ಇಂಡಿಯನ್ ಪ್ರೀಮಿಯರ್ ಲೀಗ್ ನ ಸೀಜನ್ 17 ರ ಪಾಯಿಂಟ್ಸ್ ಟೇಬಲ್ನಲ್ಲಿ ಆರ್ಸಿಬಿ ಆರನೇ ಸ್ಥಾನದಲ್ಲಿದೆ. ಆಡಿದ 3 ಪಂದ್ಯದಲ್ಲಿ ಎರಡು ಸೋಲು, ಒಂದು ಜಯ ಕಂಡು 2 ಅಂಕ ಪಡೆದು ಕೊಂಡಿದೆ. ಇವರ ನೆಟ್ ರನ್ರೇಟ್ -0.711 ಆಗಿದೆ. ಅಂಕಪಟ್ಟಿಯಲ್ಲಿ ಮೇಲೇಳಲು ಬೆಂಗಳೂರು ಮುಂದಿನ ಮ್ಯಾಚ್ ಗೆಲ್ಲಲೇ ಬೇಕಿದೆ. ಹಾಗಾದರೆ ಆರ್ಸಿಬಿ ಮುಂದಿನ ಟಾರ್ಗೆಟ್ ಯಾರು?, ಪಂದ್ಯ ಎಲ್ಲಿ ನಡೆಯಲಿದೆ?, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮುಂದಿನ ಪಂದ್ಯವನ್ನು ಲಕ್ನೋ ಸೂಪರ್ ಜೇಂಟ್ಸ್ ವಿರುದ್ಧ ಆಡಲಿದೆ.
ಬೆಂಗಳೂರು ಮತ್ತು ಲಕ್ನೋ ನಡುವಿನ 2024 ರ ಐಪಿಎಲ್ ಪಂದ್ಯ ಏಪ್ರಿಲ್ 2 ಮಂಗಳವಾರದಂದು ನಡೆಯಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು-ಲಕ್ನೋ ಸೂಪರ್ ಜೇಂಟ್ಸ್ ನಡುವಿನ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.
.