ಹುಟ್ಟಿದ ಮಗುವಿನ ಕೈಗೆ ಬೆಳ್ಳಿಯ ಬಳೆ ಹಾಕುತ್ತಾರೆ? ಜೊತೆಗೆ ಕಾಲಿಗೆ ಬೆಳ್ಳಿ ಗೆಜ್ಜೆ ಹಾಕೋದು ಏಕೆ ಅಂತ ಮೊದಲು ಇದರ ಹಿಂದಿನ ವೈಜ್ಞಾನಿಕ ಕಾರಣ ತಿಳಿದುಕೊಳ್ಳಿ. ಅನೇಕ ಸಂಸ್ಕೃತಿಗಳಲ್ಲಿ, ವಿಶೇಷವಾಗಿ ಭಾರತದಲ್ಲಿ ವಿವಿಧ ಕಾರಣಗಳಿಗಾಗಿ ಮಕ್ಕಳಿಗೆ ಬೆಳ್ಳಿ ಬಳೆ ಹಾಗೂ ಗೆಜ್ಜೆಯನ್ನು ಹಾಕಲಾಗುತ್ತದೆ.
ಮಧುಮೇಹಿಗಳೇ ಗಮನಿಸಿ: ನಿತ್ಯ ಬೆಳಿಗ್ಗೆ ಈ ಚಹಾ ಸೇವಿಸಿದ್ರೆ ಎಂದಿಗೂ ಹೆಚ್ಚಾಗಲ್ಲ ಬ್ಲಡ್ ಶುಗರ್!
ಬೆಳ್ಳಿಯೂ ಮಂಗಳಕರ ಲೋಹವೆಂದು ಪರಿಗಣಿಸಲಾಗುತ್ತದೆ. ಬೆಳ್ಳಿ ವಸ್ತುವನ್ನು ಹಾಕಿಕೊಂಡ ಪ್ರತಿಯೊಬ್ಬರಿಗೂ ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಇಷ್ಟೇ ಅಲ್ಲದೇ ಹೀಗೆ ಬೆಳ್ಳಿಯು ಮಕ್ಕಳನ್ನು ದುಷ್ಟಶಕ್ತಿಗಳಿಂದ ಮತ್ತು ನಕಾರಾತ್ಮಕ ಶಕ್ತಿಗಳಿಂದ ರಕ್ಷಿಸುತ್ತದೆ ಎಂದು ನಂಬಲಾಗಿದೆ. ಬೆಳ್ಳಿ ಆಭರಣಗಳನ್ನು ಧರಿಸುವುದು ತಲೆಮಾರುಗಳಿಂದ ಬಂದ ಸಂಪ್ರದಾಯವಾಗಿದೆ. ಹೀಗಾಗಿ ಇದನ್ನು ಇಂದಿಗೂ ಸಹ ಅನುಸರಿಸಿಕೊಂಡು ಹೋಗಲಾಗುತ್ತಿದೆ.
ಬೆಳ್ಳಿಯು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಇದು ಬ್ಯಾಕ್ಟೀರಿಯಾ ಸೋಂಕುಗಳನ್ನು ತಡೆಯಲು ಸಹಾಯ ಮಾಡುತ್ತದೆ. ಬೆಳ್ಳಿಯು ದೇಹದ ಮೇಲೆ ತಂಪಾಗಿಸುವ ಪರಿಣಾಮವನ್ನು ಬೀರುತ್ತದೆ. ಅದರಲ್ಲೂ ಮಗುವನ್ನು ಶಾಂತಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ಮುಖ್ಯವಾಗಿ ಹೊಸದಾಗಿ ಹುಟ್ಟಿದ ಮಗುವಿನ ಮೇಲಿನ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಅಲ್ಲದೇ ಬೆಳೆಯುತ್ತಿರುವ ಮಕ್ಕಳ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.