ಕೊಪ್ಪಳ : ಕನ್ನಡ ಮತ್ತು ಸಂಸ್ಕೃತಿ ಸಚಿವರು ಕನ್ನಡ ಬರೆಯಲು ಒದ್ದಾಡಿದ ವಿಡಿಯೋವೊಂದು ಇದೀಗ ಭಾರೀ ವೈರಲ್ ಆಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ್ ತಂಗಡಗಿ ಕನ್ನಡ ಬರಿಯೋಕೆ ಹೋಗಿ, ಇದೀಗ ಟ್ರೋಲ್ ಗಳಿಗೆ ಗುರಿಯಾಗುತ್ತಿದ್ದಾರೆ.
ಕೊಪ್ಪಳ ಜಿಲ್ಲೆಯ ಕಾರಟಗಿಯ ಜೆಪಿ ನಗರದ ಅಂಗನವಾಡಿಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಭೇಟಿ ನೀಡಿದ್ದರು. ಈ ವೇಳೆ ಅಂಗನವಾಡಿ ಮಕ್ಕಳಿಗೆ ʼಶುಬವಾಗಲಿʼ ಎಂದು ಬರೆದಿದ್ದಾರೆ. ಕನ್ನಡದಲ್ಲಿ ಶುಭವಾಗಲಿ ಅಂತಾ ಬರೆಯೋದಕ್ಕೆ ಒದ್ದಾಡಿದ್ದಾರೆ ಎನ್ನುವ ವಿಡಿಯೋವೊಂದು ಭಾರೀ ವೈರಲ್ ಆಗ್ತಿದೆ. ಸಚಿವರಾದ ಶಿವರಾಜ್ ತಂಗಡಗಿ ಕನ್ನಡದಲ್ಲಿ ಶುಭವಾಗಲಿ ಅಂತ ಬರೆಯೋಕೆ ಸುಮಾರು ಹೊತ್ತು ತಗೊಂಡಿದ್ದು ಭಾರೀ ಟೀಕೆಗೆ ಒಳಗಾಗಿದೆ.
ಕನ್ನಡದಲ್ಲಿ ಶುಭವಾಗಲಿ ಅಂತಾ ಬರೆಯೋಕೆ ಮೊದಲಿಗೆ “ಶಬ” ಅಂತಾ ಬರೆದಿದ್ದಾರೆ.. ಅಲ್ಲಿದ್ದವರು “ಶುಭ” ಬರೀಬೇಕು ಅಂದಿದ್ದಾರೆ. ಜೊತೆಗೆ “ಭ” ಬರೆಯೋಕೆ ಚಿಕ್ಕ “ಬ” ಕೂಡ ಬಳಸಿದ್ದಾರೆ. ಸದ್ಯ ಒಂದೇ ಒಂದು ಪದವನ್ನು ಸಚಿವರು ಅಷ್ಟೊಂದು ಸಮಯ ತಗೊಂಡಿರೋದಕ್ಕೆ ಭಾರೀ ಟೀಕೆಯೂ ವ್ಯಕ್ತವಾಗಿದೆ. ಕನ್ನಡಿಗರ ಭಾಷಾ ಜ್ಞಾನದ ಬಗ್ಗೆ ಚರ್ಚೆಯಾಗುತ್ತಿದೆ.