ಬೆಂಗಳೂರು: ನನ್ನ ದೂರಿನ ಎಫ್ಐಆರ್ ಏಕೆ ಮಾಡಿಲ್ಲ? ಹಾಗಾಗಿ ನನಗೆ ಸಿಐಡಿ ತನಿಖೆ ಮೇಲೆ ವಿಶ್ವಾಸ ಇಲ್ಲ ಎಂದು ಎಂಎಲ್ಸಿ ಸಿ.ಟಿ ರವಿ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ವಾರ್ತಾ ಇಲಾಖೆ, ಡಿಪಿಎಆರ್ನಿಂದ ವೀಡಿಯೋ ಪಡೆದು ವಾಯ್ಸ್ ಸ್ಯಾಂಪಲ್ ವಿಚಾರವಾಗಿ ಪ್ರತಿಕ್ರಿಯಿಸಿ,
ನನ್ನ ವಾಯ್ಸ್ ಸ್ಯಾಂಪಲ್ ಮ್ಯಾಚ್ ಮಾಡಿಕೊಳ್ಳಲಿ. ಸಾರ್ವಜನಿಕವಾಗಿ ನಾನು ಮಾತನಾಡಿರುವುದು ಬಹಳಷ್ಟು ಇರುತ್ತದೆ. ಆದರೆ ಸಭಾಪತಿ, ಗೃಹ ಸಚಿವರಿಗೂ ಪತ್ರ ಬರೆದಿದ್ದಾರೆ.
ಚಳಿಗಾಲ ಮಾತ್ರವಲ್ಲ, ಬೇಸಿಗೆಯಲ್ಲೂ ಹಿಮ್ಮಡಿ ಒಡೆಯುತ್ತಾ..? ಕಾರಣವೇನು..? ಪರಿಹಾರಗಳು ಇಲ್ಲಿದೆ ನೋಡಿ
ಹೀಗಿದ್ದರೂ ವಿಡಿಯೋ ಎಲ್ಲಿಂದಲಾದ್ರೂ ತರಲಿ. ಇದು ರಾಜಕೀಯ ಒತ್ತಡದಿಂದ ಮಾಡುತ್ತಿರುವುದು ಸ್ಪಷ್ಟ. ನಾನು ಕೊಟ್ಟ ದೂರಿನ ಎಫ್ಐಆರ್ ಆಗಿಲ್ಲ. ಬೇರೆ ತನಿಖೆ ಮಾಡುತ್ತಾರೆ. ನನ್ನ ದೂರಿನ ಎಫ್ಐಆರ್ ಏಕೆ ಮಾಡಿಲ್ಲ? ಇದಕ್ಕೆ ಉತ್ತರ ಕೊಡಲಿ. ಸುಳ್ಳು ಕಥೆ ಸೃಷ್ಟಿಸಲು ಹೀಗೆ ಮಾಡುತ್ತಿದ್ದಾರೆ. ಹಾಗಾಗಿ ನನಗೆ ಸಿಐಡಿ ತನಿಖೆ ಮೇಲೆ ವಿಶ್ವಾಸ ಇಲ್ಲ ಎಂದು ಕಿಡಿಕಾರಿದರು.