ ನಿಮ್ಮೊಂದಿಗೆ ಸ್ವಲ್ಪ ಪ್ರಮಾಣದ ಅಕ್ಕಿ, ಅಯ್ಯಪ್ಪನಿಗೆ ಅಭಿಷೇಕ ಮಾಡಿದ ತುಪ್ಪ ಮತ್ತು ಒಣದ್ರಾಕ್ಷಿಗಳನ್ನು ತರಬೇಕು. ಇದರಿಂದ ನೀವು ಮನೆಯಲ್ಲಿ ಪೊಂಗಲ್ ಅಥವಾ ಇನ್ನಾವುದೇ ಸಿಹಿಯನ್ನು ತಯಾರಿಸಿ, ದೇವರಿಗೆ ಅರ್ಪಿಸಿ ಮತ್ತು ನೀವು ಕೂಡ ಅದನ್ನು ಪ್ರಸಾದದ ರೂಪದಲ್ಲಿ ತೆಗೆದುಕೊಳ್ಳಬೇಕು. ಒಂದು ವೇಳೆ ತುಪ್ಪ ಹೆಚ್ಚಾಗಿದ್ದರೆ ನೀವು ಅದನ್ನು ದೇವರ ದೀಪ ಬೆಳಗಿಸಲು ಬಳಸಬಹುದು.
ಇರುಮುಡಿಯನ್ನು ತಲೆಯ ಮೇಲೆ ಹೊತ್ತುಕೊಂಡರೆ ಮಾತ್ರ ಶಬರಿ ಮಲೆಯಲ್ಲಿನ ಪವಿತ್ರವಾದ 18 ಮೆಟ್ಟಿಲುಗಳ ಮೇಲೆ ಹೆಜ್ಜೆ ಹಾಕಬಹುದು. ನೀವು 41 ದಿನಗಳ ಉಪವಾಸವನ್ನು ಪೂರ್ಣಗೊಳಿಸಿದರೆ ಮಾತ್ರ ಇರುಮುಡಿಯನ್ನು ಹೊತ್ತು ಹೋಗಬೇಕು. ನೀವು ಇರುಮುಡಿಯನ್ನು ಒಯ್ಯದಿದ್ದರೂ ನೀವು ದೇವಾಲಯಕ್ಕೆ ಭೇಟಿ ನೀಡಬಹುದು.
ಸಾಂಪ್ರದಾಯಿಕವಾಗಿ ಪಿನ್ ಮಡಿಯು ನಮಗೆ ಪ್ರಯಾಣಕ್ಕೆ ಬೇಕಾದ ಆಹಾರ ಪದಾರ್ಥಗಳು ಮತ್ತು ಇತರ ವಸ್ತುಗಳನ್ನು ಒಳಗೊಂಡಿರುತ್ತದೆ. ಮೇಲೆ ತಿಳಿಸಿದ ವಸ್ತುಗಳ ಜೊತೆಗೆ 3 ತೆಂಗಿನಕಾಯಿಯನ್ನೂ ಖರೀದಿಸಿ ಇಟ್ಟುಕೊಳ್ಳಿ. ಒಂದು ನೀವು ಮನೆಯಿಂದ ಹೊರಡುವಾಗ ನಿಮ್ಮ ಮನೆಯ ಹೊರಗೆ ಒಡೆಯುವುದು, ಮುಂದಿನದು ಪಂಪಾದ ಕನ್ನಿಮೂಲ ಗಣಪತಿ ದೇವಸ್ಥಾನವನ್ನು ತಲುಪಿದ ನಂತರ ಒಡೆಯಲು. ಮತ್ತು ಮೂರನೇ ತೆಂಗಿನಕಾಯಿಯನ್ನು ನೀವು ಮನೆಗೆ ಹಿಂದಿರುಗಿದ ನಂತರ ನಿಮ್ಮ ಮನೆಯ ಹೊರಗೆ ಒಡೆಯಲು ಬಳಸಲಾಗುತ್ತದೆ. ಈ ಪವಿತ್ರ ಪ್ರವಾಸವು ಅಯ್ಯಪ್ಪನಿಗೆ ಎಲ್ಲವನ್ನೂ ಬಿಟ್ಟುಕೊಡುವ ಆಧ್ಯಾತ್ಮಿಕ ಅರ್ಥವನ್ನು ಹೊಂದಿದೆ. ಈ ಕಾರಣಕ್ಕಾಗಿ ಜನರು 41 ದಿನಗಳ ಕಾಲ ಕಠಿಣ ವ್ರತವನ್ನು ಮಾಡಿ ಅಯ್ಯಪ್ಪ ಸ್ವಾಮಿಯ ದರ್ಶನವನ್ನು ಮಾಡುತ್ತಾರೆ.