ಶಿಗ್ಗಾವಿ:- ಇತ್ತೀಚೆಗೆ ಕರ್ನಾಟಕದ ಶಿಗ್ಗಾವಿ, ಸಂಡೂರು ಮತ್ತು ಚನ್ನಪಟ್ಟಣ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದ್ದು, ಇಂದು ಚುನಾವಣೆ ಫಲಿತಾಂಶ ಹೊರ ಬೀಳಲಿದೆ. ಮೂರು ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿರುದ್ಧ ಕಾಂಗ್ರೆಸ್ ಪಕ್ಷ ತೀವ್ರ ಪೈಪೋಟಿ ಒಡ್ಡಿದ್ದು, ಯಾರಿಗೆ ಅಧಿಕಾರ ಸಿಗಲಿದೆ ಎಂಬ ಸಹಜವಾಗಿ ಮನೆ ಮಾಡಿದೆ.
ಉಪಚುನಾವಣೆ ರಿಸಲ್ಟ್: ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರಿನಲ್ಲಿ ಮತ ಎಣಿಕೆ ಆರಂಭ!
ಇನ್ನೂ ಮೂರು ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಫಲಿತಾಂಶ ಕೆಲವೇ ಗಂಟೆಗಳಲ್ಲಿ ಹೊರಬೀಳಲಿದ್ದು, ಮತ ಎಣಿಕೆ ಆರಂಭವಾಗಿದ್ದು, ಅಂಚೆ ಮತ ಎಣಿಕೆ ಮುಗಿದಿದೆ.
ಶಿಗ್ಗಾವಿಯಲ್ಲಿ ಆರಂಭಿಕ ಹಂತದ ಮತ ಎಣಿಕೆಯಲ್ಲಿ ಎನ್ಡಿಎ ಅಭ್ಯರ್ಥಿ ಭರತ್ ಬೊಮ್ಮಾಯಿ ಮುನ್ನಡೆ ಸಾಧಿಸಿದ್ದಾರೆ. ಇನ್ನು ಸಂಡೂರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇ.ಅನ್ನಪೂರ್ಣ ಮುನ್ನಡೆ ಸಾಧಿಸಿದ್ದಾರೆ.
ಇನ್ನೂ ಚನ್ನಪಟ್ಟಣದಲ್ಲಿ ಈ ಬಾರಿ ಅತ್ಯಧಿಕ ಮತದಾನ 88.80% ರಷ್ಟು ಮತದಾನ ನಡೆದರೆ, ಶಿಗ್ಗಾವಿಯಲ್ಲಿ 80.48%ರಷ್ಟು ಹಾಗೂ ಸಂಡೂರಿನಲ್ಲಿ 76.24ರಷ್ಟು ಮತದಾನ ನಡೆದಿದೆ. ನಿಖಿಲ್ ಕುಮಾರಸ್ವಾಮಿ ವಿರುದ್ಧ ಸಿಪಿ ಯೋಗೇಶ್ವರ (ಚನ್ನಪಟ್ಟಣ), ಭರತ್ ಬೊಮ್ಮಾಯಿ ವಿರುದ್ಧ ಯಾಸಿರ್ ಖಾನ್ ಪಠಾಣ್ (ಶಿಗ್ಗಾವಿ), ಬಂಗಾರು ಹನುಮಂತು ವಿರುದ್ಧ ಅನ್ನಪೂರ್ಣ (ಸಂಡೂರು) ಸ್ಪರ್ಧಿಸಿದ್ದಾರೆ. ಮತದಾರರು ಯಾರಿಗೆ ಅಧಿಕಾರ ನೀಡಲಿದ್ದಾರೆ ಎಂದು ಇಂದು ತಿಳಿಯಲಿದೆ.