ಕಲಬುರಗಿ: ಬಿಜೆಪಿ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ ನಡೆದ್ರೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತುಟಿ ಬಿಚ್ಚುತ್ತಿಲ್ಲ ಅಂದ್ರೆ ಏನರ್ಥ ಅಂತ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಕಿಡಿ ಕಾರಿದ್ದಾರೆ. ಕಲಬುರಗಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀಗಳು,
ಜಿಲ್ಲೆಯಲ್ಲಿ ಇಷ್ಟೆಲ್ಲ ಘಟನೆ ನಡೆದ್ರೂ ಸಚಿವ ಪ್ರಿಯಾಂಕ್ ಖರ್ಗೆ ಮೌನವಹಿಸಿದ್ದು ನೋಡಿದ್ರೆ ದುಷ್ಟ ಶಕ್ತಿಗಳ ಅಟ್ಟಹಾಸಕ್ಕೆ ಪ್ರಚೋದನೆ ಕೊಟ್ಟಂತಾಗುತ್ತೆ ಅಂದ್ರು. ಹಿಂದೂಗಳನ್ನ ಗುರಿಯಾಗಿಸಿ ಒದ್ದು ಒಳಗೆ ಹಾಕ್ತೀನಿ ಅನ್ನೋರು ಮಾರಣಾಂತಿಕ ಹಲ್ಲೆ ನಡೆದ್ರೂ ಮೌನವಾಗಿದ್ದು ದುರಂತ ಅಂತ ಹೇಳಿದ್ರು..