ಬೆಂಗಳೂರು:- ನಾವು ರಾಜಕೀಯ ಸಭೆ ಮಾಡಿಲ್ಲ, ನಮ್ಮ ಮೇಲಿನ ಆಪಾದನೆಯಿಂದ ಬೇಜಾರಾಗಿದೆ ಎಂದು ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.
ರೋಚಕ ಘಟ್ಟಕ್ಕೆ ತಲುಪಿದ ದರ್ಶನ್ ಅರ್ಜಿ ವಿಚಾರಣೆ: ಸೋಮವಾರ ನಿರ್ಧಾರವಾಗಲಿದೆ ಡಿ ಗ್ಯಾಂಗ್ ಬೇಲ್ ಭವಿಷ್ಯ!
ಈ ಸಂಬಂಧ ಮಾತನಾಡಿದ ಅವರು,ನಾನಾಗಲಿ, ಸತೀಶ್ ಜಾರಕಿಹೊಳಿ ಮತ್ತು ಮಹದೇವಪ್ಪ ಅವರಾಗಲಿ ಮುಖ್ಯಮಂತ್ರಿ ಪದವಿ ಬಗ್ಗೆ ಯಾವತ್ತು ಚರ್ಚೆ ಮಾಡಿಲ್ಲ ಎಂದರು.
ಮಾಧ್ಯಮ ಸ್ನೇಹಿತರು ಕೇಳಿದಾಗ ಐದು ವರ್ಷ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಮುಂದುವರೆಯುತ್ತಾರೆ ಎಂದು ಅನೇಕ ಸಲ ಹೇಳಿದ್ದೇನೆ. ನಿನ್ನೆ ಮೈಸೂರಿನಲ್ಲಿಯೂ ಸಹ ಇದೇ ಮಾತನ್ನು ಹೇಳಿದ್ದೇನೆ. ನಾವು ಯಾರು ಸಹ ಮುಖ್ಯಮಂತ್ರಿಯನ್ನು ಬದಲಾಯಿಸಿ, ಬೇರೆಯವರನ್ನು ಮಾಡಿ ಎಂದು ಮಾತನಾಡಿಲ್ಲ ಎಂದರು.
ಇನ್ಮುಂದೆ ನಾನು ವೈಯಕ್ತಿಕವಾಗಿ ಮುಖ್ಯಮಂತ್ರಿ ವಿಚಾರದಲ್ಲಿ ನೀವು ಕೇಳಿದರು ಪ್ರತಿಕ್ರಿಯಿಸುವುದಿಲ್ಲ. ಕೆಲವು ವಿಚಾರಗಳಲ್ಲಿ ಅಗತ್ಯ ಇದ್ದರೆ ಭೇಟಿ ಮಾಡುತ್ತೇವೆ. ಅನವಶ್ಯಕವಾಗಿ ಡಿನ್ನರ್ ಮೀಟಿಂಗ್, ರಾಜಕೀಯ ಸಭೆಗಳನ್ನು ನಾವು ಈವರೆಗೂ ಮಾಡಿಲ್ಲ. ಮುಂದೆಯೋ ಮಾಡೋದಿಲ್ಲ. ಇದು ನನ್ನ ಸ್ಪಷ್ಟೀಕರಣ. ಏನೂ ಇಲ್ಲದೇ ಅಪಾದಿತರ ಸ್ಥಾನದಲ್ಲಿ ನಿಲ್ಲಿಸಿದರೆ ನಮಗೆ ಬೇಜಾರಾಗುವುದಿಲ್ಲವೇ? ನಾವು ಜವಾಬ್ದಾರಿ ಇರುವವರು. ಸುಮ್ಮನೇ ಹುಡುಗಾಟಿಕೆ ಮಾಡುವುದಿಲ್ಲ. ನಾನು ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿ, ನನಗೂ ಜವಾಬ್ದಾರಿ ಇದೆ ಎಂದು ಹೇಳಿದರು.
ವಿಪಕ್ಷ ನಾಯಕ ಆರ್.ಅಶೋಕ್ ಆರೋಪದ ಕುರಿತು ಪ್ರತಿಕ್ರಿಯಿಸಿ, ಸಿದ್ದಗಂಗಾ ಮಠಕ್ಕೂ ನಮಗೂ ಇರುವ ಸಂಬಂಧವೇ ಬೇರೆ. ಇತ್ತೀಚೆಗೆ ನಾನು ಮಠಕ್ಕೆ ಹೋಗೇ ಇಲ್ಲ. ಸಿದ್ದಗಂಗಾ ಮಠಕ್ಕೆ ಹೋದರೆ ಸ್ವಾಮೀಜಿಯವರ ಗದ್ದುಗೆಗೆ ಮತ್ತು ಸಿದ್ದಲಿಂಗ ಸ್ವಾಮೀಜಿಯವರಿಗೆ ನಮಸ್ಕರಿಸಿ ಬರುತ್ತೇನೆ. ನನ್ನ ತಂದೆಯವರ ಕಾಲದಿಂದ ದೊಡ್ಡ ಸ್ವಾಮೀಜಿಯವರು ನಮಗೆಲ್ಲ ಆದರ್ಶ. ಮಠಕ್ಕೆ ಹೋಗಿ ರಾಜಕೀಯ ಮಾತಾಡುವುದಿಲ್ಲ. ಸಿದ್ದಗಂಗಾ ಮಠಕ್ಕೂ ನಮ್ಮ ಕುಟುಂಬಕ್ಕೂ ಅಪಾರವಾದ ಸಂಬಂಧ. ಮಠಕ್ಕೆ ಹೋದಾಗಲೆಲ್ಲ ಮುಖ್ಯಮಂತ್ರಿ ಆಗಬೇಕೆಂದು ಪೂಜೆ ಮಾಡುವುದಿಲ್ಲ ಎಂದು ನುಡಿದರು.