ಯಶ್ ಅವರನ್ನು ಅಭಿಮಾನಿಗಳು ಬಾಸ್ ಎಂದು ಕರೆಯುತ್ತಾರೆ. ಆದರೆ, ಯಶ್ ಅವರು ಒಂದು ವ್ಯಕ್ತಿಗೆ ಬಾಸ್ ಎಂದು ಕರೆಯುತ್ತಾರೆ. ಅವರು ಯಶ್ ಜೀವನದಲ್ಲಿ ತುಂಬಾನೇ ಪ್ರಮುಖ ಪಾತ್ರವಹಿಸಿದ್ದಾರೆ.
ಯಶ್ ಅವರ ಜೀವನದಲ್ಲಿ ಅವರ ತಂದೆ-ತಾಯಿ ಸಾಕಷ್ಟು ಪಾತ್ರವಹಿಸಿದ್ದಾರೆ. ಯಶ್ ತಂದೆ ಈ ಮೊದಲು ಬಸ್ ಡ್ರೈವರ್ ಆಗಿದ್ದರು. ಯಶ್ ಅವರು ತಂದೆಯನ್ನು ಸಾಕಷ್ಟು ಗೌರವಿಸುತ್ತಾರೆ. ಅವರು ತಂದೆಗೆ ಬಾಸ್ ಎಂದು ಈ ಮೊದಲು ಕರೆದಿದ್ದರು. ಆ ಸಂದರ್ಭದ ವಿಡಿಯೋ ಈಗ ವೈರಲ್ ಆಗಿದೆ.
ಮಗ ಹಾಳಾಗಬಾರದು ಅನ್ನೋದು ತಂದೆಯ ಆಸೆ. ಗೋಲಿ ಆಡಿ ಬೆಳೆದವರು ನಾವು. ಇದನ್ನು ಆಡಬಾರದು ಎಂಬುದು ನನ್ನ ತಂದೆಯ ಉದ್ದೇಶ ಆಗಿತ್ತು. ಹಾಗೆ ಆದ್ರೆ ಮಗಳ ಹಾಳಾಗ್ತಾನೆ ಎಂಬ ಭಯ ಅವರದ್ದಾಗಿತ್ತು. ನನ್ನ ತಂದೆಯನ್ನು ಫ್ರೆಂಡ್ಸ್ ಟೈಗರ್ ಎಂದೇ ಕರೆಯುತ್ತಾ ಇದ್ದರು. ಒಂದು ದಿನ ತಂದೆ ಡ್ಯೂಟಿಗೆ ಹೋಗಿದ್ದರು. ನಾನು ಗೋಲಿ ಆಡ್ತಾ ಇದ್ದೆ. ಸಾಕಷ್ಟು ಗೆಲ್ಲುತ್ತಾ ಇದ್ದೆ. ಆಗ ನನಗೆ ಏಟು ಬಿತ್ತು, ನೋಡಿದರೆ ಬಾಸ್ ನಿಂತಿದ್ದರು’ ಎಂದಿದ್ದರು ಯಶ್. ಈ ಮೂಲಕ ತಂದೆಗೆ ಅವರು ಬಾಸ್ ಎಂದು ಸಂಭೋದಿಸಿದ್ದರು.