ಬೆಂಗಳೂರು: ಪ್ರತಿಷ್ಠಿತ ಮಾಲ್ ಗಳಲ್ಲಿ ಇವಿ ವಾಹನಗಳಿಗೆ ಪಾರ್ಕಿಂಗ್ ಅವಕಾಶವಿಲ್ಲವೆಂದು ಆಕ್ರೋಶವ್ಯಕ್ತವಾಗಿದ್ದು ಈಗ ಎಲ್ಲೆಡೆ ಇದರ ಬಗ್ಗೆ ಚರ್ಚೆಗೆ ಗ್ರಾಸವಾಗಿದೆ.
ನಗರದ ಮಾಲ್ಗಳ ವಿರೋಧ ಇವಿ ಚಾಲಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ದೊಡ್ಡ ದೊಡ್ಡ ಮಾಲ್ಗಳಲ್ಲಿ ವಾಹನಗಳಿಗೆ ಬಹುಮಹಡಿ ಪಾರ್ಕಿಂಗ್ ಸೌಲಭ್ಯ ಇದೆ ಆದರೆ ಎಲೆಕ್ಟ್ರಿಕ್ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆಗಳು ಇಲ್ಲ ಎಂದು ಬೆಂಗಳೂರು ಮೂಲದ ಛಾಯಾಗ್ರಾಹಕರೊಬ್ಬರು ಎಕ್ಸ್ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
ಮಾಲ್ಗಳಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್ ಇರುವಾಗ EV ವಾಹನಗಳನ್ನು ಹೊರಗೆ ಬಿಸಿಲಿನಲ್ಲಿ ನಿಲುಗಡೆ ಮಾಡಲು ತಿಳಿಸಿರುವುದು ಇದೀಗ ಎಲ್ಲ ಅಕ್ರೋಶಕ್ಕೆ ಕಾರಣವಾಗಿದೆ. ಇತ್ತೀಚೆಗೆ ಇವಿಗಳನ್ನು ಸಾಗಿಸುವ ಟ್ರಕ್ನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ಮಾಲ್ಗಳ ಪಾರ್ಕಿಂಗ್ ಸ್ಥಳಗಳಲ್ಲಿ ಎಲೆಕ್ಟ್ರಿಕ್ ವೆಹಿಕಲ್ ನಿಲುಗಡೆಯಲ್ಲಿ ಮಾಡಲು ಅವಕಾಶ ಇಲ್ಲ ಎಂದು ಮಾಲ್ಗಳ ಸಿಬ್ಬಂದಿಗಳು ಹೇಳಿದ್ದಾರೆ
ಇನ್ನು ಏಪ್ರಿಲ್ 2022 ರಲ್ಲಿ, ಕಂಪನಿಯ ಹೇಳಿಕೆಯ ಪ್ರಕಾರ, ದೇಶದ ವಿವಿಧ ಭಾಗಗಳಲ್ಲಿ ಇವಿ ವಾಹನಗಳಿಗೆ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಓಲಾ ಎಲೆಕ್ಟ್ರಿಕ್ ತನ್ನ 1,441 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಹಿಂಪಡೆಯುವುದಾಗಿ ಹೇಳಿದೆ. ಒಕಿನಾವಾ ಆಟೋಟೆಕ್ ಸುಮಾರು 3,000 ವಾಹನಗಳನ್ನು ಹಿಂಪಡೆದಿದೆ.