ಬೆಂಗಳೂರು: ನೀವು ಮಾಡಿರುವ ತಪ್ಪಿಗೆ ಬಡವರಿಗೆ ಯಾಕೆ ತೊಂದರೆ ಕೊಡುತ್ತೀರಿ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹೊಸದಾಗಿ ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಸಬಹುದು ಎಂದು ಆಹಾರ ಸಚಿವರು ಹೇಳುತ್ತಾರೆ. ಬಿಪಿಎಲ್ ಕಾರ್ಡ್ ರದ್ದು ಮಾಡುವಾಗ ಅರ್ಜಿ ಕೊಟ್ಟಿದ್ದೀರಾ? ನೋಟಿಸ್ ಕೊಟ್ಟಿದ್ದೀರಾ? ನೀವು ಮಾಡಿರುವ ತಪ್ಪಿಗೆ ಬಡವರಿಗೆ ಯಾಕೆ ತೊಂದರೆ ಕೊಡುತ್ತೀರಿ ಎಂದು ಅಶೋಕ್ ಕಿಡಿಕಾರಿದರು.
ಸಾರ್ವಜನಿಕರೇ ಗಮನಿಸಿ.. ನಿಮ್ಮ ಬಳಿ 500 ರೂಪಾಯಿ ನೋಟು ಇದ್ಯಾ..? ಕ್ಷಣಮಾತ್ರದಲ್ಲಿ ನೀವು ಆಗ್ಬೋದು ಮಿಲಿಯನೇರ್!
ಅಲ್ಲದೆ, ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಸಿದವರಿಂದ ಲಂಚ ಪಡೆಯಲು ಇದು ಪಿತೂರಿ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಿ ನೌಕರರ ಬಿಪಿಎಲ್ ಕಾರ್ಡ್ ರದ್ದುಮಾಡಲಾಗಿದೆ ಎಂದು ಸಿಎಂ ಹೇಳುತ್ತಾರೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, 250 ಸರ್ಕಾರಿ ನೌಕರರ ಬಳಿ ಕಾರ್ಡ್ ಇತ್ತು ಎಂದರೂ ಅದ್ಹೇಗೆ 12 ಲಕ್ಷ ಬಿಪಿಎಲ್ ಕಾರ್ಡ್ ರದ್ದು ಮಾಡುವುದು ಎಂದು ಅಶೋಕ್ ಪ್ರಶ್ನಿಸಿದರು.