ಮಂಡ್ಯ: ಬಿಜೆಪಿಯವರು ಹೇಳಿದರೆ ಕುಮಾರಸ್ವಾಮಿ (H.D.Kumaraswamy) ಚಡ್ಡಿನೂ ಹಾಕ್ತಾರೆ, ಮಾಲೆನೂ ಎಂದಿದ್ದ ಸಚಿವ ಚಲುವರಾಯಸ್ವಾಮಿಗೆ (Chaluvaraya Swamy) ಜೆಡಿಎಸ್ ನಾಯಕರು ಟಾಂಗ್ ನೀಡಿದ್ದಾರೆ. ಚಲುವರಾಯಸ್ವಾಮಿಗೆ ಮಂಡ್ಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ತಮ್ಮದೇ ಶೈಲಿನಲ್ಲಿ ವಾಗ್ದಾಳಿ ನಡೆಸಿದ್ದರು. ಇಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ ಸುರೇಶ್ಗೌಡ (Suresh Gowda) ವಾಗ್ದಾಳಿ ನಡೆಸಿದ್ದಾರೆ.
Kambala: ಬೆಂಗಳೂರಲ್ಲಿ ಅದ್ದೂರಿಯಾಗಿ ನ. 25, 26ರಂದು ನಡೆಯಲಿರುವ ನಮ್ಮ ಕಂಬಳ: ಹೇಗಿದೆ ಸಿದ್ಧತೆ!
ಚಲುವರಾಯಸ್ವಾಮಿ ಮೊದಲೇ ಚಡ್ಡಿ ಹಾಕಲ್ಲ. ಇವರಿಗೆ ಯಾರು ಹೇಳಬೇಕು ಚಡ್ಡಿ ಹಾಕು ಅಂತ ಎಂದು ತಿರುಗೇಟು ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಅಥವಾ ಸಿದ್ದರಾಮಯ್ಯ ಹೇಳಬೇಕಾ? ಇವರಿಗೆ ಯಾಕೆ ನಮ್ಮ ವಿಷಯ. ಇವರದ್ದು ಎಷ್ಟಿದೆ ಅಷ್ಟು ನೋಡಿಕೊಳ್ಳಬೇಕು. ಈತನಿಗೆ ಪ್ಯಾಂಟ್ ಹಾಕೋದು ಕಲಿಸಿದ್ದವರು ಯಾರು? ಚಲುವರಾಯಸ್ವಾಮಿಗೆ ಚಡ್ಡಿ ಹಾಕಿದ್ರೆ ತೊಂದರೆ ಆಗಬಹುದು. ಅದಕ್ಕೆ ಆತ ಚಡ್ಡಿ ವಿಚಾರ ಹೇಳ್ತಾ ಇದ್ದಾನೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.